Advertisement
ಪ್ರಯಾಣಿಕರ ಬೇಡಿಕೆಯನ್ನು ನೈಋತ್ಯ ರೈಲ್ವೇ ಹಾಗೂ ದಕ್ಷಿಣ ರೈಲ್ವೇ ಅಧಿಕಾರಿಗಳಿಗೆ ಮನವರಿಕೆ ಮಾಡಲು ದಕ್ಷಿಣ ಕನ್ನಡ ರೈಲು ಬಳಕೆದಾರರ ಸಮೂಹ ಸಹಿ ಅಭಿಯಾನ ನಡೆಸುತ್ತಿದ್ದು, ಈಗಾಗಲೇ 520 ಮಂದಿ ಅಭಿಯಾನದಲ್ಲಿ ಭಾಗವಹಿಸಿದ್ದಾರೆ. ನ. 15ರ ವರೆಗೆ ನಡೆಯಲಿರುವ ಅಭಿಯಾನದಲ್ಲಿ ಇನ್ನಷ್ಟು ಮಂದಿ ಪಾಲ್ಗೊಳ್ಳಬೇಕಿದೆ. ಆಗ ಮಾತ್ರ ಅಭಿಯಾನಕ್ಕೆ ಯಶಸ್ಸು ದೊರೆಯಲಿದ್ದು, ಅಧಿಕಾರಿಗಳೂ ಜನಾಭಿಪ್ರಾಯವನ್ನು ಪರಿಗಣಿಸಿ ಸ್ಪಂದಿಸುವ ಸಾಧ್ಯತೆಯಿದೆ. ಆದ್ದರಿಂದ ರೈಲ್ವೇ ಪ್ರಯಾಣಿಕರು ಹಾಗೂ ಸಾರ್ವಜನಿಕರು ಅಭಿಯಾನದಲ್ಲಿ ಭಾಗಿಯಾಗಿ, ಅಭಿಯಾನವನ್ನು ಬೆಂಬಲಿಸಬೇಕು ಎಂದು ದಕ್ಷಿಣ ಕನ್ನಡ ರೈಲು ಬಳಕೆದಾರರ ಸಮೂಹ ಮನವಿ ಮಾಡಿದೆ.
ವಿಜಯಪುರದಿಂದ ಸಂಜೆ 4 ಗಂಟೆಗೆ ಹೊರಟು ರಾತ್ರಿ 9.30ಕ್ಕೆ ಹುಬ್ಬಳ್ಳಿ, ಬೆಳಗ್ಗೆ 9.30ಕ್ಕೆ ಮಂಗಳೂರು ಸೆಂಟ್ರಲ್ ತಲುಪುವುದು. ಸಂಜೆ 5ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು ಮರುದಿನ ಬೆಳಗ್ಗೆ 5ಕ್ಕೆ ಹುಬ್ಬಳ್ಳಿ, 10.30ಕ್ಕೆ ವಿಜಯಪುರಕ್ಕೆ ತಲುಪುವುದು. ವೇಳಾಪಟ್ಟಿಯ ಪರಿಷ್ಕರಣೆ ಜತೆಗೆ ಮಂಗಳೂರು ಸೆಂಟ್ರಲ್ ತನಕ ವಿಸ್ತರಿಸಲು ರೈಲ್ವೇ ಇಲಾಖೆ ಮನಸ್ಸು ಮಾಡಬೇಕು ಎನ್ನುವುದು ಸಹಿ ಅಭಿಯಾನದ ಉದ್ದೇಶ. ಪ್ರತಿದಿನ ಸಾವಿರಾರು ಜನರನ್ನು ಕರಾವಳಿ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಜತೆ ಸಂಪರ್ಕಿಸುತ್ತದೆ. ಆದರೆ ಈ ರೈಲಿನ ವೇಳಾಪಟ್ಟಿ ಪ್ರಯಾಣಿಕರಿಗೆ ಅನುಕೂಲವಲ್ಲದ ಕಾರಣ ವೇಳಾಪಟ್ಟಿಯನ್ನು ಪರಿಷ್ಕರಿಸಬೇಕು ಹಾಗೂ ಮಂಗಳೂರಿನ ಮುಖ್ಯ ರೈಲು ನಿಲ್ದಾಣವಾದ ಮಂಗಳೂರು ಸೆಂಟ್ರಲ್ ತನಕ ಓಡಿಸಬೇಕೆಂಬ ಎನ್ನುವುದು ಬಳಕೆದಾರರ ಆಗ್ರಹ.