Advertisement

ಪಾರಂಪರಿಕ ಮರ ಪ್ರವಾಸಿ ತಾಣವಾಗಲಿ

07:37 PM Nov 15, 2019 | Naveen |

ವಿಜಯಪುರ: ಐತಿಹಾಸಿಕ ಸ್ಮಾರಕಗಳಂತೆ ನಗರದಲ್ಲಿ ಆದಿಲ್‌ ಶಹಿ ಅರಸರು ವಿದೇಶಗಳಿಂದ ತಂದು ನೆಟ್ಟು, ಬೆಳೆಸಿರುವ ಪ್ರಾಚೀನ ಗಿಡಮರಗಳಿಗೂ ಭೇಟಿಗೂ ಪ್ರವಾಸಿಗರು ಬರುವಂತೆ ಉತ್ತೇಜಿಸುವ ಕಾರ್ಯಯೋಜನೆ ರೂಪಿಸಬೇಕಿದೆ ಎಂದು ವೃಕ್ಷ ಅಭಿಯಾನ ಪ್ರತಿಷ್ಠಾನ ಸಂಚಾಲಕ ಪ್ರೊ| ಮುರುಗೇಶ ಪಟ್ಟಣಶೆಟ್ಟಿ ಹೇಳಿದರು.

Advertisement

ವಿಜಯಪುರದ ಸೈಕ್ಲಿಂಗ್‌ ಕ್ಲಬ್‌ ನೇತೃತ್ವದಲ್ಲಿ ಯೋಗಾಪುರದಲ್ಲಿರುವ ಐತಿಹಾಸಿಕ ಬಾವೋಬಾಬ್‌ ಕುರಿತಾದ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮರದ ಐತಿಹಾಸಿಕ ಅಂಶ ಹಾಗೂ ವಿಶೇಷತೆಗಳ ಕುರಿತು ಉಪನ್ಯಾಸ ನೀಡಿದ ಅವರು, ವಿಜಯಪುರದಲ್ಲಿರುವ ಈ ಅಪರೂಪದ ಮರ ಇಡೀ ಭಾರತದಲ್ಲಿ 27-30 ಈ ಪ್ರಭೇದದ ಮರಗಳಿವೆ. ಇದರಲ್ಲಿ ಮಹಾರಾಷ್ಟ್ರ, ಗುಜರಾತ್‌, ತಮಿಳನಾಡು, ಆಂಧ್ರ, ಗೋವಾಗಳಲ್ಲಿ ತಲಾ 2, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರಗಳಲ್ಲಿ ತಲಾ 1 ಮರ ಇದೆ ಎಂದು ವಿವರಿಸಿದರು.

ಅಡಾನ್ಸೊನಿಯಾ ಡಿಜಿಟಾಟಾ ಎಂಬ ಜೀವಶಾಸ್ತ್ರ ನಾಮಹೊಂದಿರುವ ಈ ಮರ 369 ವರ್ಷ ಹಳೆಯದಾಗಿದೆ. ಆದಿಲ್‌ಶಾಹಿ ಅರಸರು ಟರ್ಕಿಯಿಂದ ಈ ಮರವನ್ನು ತಂದು ಬೆಳೆಸಿದ್ದರು. ವಿಜಯಪುರದಲ್ಲಿ ಇಬ್ರಾಹಿಂರೋಜಾ ಹಿಂಭಾಗದಲ್ಲಿ ಇರುವ ಈ ಭವ್ಯ ಮರ ಇತ್ತೀಚೆಗೆ ನೆಲಕ್ಕುರುಳಿ, ನಾಶವಾಗಿದೆ. ಸದ್ಯ ವಿಜಯಪುರ ನಗರದ ಯೋಗಾಪುರದ ಸಯ್ಯದ್‌ ಶಾ ಇಮಾಮುದ್ದೀನ್‌ ಖಾದ್ರಿ ದರ್ಗಾದ ಹತ್ತಿರ ಇರುವ ಈ ಪ್ರಾಚೀನ ಮರ ಮುಂದಿನ ದಿನಗಳಲ್ಲಿ ಪ್ರವಾಸಿಗರ ತಾಣವಾಗಿ ಅಭಿವೃದ್ಧಿ ಹೊಂದಬೇಕು ಎಂದರು.

ಸೈಕ್ಲಿಂಗ್‌ ಕ್ಲಬ್‌ ಸಂಚಾಲಕ ಡಾ| ಮಹಾಂತೇಶ ಬಿರಾದಾರ ಮಾತನಾಡಿ, ಆದಿಲ್‌ಶಾಹಿ ಅರಸರು ವೃಕ್ಷ ಪ್ರೇಮಿಗಳಾಗಿದ್ದರು. ಅವರ ಉದ್ಯಾನವನಗಳಲ್ಲಿ, ಭವ್ಯ ಮಹಲ್‌ಗ‌ಳ ಸುತ್ತ ಈ ರೀತಿಯ ವಿಶೇಷ ತಳಿಗಳನ್ನು ವಿವಿಧ ದೇಶಗಳಿಂದ ತಂದು ನೆಟ್ಟು ಬೆಳೆಸಿದ್ದಾರೆ. ಅವರು ಮಕ್ಕಳನ್ನು ನೋಡುವ ರೀತಿ ಮರಗಳನ್ನು ಪ್ರೀತಿಸುತ್ತಿದ್ದರು. ಪ್ರತಿ ವರ್ಷವು ಸಸಿಗಳ ಉತ್ಸವ ಏರ್ಪಡಿಸುತ್ತಿದ್ದರು ಎಂದು ವಿವರಿಸಿದರು.

ಡಾ| ಶಂಭು ಕರ್ಪೂರಮಠ ಮಾತನಾಡಿ, ಈ ಮರದ ಎಲೆಗಳು, ಬೀಜಗಳು ವಿಶೇಷ ಔಷ ಧೀಯ ಗುಣಗಳನ್ನು ಹೊಂದಿದ್ದು, ಮಲೇರಿಯಾ, ಕ್ಷಯರೋಗ, ಜ್ವರ, ಅತೀಸಾರ, ರಕ್ತಹೀನತೆ ಸೇರಿದಂತೆ ಹಲವು ರೋಗಗಳಲ್ಲಿ ಬಳಕೆ ಮಾಡಬಹುದಾಗಿದ್ದು, ಮನುಷ್ಯನ ರೋಗ ಪ್ರತಿರೋಧಕ ಶಕ್ತಿಯನ್ನು ಸಹ ಇದು ಹೆಚ್ಚಿಸುತ್ತದೆ” ಎಂದರು. ಶಿವನಗೌಡ ಪಾಟೀಲ್‌, ಸುನೀಲ ಮಂತ್ರಿ, ಮಹಾಂತೇಶ ಹೊಸೂರ, ವಿಶಾಲ ಹಿರಾಸ್ಕರ್‌, ಸಿದ್ದು ನಾಯ್ಕೊಡಿ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next