Advertisement
ಮಾಜಿ ಶಾಸಕ ಕಾಶಪ್ಪನವರ ಅವರಿಗೆ ಬೆಂಗಳೂರಿನ ಜನ ಪ್ರತಿನಿಧಿಗಳ ನ್ಯಾಯಾಲಯದಿಂದ ವಿಚಾರಣೆಗೆ ಹಾಜರಾಗುವ ಜಾಮೀನುಸಹಿತ ವಾರೆಂಟ್ ಜಾರಿಯಾಗಿದ್ದು, ಅದನ್ನು ತಲುಪಿಸಲು ಪೊಲೀಸರು ಅವರ ಮನೆಗೆ ತೆರಳಿದ್ದರು. ಇದಕ್ಕೂ ಮುಂಚೆ ಕಾಶಪ್ಪನವರ ಮನೆಯಲ್ಲಿ ಕೌಟುಂಬಿಕ ಜಗಳ ನಡೆದಿದೆ ಎಂದು ಅಕ್ಕ-ಪಕ್ಕದ ಮನೆಯವರು ಫೋನ್ ಕಾಲ್ ಮಾಡಿ, ದೂರಿದ್ದರು. ಹೀಗಾಗಿ ನಾವು ಮನೆಗೆ ಬಂದಿದ್ದೇವೆ ಎಂದು ಪೊಲೀಸರು ಈ ವೇಳೆ ಕಾಶಪ್ಪನವರ್ ಅವರಿಗೆ ತಿಳಿಸಿದ್ದರು.
Related Articles
Advertisement
ಇದಕ್ಕೆ ಮತ್ತಷ್ಟು ಗರಂ ಆದ ಕಾಶಪ್ಪನವರ್, ನನ್ನ ಮೇಲೆ ಒಂದೇ ತಿಂಗಳಲ್ಲಿ ನಾಲ್ಕು ಪ್ರಕರಣ ದಾಖಲಿಸಿದ್ದೀರಿ. ನನಗೆ ಜೀವ ಬೆದರಿಕೆ ಇದೆ ಎಂದು ನಾನು ದೂರು ಕೊಟ್ಟರೂ ಈ ವರೆಗೆ ಯಾರನ್ನೂ ವಿಚಾರಣೆ ನಡೆಸಿಲ್ಲ. ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದಂತೆ ನೀವೆಲ್ಲ ಕೇಳುತ್ತಿದ್ದೀರಿ. ತಾಲೂಕಿನಲ್ಲಿ ದ್ವೇಷದ ರಾಜಕೀಯ ಮಾಡುತ್ತಿದ್ದೀರಿ. ಇದಕ್ಕೆ ನಾನು ಜಗ್ಗುವುದಿಲ್ಲ. ನನ್ನನ್ನು ಬಂಧಿಸಿ ನೋಡಿ ಎಂದರು.
ಈ ವೇಳೆ ಕಾಶಪ್ಪನವರ ಮತ್ತು ಪೊಲೀಸರ ಮಧ್ಯೆ ತೀವ್ರ ವಾಗ್ವಾದ ನಡೆಯಿತು. ಬಳಿಕ ಪೊಲೀಸರು, ಬೆಂಗಳೂರಿನಿಂದ ಬಂದಿದ್ದ ವಾರಂಟ್ ಪ್ರತಿ ನೀಡಿ, ಅಲ್ಲಿಂದ ಮರಳಿದರು.