ಬಳ್ಳಾರಿ: ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ನ್ಯಾಯಾಲಯದ ಆವರಣದಲ್ಲೇ ವಕೀಲರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಶನಿವಾರ ನಡೆದಿದೆ.
ಹೊಸಪೇಟೆಯ ಚಿತ್ತವಾಡ್ಗಿ ನಿವಾಸಿ ತಾರಿಹಳ್ಳಿ ವೆಂಕಟೇಶ ಕೊಲೆಯಾದ ವ್ಯಕ್ತಿ. ಈ ಹತ್ಯೆಗೆ ಸಂಬಂಧಿಸಿದಂತೆ ಮನೋಜ್ ಎಂಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ:ಕೆಆರ್ ಎಸ್ ಡ್ಯಾಂ ಮೇಲೆ ಯುವಕನ ಕಾರುಬಾರು! ಪೊಲೀಸ್ ಜೀಪು ಚಲಾಯಿಸಿದ ಯುವಕ: ವಿಡಿಯೋ ವೈರಲ್
ನಗರದ ನ್ಯಾಯಾಲಯದ ಆವರಣದಲ್ಲೇ ಬೆಳ್ಳಂಬೆಳಗ್ಗೆ ಯುವಕನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಾಗರಿಕರನ್ನು ಬೆಚ್ಚಿ ಬೀಳಿಸಿದೆ.
ತಾರಿಹಳ್ಳಿ ವೆಂಕಟೇಶ ಅವರ ಹತ್ಯೆಗೆ ಕಾರಣ ನಿಖರವಾಗಿ ತಿಳಿದು ಬಂದಿಲ್ಲ, ಆದರೆ ಕೌಟುಂಬಿಕ ಕಲಹ, ರಾಜಕೀಯ ದುರುದ್ದೇಶದಿಂದ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ವೆಂಕಟೇಶ ವೃತ್ತಿಯಲ್ಲಿ ನ್ಯಾಯವಾದಿಯಾಗಿದ್ದರೂ, ಇದರ ಜೊತೆಗೆ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು.
ಇದನ್ನೂ ಓದಿ:ಗ್ಯಾಸ್ ಟ್ಯಾಂಕರ್ ಮತ್ತು ಡೀಸೆಲ್ ಟ್ಯಾಂಕರ್ ಮಧ್ಯೆ ಢಿಕ್ಕಿ: ತಪ್ಪಿದ ಭಾರಿ ದುರಂತ