Advertisement

ನೆಲಕ್ಕೆ ಮುತ್ತಿಟ್ಟು, ವಿಜಯನಗರ ಬಾವುಟ ಪ್ರದರ್ಶಿಸಿದ ಆನಂದ

04:17 PM Feb 09, 2021 | Team Udayavani |

ಹೊಸಪೇಟೆ: ವಿಜಯನಗರ ಜಿಲ್ಲೆಗೆ ಸರ್ಕಾರ ಅಂತಿಮ ಅ ಧಿಸೂಚನೆ ಹೊರಡಿಸುತ್ತಿದ್ದಂತೆ ಬೆಂಗಳೂರಿನಿಂದ ಹೆಲಿಕಾಪ್ಟರ್‌ ಮೂಲಕ ನಗರದ ತಾಲೂಕು ಕ್ರೀಡಾಂಗಣಕ್ಕೆ ಆಗಮಿಸಿದ ಸಚಿವ ಆನಂದ ಸಿಂಗ್‌ ಹೆಲಿಕಾಪ್ಟರ್‌ನಿಂದ ಕೆಳಗೆ ಇಳಿಯುತ್ತಿದ್ದಂತೇ ನೆಲಕ್ಕೆ ಮುತ್ತಿಟ್ಟರು. ಈ ಸಂದರ್ಭದಲ್ಲಿ ಅವರ ಅಭಿಮಾನಿ ಹಾಗೂ ಬೆಂಬಲಿಗರು ಕುಂಬಳಕಾಯಿ ಒಡೆದು ಪೂಜೆ ಸಲ್ಲಿಸಿದರು. ಕಾರಿನ ಮುಂಭಾಗದಲ್ಲಿ ಕುಳಿತು ಹೊಸಪೇಟೆಯಿಂದ ಹಂಪಿವರೆಗೆ ವಿಜಯನಗರಬಾವುಟ ಪ್ರದರ್ಶನ ಮಾಡಿ ಸಂಭ್ರಮಿಸಿದರು.

Advertisement

ಹಂಪಿ ತುಂಗಭದ್ರಾ ನದಿಯಲ್ಲಿ ಸ್ನಾನಮಾಡಿದ ಆನಂದ ಸಿಂಗ್‌ ಅವರಿಗೆ ವಿರೂಪಾಕ್ಷ    ದೇವಸ್ಥಾನದ ಪಟ್ಟದ ಆನೆ ಲಕ್ಷ್ಮೀ ಆರು ಬಾರಿ ಜಲಮಜ್ಜನ ಮಾಡುವ ಮೂಲಕ ಆಶೀರ್ವಾದ ಮಾಡಿತು. ನಂತರ ತಮ್ಮ ಅಭಿಮಾನಿ ಹಾಗೂ ಬೆಂಬಲಿಗರೊಂದಿಗೆ ವಿರೂಪಾಕ್ಷ ಹಾಗೂ ಪಂಪಾದೇವಿ ದರ್ಶನ ಪಡೆದರು. ಈ ವೇಳೆ ಮಾತನಾಡಿದ ಅವರು, ವಿಜಯನಗರ ಜಿಲ್ಲೆಗೆ ರಚನೆಯಿಂದ ಪಶ್ಚಿಮ ತಾಲೂಕುಗಳ ಜನರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ.

ಇದನ್ನೂ ಓದಿ:118 ಅಬಕಾರಿ ಉಪ ನಿರೀಕ್ಷಕರು ಸೇವೆಗೆ ಅಣಿ

ಬಳ್ಳಾರಿ ಜಿಲ್ಲೆ ವಿಭಜನೆಯಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಜಿಲ್ಲೆಗೆ ವಿರೋಧ ಮಾಡಿದವರು ಕೂಡ ನನ್ನ ಅಣ್ಣ-ತಮ್ಮಂದಿರು, ಗಡಿ ವಿಚಾರಕ್ಕೆ ಬಂದರೆ ನಾವೆಲ್ಲರೂ ಒಂದೇ. ಬೇರೆಯವರು ಬಳ್ಳಾರಿಗೆ ಬಂದು ಜಿಲ್ಲೆಕೊಡಿ ಎಂದರೆ ಬಿಟ್ಟುಕೊಡುತ್ತಿವಾ? ಸಿಎಂ ಯಡಿಯೂರಪ್ಪ, ಕಂದಾಯ ಸಚಿವ ಆರ್‌. ಅಶೋಕ್‌ ಸೇರಿದಂತೆ ಜಿಲ್ಲೆಗಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ವಿಶೇಷವಾಗಿ ತಮ್ಮ ಆಪ್ತ ಸಹಾಯಕ ಮುನಿರಾಜ್‌ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next