Advertisement

ವಿಜಯನಗರವನ್ನು ಪ್ರತ್ಯೇಕ ಜಿಲ್ಲೆ ಮಾಡಲು ಸಿಎಂಗೆ ಮನವಿ

12:51 PM Sep 18, 2019 | Mithun PG |

ಬೆಂಗಳೂರು:  ವಿಜಯನಗರವನ್ನು ಪ್ರತ್ಯೇಕ  ಜಿಲ್ಲೆಯನ್ನಾಗಿ ಮಾಡಬೇಕೆಂದು ಅನರ್ಹ ಶಾಸಕ ಆನಂದ್ ಸಿಂ‌ಗ್ ಹಾಗೂ ಉಜ್ಜಯಿನಿ ಜಗದ್ಗುರುಗಳು ಮುಖ್ಯಮಂತ್ರಿ ಯಡಿಯೂರಪ್ಪರಲ್ಲಿ ಮನವಿ ಮಾಡಿದ್ದಾರೆ.

Advertisement

ಮುಖ್ಯಮಂತ್ರಿಯನ್ನು  ಗೃಹ ಕಚೇರಿ ಕೃಷ್ಣಾ ದಲ್ಲಿ ಭೇಟಿ ಮಾಡಿ ಮಾತನಾಡಿದ  ಆನಂದ್ ಸಿಂ‌ಗ್,  ಜನಪ್ರತಿನಿಧಿಗಳು ಹಾಗೂ ಜನರು  ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ‌ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ವಿಶ್ವದಲ್ಲಿ ಹೆಸರುವಾಸಿಯಾಗಿರೋ ನಗರವೆಂದು ವಿಜಯನಗರವನ್ನು ಯುನೆಸ್ಕೋ ಪರಿಗಣಿಸಿದೆ. ವಿಜಯನಗರ ಸಾಮ್ರಾಜ್ಯ ಎಂದಿಗೂ ಮರೆಯಲು ಸಾಧ್ಯವಾಗಲಾರದು. ಹಾಗಾಗಿ ಇದನ್ನು ಜಿಲ್ಲೆಯನ್ನಾಗಿ ಮಾಡಿದರೆ ಆಡಳಿತಾತ್ಮಕವಾಗಿ ತುಂಬ ಅನುಕೂಲವಾಗುತ್ತೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉಜ್ಜಯಿನಿ ಸದ್ಗುರುಗಳು‌ ಮಾತನಾಡಿ ವಿಜಯನಗರದ ಗತ ವೈಭವ ಮರುಕಳಿಸಬೇಕಾದರೆ ಇದನ್ನು ಜಿಲ್ಲೆಯನ್ನಾಗಿ ಮಾಡಬೇಕು. ಇವತ್ತಿನ ಮೈಸೂರು ದಸರಾಕ್ಕೆ ಪ್ರೇರಣೆಯೇ  ಆಗಿನ ವಿಜಯನಗರ ಸಾಮ್ರಾಜ್ಯ. ಹಾಗಾಗಿ ಈ ನೆಲಕ್ಕೆ ಅದರದ್ದೇ ಆದ ವಿಶೇಷ ಗುಣಗಳು ಇದೆ.ಅದ್ದರಿಂದ ಇದನ್ನು ಜಿಲ್ಲೆಯ ನ್ನಾಗಿ ಮಾಡಬೇಕು ಅಂತ ಮನವಿ‌ ಮಾಡಿದರು.

ಇದಕ್ಕೆ  ಪ್ರತಿಕ್ರಿಯೆಸಿದ ಮುಖ್ಯಮಂತ್ರಿ  ಬಿ.ಎಸ್ ಯಡಿಯೂರಪ್ಪ, ಪಕ್ಷಾತೀತವಾಗಿ ವಿಜಯನಗರ ವನ್ನು‌ ಜಿಲ್ಲೆಯನ್ನಾಗಿ ಮಾಡಬೇಕು ಅಂತ ಒತ್ತಾಯಿಸಿದ್ದರಿಂದ , ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗೊಳೊಂದಿಗೆ ಚರ್ಚೆ ನಡೆಸಿ ಮುಂದಿನ ಸಚಿವ ಸಂಪುಟದಲ್ಲಿ ಇದರ ಬಗ್ಗೆ ತೀರ್ಮಾನ  ಕೈಗೊಳ್ಳುತ್ತೇನೆ ಎಂದು  ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next