Advertisement

ಮುಂಡರಗಿ:  ಹರ್ಮುಖ್‌ ಪರ್ವತ ಏರಿದ ಕಕ್ಕೂರು ತಾಂಡಾ ಯುವಕ

07:35 PM Sep 19, 2021 | Team Udayavani |

ವರದಿ: ಹು.ಬಾ.ವಡ್ಡಟ್ಟಿ.

Advertisement

ಮುಂಡರಗಿ: ತಾಲೂಕಿನ ಕಕ್ಕೂರು ತಾಂಡಾ ಯುವಕ ವಿಜಯಕುಮಾರ ರಾಮಪ್ಪ ಶಾಸಿ ಜಮ್ಮುವಿನ ಹಿಮಾಲಯ ಸೆರಗಿನಲ್ಲಿರುವ ಸಾವಿಗೂ ಸವಾಲೊಡ್ಡುವ ಕಠಿಣವಾದ 16,780 ಅಡಿ ಎತ್ತರದ ಹರ್ಮುಖ್‌ ಪರ್ವತ ಏರುವ ಮೂಲಕ ಸಾಹಸ ಮೆರೆದಿದ್ದಾನೆ.

ರಾಜ್ಯ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಸೆ. 7 ರಿಂದ 17ರವರೆಗೆ ಹಮ್ಮಿಕೊಂಡಿದ್ದ ಜಮ್ಮು-ಕಾಶ್ಮೀರ್‌ದ ಪಲ್ವಾಮಾದಲ್ಲಿ ಹಿಮಾಲಯದ ಮಹಾ ದಂಡಯಾತ್ರೆಯಲ್ಲಿ 30 ಕೆಜಿ ಉಪಕರಣಗಳನ್ನು ಬೆನ್ನ ಮೇಲೆ ಹೊತ್ತುಕೊಂಡು ಹರ್ಮುಖ್‌ ಪರ್ವತ ಏರಿದ ಕರ್ನಾಟಕದ ಹನ್ನೊಂದು ಜನರ ಮೊದಲ ತಂಡದಲ್ಲಿ ತಾಲೂಕಿನ ಕಕ್ಕೂರು ತಾಂಡಾದ 26 ವರ್ಷದ ಯುವಕ ವಿಜಯಕುಮಾರ ಇದ್ದು, ತಾಲೂಕು, ಜಿಲ್ಲೆಗೆ ಕೀರ್ತಿ ತಂದಿದ್ದಾನೆ.

ಪರ್ವತಾರೋಹಣ ಹವ್ಯಾಸ: ವಿಜಯಕುಮಾರ ಶಾಸಿ ಶಾಲಾ ದಿನಗಳಿಂದಲೂ ಪರ್ವತ ಏರುವ ಹವ್ಯಾಸ ಹೊಂದಿದ್ದು, ಈ ಮೊದಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯದೊಂದಿಗೆ ಉತ್ತರಾಖಂಡದ 16 ಸಾವಿರ ಅಡಿ ಎತ್ತರದ ಹುರ್ರಾ ಪರ್ವತದ ನೆತ್ತಿ ಮೇಲೆ ಪರ್ವತಾರೋಹಣ ಮಾಡಿದ್ದು, ಈಗ ಹರ್ಮುಖ್‌ ಪರ್ವತ ಏರಿಬಂದಿದ್ದಾರೆ. ಮುಂದಿನ ದಿನಗಳಲ್ಲಿ ಹಿಮಾಲಯದ ಜಗತ್ತಿನ ಅತೀ ಎತ್ತರದ ಮೌಂಟ್‌ ಎವರೆಸ್ಟ್‌ ಪರ್ವತ ಏರುವ ಕನಸು ಮತ್ತು ಗುರಿ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next