Advertisement

“ಜಗತ್ತೇ ಕಂಬಳದತ್ತ ತಿರುಗಿ ನೋಡುತ್ತಿದೆ’

12:32 AM Mar 02, 2020 | Sriram |

ಉಪ್ಪಿನಂಗಡಿ: ಕಂಬಳವನ್ನು ಉಳಿಸುವ ನಿಟ್ಟಿನಲ್ಲಿ ನ್ಯಾಯಾಂಗ ಸಹಿತ ಎಲ್ಲ ರೀತಿಯ ಹೋರಾಟಗಳು ನಡೆಯುತ್ತಿವೆ. ಕಂಬಳದ ಮೂಲಕ ಗ್ರಾಮೀಣ ಪ್ರತಿಭೆಗಳಿಂದು ಜಗತ್ತೇ ಕಂಬಳದತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಅವರ ಸಾಧನೆಯನ್ನು ಮೆಚ್ಚುವಂಥದ್ದೇ. ಆದ್ದರಿಂದ ಇಂದಿನ 35ನೇ ವರ್ಷದ ವಿಜಯ-ವಿಕ್ರಮ ಕಂಬಳವು ಆ ಸಾಧಕರಿಗೆ ಅರ್ಪಣೆಯಾಗಲಿ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ತಿಳಿಸಿದರು.

Advertisement

ಉಪ್ಪಿನಂಗಡಿಯಲ್ಲಿ ನಡೆಯುತ್ತಿರುವ 35ನೇ ವರ್ಷದ ವಿಜಯ-ವಿಕ್ರಮ ಜೋಡುಕರೆ ಕಂಬಳದಲ್ಲಿ ಶನಿವಾರ ರಾತ್ರಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತುಳುನಾಡ ಮಣ್ಣಿನ ವೀರ ಕ್ರೀಡೆಯಾದ ಕಂಬಳದಲ್ಲಿ ಕೋಣ ಗಳನ್ನು ಓಡಿಸುವವರು ಯಾವುದೇ ಅತ್ಯಾಧುನಿಕ ಸೌಲಭ್ಯಗಳಿಲ್ಲದೆ, ತರಬೇತಿಯಿಲ್ಲದೆ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಅವರ ಈ ಸಾಧನೆಗೆ ಜಗತ್ತೇ ಕಂಬಳ ಕ್ರೀಡೆಯತ್ತ ತಿರುಗಿ ನೋಡುವಂತಾಗಿದೆ. ಕಂಬಳಕ್ಕಿರುವ ಅಡೆತಡೆ ನಿವಾರಣೆಗೆ ಹೋರಾಟ ನಡೆಸುತ್ತಿರುವವರಿಗೆಲ್ಲ ಹೊಸ ವೇಗ ಸಿಕ್ಕಿದೆ. ಎಲ್ಲ ಅಡೆತಡೆಗಳನ್ನು ಮೀರಿ ಕಂಬಳ ಕ್ರೀಡೆ ಉಳಿದು ಬೆಳೆಯುತ್ತದೆ ಎಂಬ ವಿಶ್ವಾಸ ನನಗಿದೆ.

ಜನರ ಭಾವನೆಗಳಿಗೆ ಹೊಸ ದಿಕ್ಕನ್ನು ತೋರಿಸುವ ಕೆಲಸ ಕಂಬಳದಿಂದಾಗಲಿ. ಕಂಬಳದ ಉಳಿವಿಗಾಗಿ ಯಾವುದೇ ನೆರವನ್ನು ನೀಡಲು ಸಿದ್ಧನಿದ್ದು, ನಮ್ಮ ಮಣ್ಣಿನ ಸಂಸ್ಕೃತಿಯ ಕ್ರೀಡೆಯಾದ ಕಂಬಳವು ಶಾಶ್ವತವಾಗಿ ಉಳಿಯಬೇಕು. ಯಾವುದೇ ಅಡೆ-ತಡೆಗಳು ಬಂದರೂ ಅದನ್ನು ನಿವಾರಿಸುವ ಶಕ್ತಿ ತುಳುನಾಡ ಜನರಿಗಿದ್ದು, ಆದ್ದರಿಂದ ಈ ಕ್ರೀಡೆಗೆ ಯಾವತ್ತೂ ಅಳಿವು ಬರಲು ಸಾಧ್ಯವಿಲ್ಲ ಎಂದರು.

ಅನುದಾನ, ಅಕಾಡೆಮಿ ಬೇಕು
ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್‌ ಕುಮಾರ್‌ ರೈ ಕೋಡಿಂಬಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲ ಜಾತಿ, ಧರ್ಮದವರು, ಎಲ್ಲ ಪಕ್ಷದವರು ಒಗ್ಗೂಡಿ ಕಂಬಳದ ಉಳಿವಿಗಾಗಿ ಹೋರಾಟ ಮಾಡಿದ್ದಾರೆ. ಕಂಬಳಕ್ಕೆ ಸರಕಾರದಿಂದ ಇನ್ನಷ್ಟು ಪ್ರೋತ್ಸಾಹ ಸಿಗಬೇಕಾಗಿದ್ದು, ಬಜೆಟ್‌ನಲ್ಲಿ 5 ಕೋಟಿ ರೂ. ನೀಡಬೇಕು. ಕಂಬಳದ ಅಕಾಡೆಮಿ ಸ್ಥಾಪಿಸಿ, ಪಿಲಿಕುಳದಲ್ಲಿ ಅದರ ಕಟ್ಟಡ ನಿರ್ಮಾಣಕ್ಕಾಗಿ ಎರಡು ಎಕ್ರೆ ಜಾಗ ನೀಡಬೇಕು ಎಂದು ಕೇಂದ್ರ ಸಚಿವರಲ್ಲಿ ಮನವಿ ಮಾಡಿದರು. ಪೆಟಾ ಸಂಘಟನೆ ಎಷ್ಟೇ ಅಡೆತಡೆಗಳನ್ನು ತಂದರೂ ಕಂಬಳವನ್ನು ಉಳಿಸಲಿದ್ದೇವೆ. ತುಳುನಾಡ ಮತ್ತೂಂದು ಜನಪದ ಕ್ರೀಡೆಯಾದ ಕೋಳಿ ಅಂಕಕ್ಕೂ ಸಂಘಟನೆ ರೂಪಿಸಿ, ಅದನ್ನು ನಿರ್ಭೀತಿಯಿಂದ ನಡೆಯುವಂತೆ ಮಾಡಲಾಗುವುದು ಎಂದು ತಿಳಿಸಿದರು.

Advertisement

ಒಗ್ಗಟ್ಟಿನ ಸಂಕೇತ
ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್‌. ರಾಜೇಂದ್ರ ಕುಮಾರ್‌ ಮಾತನಾಡಿ, ಒಬ್ಬ ವ್ಯಕ್ತಿಯಿಂದ ಕಂಬಳ ನಡೆಸಲು ಸಾಧ್ಯವಿಲ್ಲ. ಎಲ್ಲರ ಸಹಕಾರ ಬೇಕು. ಕಂಬಳವೆನ್ನುವುದು ಒಗ್ಗಟ್ಟಿನ ಸಂಕೇತವಾಗಿದ್ದು, ಇದು ಇನ್ನಷ್ಟು ಬೆಳೆದು ತುಳುನಾಡಿನ ಸೌಹಾರ್ದ ಸಂಸ್ಕೃತಿಯನ್ನು ಅನಾವರಣಗೊಳಿಸಲಿ ಎಂದರು.

ಮುಖ್ಯ ಅತಿಥಿಗಳಾಗಿದ್ದ ಶ್ರೀ ಆರಾಧ್ಯ ಎಜುಕೇಶನಲ್‌ ಮತ್ತು ಚಾರಿಟೆಬಲ್‌ ಟ್ರಸ್ಟ್‌ನ ಅಧ್ಯಕ್ಷ ಮಂಜುನಾಥ ಆರಾಧ್ಯ, ಅಂಧರ ಕ್ರಿಕೆಟ್‌ ಅಸೋಸಿಯೇಶನ್‌ ಅಧ್ಯಕ್ಷ ಮಹಾಂತೇಶ್‌ ಶಿವದಾಸನ್ನವರ್‌, ಜಿಲ್ಲಾ ಕಂಬಳ ಸಮಿತಿಯ ಕಾರ್ಯದರ್ಶಿ ಗುಣಪಾಲ ಕಡಂಬ ಮಾತನಾಡಿದರು.

ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್‌. ಶೆಟ್ಟಿ, ರಾಮ-ಲಕ್ಷ್ಮಣ ಕಂಬಳ ಸಮಿತಿ ಅಧ್ಯಕ್ಷ ಕ್ಯಾ| ಬೃಜೇಶ್‌ ಚೌಟ, ಕಂಬಳ ಕೋಣಗಳ ಯಜಮಾನ ಬಾಕೂìರು ಶಾಂತರಾಮ ಶೆಟ್ಟಿ, ಪುತ್ತೂರು ತಹಶೀಲ್ದಾರ್‌ ರಾಹುಲ್‌ ಶಿಂಧೆ, ಕಡಬ ತಹಶೀಲ್ದಾರ್‌ ಜಾನ್‌ ಪ್ರಕಾಶ್‌ ರೊಡ್ರಿಗಸ್‌, ನ್ಯಾಯವಾದಿ ರಾಜಶೇಖರ್‌ ಹಿಲ್ಯಾರು, ಬನ್ನೂರು ಸಿಎ ಬ್ಯಾಂಕ್‌ ಅಧ್ಯಕ್ಷ ಈಶ್ವರ ಭಟ್‌ ಪಂಜಿಗುಡ್ಡೆ, ತಾ.ಪಂ. ಸದಸ್ಯ ಮುಕುಂದ ಬಜತ್ತೂರು, ನಿವೃತ್ತ ತಹಶೀಲ್ದಾರ್‌ ವಾಮನ ರಾವ್‌, ನಾರಾಯಣ ಶೆಟ್ಟಿ ಬೆಳ್ಳಿಪ್ಪಾಡಿ, ಕಡಬ ಡೆಪ್ಯುಟಿ ತಹಶೀಲ್ದಾರ್‌ ದಾಮೋದರ್‌, ಕಂಬಳ ತೀರ್ಪುಗಾರ ರಾಜೀವ್‌ ಶೆಟ್ಟಿ ಎಡೂ¤ರು, ವಿಟ್ಲ-ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಉಪ್ಪಿನಂಗಡಿ ಕಂಬಳ ಸಮಿತಿ ಸಂಚಾಲಕ ಶಶಿಕುಮಾರ್‌ ರೈ ಬಾಲೊÂಟ್ಟು, ಪ್ರಮುಖರಾದ ಸುಮಾ ಅಶೋಕ್‌ ರೈ, ಗಂಗಾಧರ ಶೆಟ್ಟಿ ಮಠಂತಬೆಟ್ಟು, ಲೊಕೇಶ್‌ ಶೆಟ್ಟಿ, ಸೀತಾರಾಮ ರೈ ಕೆದಂಬಾಡಿ ಗುತ್ತು, ರೋಹಿತ್‌ ಹೆಗ್ಡೆ ಎರ್ಮಾಳು, ಡಾ| ಜಯಪ್ರಕಾಶ್‌ ಕೋಡಿತೋನಡ್ಕ, ಮಾರಪ್ಪ ಭಂಡಾರಿ, ಉದ್ಯಮಿಗಳಾದ ಲಕ್ಷ್ಮಣ್‌ ಮಣಿಯಾಣಿ, ರಾಜಾರಾಮ್‌ ಶೆಟ್ಟಿ ಕೋಲ್ಪೆಗುತ್ತು, ಯೋಗೀಶ್‌ ಕಡ್ತಿಲ, ಚಂದಪ್ಪ ಮೂಲ್ಯ ಉಪಸ್ಥಿತರಿದ್ದರು.

ಜಿಲ್ಲಾ ಕಂಬಳ ಸಮಿತಿಯ ವೆಬ್‌ಸೈಟ್‌ ಅನ್ನು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರು ಅನಾವರಣಗೊಳಿಸಿದರು. ಆರ್ಥಿಕ ಸಂಕಷ್ಟದಲ್ಲಿರುವ ಕಂಬಳ ಸಮಿತಿಯ ಕೃಷ್ಣಪ್ಪ ಪೂಜಾರಿ ಅವರಿಗೆ ಧನಸಹಾಯ ನೀಡಲಾಯಿತು.

ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆ ಹಿತ್ಲು ಸ್ವಾಗತಿಸಿದರು. ಸಹ ಸಂಚಾಲಕ ಜಯಪ್ರಕಾಶ್‌ ಬದಿನಾರು ವಂದಿಸಿದರು. ಗೌರವ ಸಲಹೆಗಾರ ನಿರಂಜನ್‌ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

ಸಮಿತಿಯ ಗೌರವಾಧ್ಯಕ್ಷ ಉಮೇಶ್‌ ಶೆಣೈ, ಕಾರ್ಯಾಧ್ಯಕ್ಷ ಅಶೋಕ್‌ ಕುಮಾರ್‌ ರೈ ನೆಕ್ಕರೆ, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಕಾರ್ಯದರ್ಶಿ ಚಂದ್ರಶೇಖರ ಮಡಿವಾಳ, ಉಪಾಧ್ಯಕ್ಷ ರಾಮಚಂದ್ರ ಮಣಿಯಾಣಿ, ಏಕವಿದ್ಯಾಧರ ಜೈನ್‌, ಯು. ರಾಮ, ವಿಟuಲ ಶೆಟ್ಟಿ ಕೊಲೊÂಟ್ಟು, ಸಂಘಟನ ಕಾರ್ಯದರ್ಶಿಗಳಾದ ಯೊಗೀಶ್‌ ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು, ಕೃಷ್ಣಪ್ರಸಾದ್‌ ಬೊಳ್ಳಾವು, ಸಮಿತಿಯ ದಿಲೀಪ್‌ ಶೆಟ್ಟಿ ಕರಾಯ, ಶಿವರಾಮ ಶೆಟ್ಟಿ ಗೋಳ್ತಮಜಲು, ದಯಾನಂದ ಪಿಲಿಗುಂಡ, ಕೇಶವ ರಂಗಾಜೆ, ಹರಿಪ್ರಸಾದ್‌ ಶೆಟ್ಟಿ, ಆದರ್ಶ ಕಜೆಕ್ಕಾರು, ವಿಶ್ವನಾಥ ಶೆಟ್ಟಿ ಕಂಗ್ವೆ, ಸದಾನಂದ ಶೆಟ್ಟಿ ಕಾರ್‌ ಕ್ಲಬ್‌, ಡಾ| ಕೈಲಾರ್‌ ರಾಜ್‌ ಗೋಪಾಲ್‌ ಭಟ್‌, ಸಿವಿಲ್‌ ಎಂಜಿನಿಯರ್‌ ಬಿ.ಕೆ. ಆನಂದ, ಸುಧಾಕರ ಶೆಟ್ಟಿ, ಉಮ್ಮರ್‌ ಅಂಡೆತ್ತಡ್ಕ ಪಾಲ್ಗೊಂಡಿದ್ದರು.

ಸಾಮರಸ್ಯದ ಬದುಕು
ಸಮ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಆರ್‌.ಜಿ. ಗ್ರೂಪ್‌ನ ಆಡಳಿತ ನಿರ್ದೇಶಕ ಕೆ. ಪ್ರಕಾಶ್‌ ಶೆಟ್ಟಿ, ಪರಸ್ಪರ ಪ್ರೀತಿಸಿ, ಸಾಮರಸ್ಯದಿಂದ ಬದುಕುವುದನ್ನು ಕಂಬಳವು ನಮಗೆ ಕಲಿಸಿಕೊಡುತ್ತದೆ. ಈ ಕ್ರೀಡೆ ಎಂದೆಂದಿಗೂ ಉಳಿಯಬೇಕು. ಮಂಗಳೂರಿನಲ್ಲಿರುವ ತನ್ನ ಜಾಗದಲ್ಲಿ ಜೋಡುಕರೆ ನಿರ್ಮಿಸಿ, ಕಂಬಳ ನಡೆಸುವುದಕ್ಕೆ ನೀಡುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next