Advertisement

ಮಾ. 11- 25 ವಿಜಯ ಸಂಕಲ್ಪ ಯಾತ್ರೆ- ಪ್ರಗತಿ ಯಾತ್ರೆ: ಸುದರ್ಶನ ಮೂಡುಬಿದಿರೆ

12:46 AM Mar 07, 2023 | Team Udayavani |

ಮಂಗಳೂರು: ಅಸೆಂಬ್ಲಿ ಚುನಾವಣೆಗೆ ಪೂರ್ವಭಾವಿಯಾಗಿ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರ ಜಾಗೃತಿಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಸಾಧನೆಗಳ ಬಗ್ಗೆ ಜನತೆಗೆ ಅರಿವು ಮೂಡಿಸಲು “ವಿಜಯ ಸಂಕಲ್ಪ ಯಾತ್ರೆ-ಪ್ರಗತಿ ಯಾತ್ರೆ’ ಮಾ. 11ರಿಂದ 25ರ ವರೆಗೆ ದ.ಕ. ಜಿಲ್ಲೆಯಲ್ಲಿ ಸಂಚರಿಸಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ಹೇಳಿದ್ದಾರೆ.

Advertisement

ದ.ಕ.ದಲ್ಲಿ ಮುಖಂಡರಾದ ಆರ್‌. ಅಶೋಕ್‌ ಮತ್ತು ಈಶ್ವರಪ್ಪ ಅವರ ನೇತೃತ್ವದಲ್ಲಿ ರಥಯಾತ್ರೆ ನಡೆಯಲಿದ್ದು, ಮಾ. 11ರಂದು ಸುಳ್ಯದಲ್ಲಿ ಬೆಳಗ್ಗೆ 10.30ಕ್ಕೆ ರೋಡ್‌ಶೋ ಇರಲಿದೆ. ಸಂಜೆ 5ಕ್ಕೆ ಪುತ್ತೂರಿಗೆ ಯಾತ್ರೆ ಆಗಮಿಸಲಿದ್ದು, ಸಾರ್ವಜನಿಕ ಸಭೆ ನಡೆಯಲಿದೆ ಎಂದು ನಗರದ ಅಟಲ್‌ ಸೇವಾ ಕೇಂದ್ರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

ಮಾ. 12ರಂದು ಬೆಳಗ್ಗೆ 10.30ಕ್ಕೆ ಬೆಳ್ತಂಗಡಿ ಮತ್ತು ಅಪರಾಹ್ನ 3ಕ್ಕೆ ಬಂಟ್ವಾಳದಲ್ಲಿ ರೋಡ್‌ಶೋ, ಸಂಜೆ 5ಕ್ಕೆ ಮಂಗಳೂರು ಉತ್ತರದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಮಾ.13ರಂದು ಬೆಳಗ್ಗೆ 10.30ಕ್ಕೆ ಮಂಗಳೂರು (ಉಳ್ಳಾಲ)ದಲ್ಲಿ ಮತ್ತು ಅಪರಾಹ್ನ 3ಕ್ಕೆ ಮೂಡುಬಿದಿರೆಯಲ್ಲಿ ರೋಡ್‌ಶೋ ಬಳಿಕ ಸಂಜೆ 5ಕ್ಕೆ ಕಾರ್ಕಳದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಮಾ. 17ರಂದು ಮಂಗಳೂರು ಉತ್ತರದಲ್ಲಿ ಎಸ್‌ಸಿ ಮೋರ್ಚಾ ಹಾಗೂ ಮಹಿಳಾ ಸಮಾವೇಶ, 18ರಂದು ಬಂಟ್ವಾಳದಲ್ಲಿ ರೈತ ಸಮಾವೇಶ, 19ರಂದು ಸುಳ್ಯದಲ್ಲಿ ಮಹಿಳಾ ಸಮಾವೇಶ, ಮೂಡುಬಿದಿರೆಯಲ್ಲಿ ಹಿಂದುಳಿದ ವರ್ಗಗಳ ಸಮಾವೇಶ, 20ರಂದು ಮಂಗಳೂರು (ಉಳ್ಳಾಲ)ದಲ್ಲಿ ಯುವ ಸಮಾವೇಶ, ಬೆಳ್ತಂಗಡಿಯಲ್ಲಿ ಎಸ್‌ಸಿ ಸಮಾವೇಶ ಏರ್ಪಡಿಸಲಾಗಿದೆ. ಮಾ. 23ರಂದು ಹಿಂದುಳಿದ ವರ್ಗ, ಎಸ್‌ಸಿ ಮೋರ್ಚಾ ಸಮಾವೇಶ ನಡೆಯಲಿದೆ. ಮಾ. 16ರಂದು ಮಂಗಳೂರಿನಲ್ಲಿ ಬೆಳಗ್ಗೆ ವಿವಿಧ ಯೋಜನೆಗಳ ಫ‌ಲಾನುಭವಿಗಳ ಸಮಾವೇಶ ನಡೆಯಲಿದೆ.

ಈಗಾಗಲೇ ಆರು ಎಲ್‌ಇಡಿ ವಾಹನಗಳು ಪ್ರತೀ ಅಸೆಂಬ್ಲಿ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದು, ಚುನಾವಣೆಯ ವರೆಗೆ ಸರಕಾರದ ಸಾಧನೆ ಸಾರುವ ಪ್ರಗತಿ ರಥ ಸಂಚರಿಸಲಿದೆ. ಚುನಾವಣೆ ಘೋಷಣೆ ಸಮೀಪಿಸುತ್ತಿದ್ದು, ಚುನಾವಣೆ ಎದುರಿಸಲು ಬಿಜೆಪಿ ಸಮರ್ಥವಾಗಿದೆ. ಬೂತ್‌ನಿಂದ ಜಿಲ್ಲಾ ಹಂತದ ವರೆಗೆ ಕಾರ್ಯಕರ್ತರ ತಂಡ ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದರು.

ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಮಾರ್ಗದರ್ಶನದಲ್ಲಿ ವಿಜಯ ಸಂಕಲ್ಪ ಯಾತ್ರೆ ಹಾಗೂ ಪ್ರಗತಿ ಯಾತ್ರೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ನಾಯಕರಾದ ಈಶ್ವರಪ್ಪ, ಅಶೋಕ್‌, ಪ್ರಹ್ಲಾದ್‌ ಜೋಶಿ, ಜಗದೀಶ್‌ ಶೆಟ್ಟರ್‌, ಡಾ| ಅಶ್ವತ್ಥನಾರಾಯಣ ನೇತೃತ್ವದಲ್ಲಿ ನಾಲ್ಕು ವಿಭಾಗಗಳಲ್ಲಿ ಸಂಚರಿಸಲಿರುವ ಈ ಯಾತ್ರೆಯುದ್ದಕ್ಕೂ ರೋಡ್‌ ಶೋ ಹಾಗೂ ಸಾರ್ವಜನಿಕ ಸಮಾವೇಶ, ಧಾರ್ಮಿಕ ಸ್ಥಳಗಳ ಭೇಟಿ, ಪ. ಗೋಷ್ಠಿ ಇರಲಿದೆ ಎಂದರು.

Advertisement

ಮುಖಂಡರಾದ ಕಸ್ತೂರಿ ಪಂಜ, ಸುಧೀರ್‌ ಶೆಟ್ಟಿ, ರವಿಶಂಕರ್‌ ಮಿಜಾರ್‌, ದೇವದಾಸ ಶೆಟ್ಟಿ, ಸಂದೇಶ್‌ ಶೆಟ್ಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next