Advertisement

Kanwar Yatra ಇಂದಿನಿಂದ; ಮುಸ್ಲಿಂ ನೌಕರರ ವಜಾ, ಹಿಂದೂಗಳಿಗೂ ರಜಾ

12:25 AM Jul 22, 2024 | Team Udayavani |

ಲಕ್ನೋ: ವಿವಾದಗಳ ನಡುವೆಯೂ ಉತ್ತರ ಪ್ರದೇಶ ಸರಕಾರ ವಿಧಿಸಿರುವ ಕನ್ವರ್‌ ಯಾತ್ರೆ ನಿಯಮಗಳನ್ನು ಜಾರಿಗೊಳಿಸಲು ಅಲ್ಲಿನ ಹೊಟೇಲ್‌ ಮಾಲಕರು ಮುಂದಾಗಿದ್ದಾರೆ. ಇದರ ಪರಿಣಾಮ, ಹಿಂದೂಗಳ ಹೊಟೇಲ್‌ಗ‌ಳಲ್ಲಿರುವ ಮುಸ್ಲಿಂ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದ್ದರೆ, ಇತ್ತ ಮುಸ್ಲಿಂ ಮಾಲಕತ್ವದ ಹೊಟೇಲ್‌ಗ‌ಳು ವ್ಯಾಪಾರವಿಲ್ಲದೇ ಬೀಗ ಹಾಕಲು ಯೋಜಿಸಿವೆ.

Advertisement

ಸೋಮವಾರದಿಂದ ಯಾತ್ರೆ ಆರಂಭಗೊಳ್ಳುತ್ತಿದ್ದು, ಕನ್ವರಿಗಳು ಉತ್ತರಪ್ರದೇಶದ ಮುಜಾಫ‌ರ್‌ನಗರದ ಮಾರ್ಗವಾಗಿ ಹಾದು ಹೋಗುತ್ತಾರೆ. ಈ ವೇಳೆ ಯಾತ್ರಾ ಮಾರ್ಗದ ಎಲ್ಲ ಹೊಟೇಲ್‌ಗ‌ಳ ಮಾಲಕರ ಹೆಸರು ಬಹಿರಂಗಪಡಿಸಿ ಎಂದು ಸರಕಾರ ಸೂಚಿಸಿದೆ. ಅದರಂತೆ, ಹಲವು ಹೊಟೇಲ್‌ಗ‌ಳಲ್ಲಿ ಮಾಲಕರ ಹೆಸರು ಹಾಕಿದ್ದರೆ, ಇನ್ನು ಕೆಲವರು ತಮ್ಮ ಉದ್ಯೋಗಿಗಳಲ್ಲಿ ಮುಸ್ಲಿಮರಿಲ್ಲ ಎಂದು ಖಚಿತಪಡಿಸಲು ಅವರ ಆಧಾರ್‌ಕಾರ್ಡ್‌ಗಳನ್ನೇ ಪ್ರದರ್ಶಿಸಿದ್ದಾರೆ. ಮುಸ್ಲಿಂ ಉದ್ಯೋಗಿಗಳಿದ್ದ ಹೊಟೇಲ್‌ಗ‌ಳಲ್ಲಿ ಅವರಿಗೆ ರಜೆ ನೀಡಿದ್ದರೆ, ಕೆಲವರನ್ನು ವಜಾಗೊಳಿಸಲಾಗಿದೆ. ಇತ್ತ ಮುಸ್ಲಿಮರ ಹೊಟೇಲ್‌ಗ‌ಳು ಕೂಡ ವ್ಯಾಪಾರ ನಷ್ಟದ ಭೀತಿ ಎದುರಿಸುತ್ತಿದ್ದು, ಉದ್ಯೋಗಿಗಳಿಗೆ ರಜೆ ನೀಡಿವೆ.

ಸುಪ್ರೀಂಗೆ ಅರ್ಜಿ: ಸರಕಾರದ ಈ ಆದೇಶ ರದ್ದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಸೋಮವಾರ ಅರ್ಜಿಯ ವಿಚಾರಣೆ ನಡೆಯಲಿದೆ.

”ರಾಮದೇವ್‌ಗೆ ತನ್ನ ಹೆಸರನ್ನು ಹೇಳಿಕೊಳ್ಳಲು ಸಂಕೋಚ ಇಲ್ಲ ಎನ್ನುವುದಾದರೆ, ರೆಹಮಾನ್‌ಗೆ ಆ ಸಂಕೋಚವೇಕೆ? ಎಲ್ಲರಿಗೂ ಅವರವರ ಹೆಸರಿನ ಬಗ್ಗೆ ಹೆಮ್ಮೆ ಇರಬೇಕು. ಹೆಸರನ್ನು ಮುಚ್ಚಿಡುವ ಅಗತ್ಯವಿಲ್ಲ. ಕೆಲಸದಲ್ಲಿ ಶುದ್ಧತೆ ಇದ್ದಲ್ಲಿ ನೀವು ಹಿಂದೂ ಅಥವಾ ಮುಸ್ಲಿಂ ಎಂಬುದು ಮುಖ್ಯವಾಗಲ್ಲ ” ಬಾಬಾ ರಾಮ್‌ದೇವ್‌

Advertisement

Udayavani is now on Telegram. Click here to join our channel and stay updated with the latest news.

Next