Advertisement
ಸ್ವಾಮಿ ವಿವೇಕಾನಂದರ ಶಿಷ್ಯೆ ಸೋದರಿ ನಿವೇದಿತಾ ಅವರು (ಮಾರ್ಗರೆಟ್ ಎಲಿಜಬೆತ್ ನೊಬೆಲ್) ನೀಡಿದ್ದ “ಭಾರತವು ಪಾರತಂತ್ರ್ಯದಿಂದ ವಿಮೋಚನೆಗೊಳ್ಳಲು ಪ್ರತಿಯೊಬ್ಬ ವ್ಯಕ್ತಿಯೂ ನಿತ್ಯವೂ ಸ್ವಲ್ಪ ಸಮಯವನ್ನು ರಾಷ್ಟ್ರಕ್ಕಾಗಿ ತೆಗೆದಿಡಬೇಕು’ ಎಂಬ ಕರೆಯು ಡಾ| ಕೇಶವ ಬಲಿರಾಮ್ ಹೆಡಗೇವಾರ್ ಅವರ ಮನದಲ್ಲಿ “ಸಂಘ’ವನ್ನು ಪ್ರಾರಂಭಿಸುವ ಚಿಂತನೆಯ ಬೀಜವನ್ನು ನೆಟ್ಟಿತು. ಅದರ ಫಲವಾಗಿ ಇವತ್ತು ಜಗತ್ತಿನ ಅತ್ಯಂತ ದೊಡ್ಡ ಸ್ವಯಂಸೇವಾ ಸಂಘಟನೆಯಾಗಿ ಸಂಘ ನಮ್ಮ ಕಣ್ಮುಂದೆ ನಿಂತಿದೆ.
Related Articles
Advertisement
1936ರಲ್ಲಿ ಆರಂಭವಾದ ರಾಷ್ಟ್ರ ಸೇವಿಕಾ ಸಮಿತಿ ಈಗ ದೇಶಾದ್ಯಂತ 5,200ಕ್ಕೂ ಅಧಿಕ ಶಾಖೆಗಳ ಮೂಲಕ ಮಹಿಳೆಯರಿಗೆ ಭಾರತೀಯ ಸಂಸ್ಕೃತಿ ಮತ್ತು ಅದರ ಸಂರಕ್ಷಣೆಗೆ ಪ್ರೇರಣೆ ನೀಡುತ್ತಿದೆ. ಇದರ ಸ್ವಯಂ ಸೇವಕಿಯರು 700ಕ್ಕೂ ಅಧಿಕ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ರಾಷ್ಟ್ರ ಸೇವಿಕಾ ಸಮಿತಿ ಜಗತ್ತಿನಲ್ಲೇ ಅತ್ಯಂತ ದೊಡ್ಡ ಮಹಿಳಾ ಸ್ವಯಂ ಸೇವಾ ಸಂಘಟನೆಯಾಗಿ ಇಂದು ಕಣ್ಣ ಮುಂದಿದೆ.
ಆಧುನಿಕ ಜಗತ್ತಿನ ಸಂಪರ್ಕಕ್ಕೆ ಬಾರದ ಬುಡಕಟ್ಟು ಜನರನ್ನು ರಾಷ್ಟ್ರೀಯ ಮುಖ್ಯಧಾರೆಗೆ ತರುವ ಪ್ರಯತ್ನವಾಗಿ 1952ರಲ್ಲಿ ಪ್ರಾರಂಭವಾದ “ವನವಾಸಿ ಕಲ್ಯಾಣ ಆಶ್ರಮ” ಭಾರತದಲ್ಲಿರುವ ಸುಮಾರು 10 ಕೋಟಿ ವನವಾಸಿಗಳ ಅಭ್ಯುದಯಕ್ಕೆ ಶ್ರಮಿಸುತ್ತಿದೆ.
ಭಾರತೀಯ ಜನಸಂಘ “ಸಂಘ’ದ ಯೋಜ ನೆಯಂತೆ ಟಿಸಿಲೊಡೆದ ಸಂಘಟನೆಯ ಲ್ಲದಿದ್ದರೂ ಪ್ರಖರ ರಾಷ್ಟ್ರವಾದಿ ಆಗಿದ್ದ ಡಾ| ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಅಪೇಕ್ಷೆಯ ಮೇರೆಗೆ ಸಂಘದ ಅತ್ಯುತ್ತಮ ಪ್ರತಿಭೆಗಳನ್ನು ಭಾಜಪಕ್ಕೆ ಕಳುಹಿಸಿ ಕೊಡಲಾಯಿತು. ಭಾರತೀಯ ಜನತಾ ಪಕ್ಷವಾಗಿ ಪರಿವರ್ತನೆಗೊಂಡ ಸಂಘಟನೆ ಇಂದು ದೇಶದ ಅತೀ ದೊಡ್ಡ ರಾಜಕೀಯ ಪಕ್ಷವಾಗಿದೆ. ಇಂದು ದೇಶದ ಚುಕ್ಕಾಣಿ ಹಿಡಿವ ನಾಯಕರಿಂದ ಪ್ರಾರಂಭಿಸಿ ಅನೇಕ ಉನ್ನತ ಹುದ್ದೆಗಳಲ್ಲಿ ಸಂಘದ ಸ್ವಯಂ ಸೇವಕರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಸಂಘ ಟನೆಯ ನೈಜ ಶಕ್ತಿಯ ಪರಿಚಯ ಮಾಡಿಸುತ್ತದೆ.
ಭಾರತೀಯ ಮಜ್ದೂರ್ ಸಂಘವನ್ನು 1955ರಲ್ಲಿ ಕುಶಲ ಸಂಘಟಕರು ಮತ್ತು ತತ್ವಜ್ಞಾನಿಯಾಗಿದ್ದ ದತ್ತೋಪಂತ ಠೇಂಗಡಿಯವರ ಪ್ರಾರಂಭಿಸಿದರು. “ರಾಷ್ಟ್ರವನ್ನು ಔದ್ಯೋಗೀಕರಣಗೊಳಿಸಿ, ಉದ್ಯೋಗವನ್ನು ಶ್ರಮಿಕೀಕರಣಗೊಳಿಸಿ, ಶ್ರಮಿಕರನ್ನು ರಾಷ್ಟ್ರೀಕರಣಗೊಳಿಸಿ’ ಎನ್ನುವ ಘೋಷವಾಕ್ಯದೊಂದಿಗೆ ಕಾರ್ಮಿಕ ಕ್ಷೇತ್ರದ ಬಗೆಗಿನ ಅವರ ಚಿಂತನೆಗಳು ಹೊಸ ಸಿದ್ಧಾಂತಕ್ಕೆ ನಾಂದಿಯಾದವು. ಪ್ರಸ್ತುತ 85 ಲಕ್ಷ ಸದಸ್ಯತ್ವ ಹೊಂದಿರುವ ಭಾರತೀಯ ಮಜ್ದೂರ್ ಸಂಘ ದೇಶದ ಅತೀ ದೊಡ್ಡ ಕಾರ್ಮಿಕ ಸಂಘಟನೆ.
ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತದ ಶಿಕ್ಷಣದಲ್ಲಿ ಸಾಂಸ್ಕೃತಿಕ ಮೌಲ್ಯಾಧಾರಿತ ಸಂಸ್ಕಾರವು ಸಿಗುವಂತಾಗಬೇಕೆಂಬ ಹಂಬಲದಿಂದ 1977ರಲ್ಲಿ ಪ್ರಾರಂಭಗೊಂಡ ವಿದ್ಯಾಭಾರತಿ ಇಂದು 29 ಸಾವಿರ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದೆ. ಸುಮಾರು 37 ಸಾವಿರ ಶಿಕ್ಷಕರು ಹಾಗೂ ಮೂವತ್ತು ಲಕ್ಷ ವಿದ್ಯಾರ್ಥಿಗಳು ವಿದ್ಯಾಭಾರತಿಯ ಯೋಜನೆಯಡಿ ಸಂಪರ್ಕ ಹೊಂದಿದ್ದಾರೆ. ದೇಶದ ಅತೀ ದೊಡ್ಡ ಸರಕಾರೇತರ ಶೈಕ್ಷಣಿಕ ಸಂಘಟನೆ ಎಂಬ ಗರಿಮೆ ಇಂದು ವಿದ್ಯಾಭಾರತಿಯದ್ದಾಗಿದೆ.
ಭಾರತೀಯ ಕಿಸಾನ್ ಸಂಘರೈತರ ಜೀವನ ಮಟ್ಟವನ್ನು ಉತ್ತಮಗೊಳಿ ಸುವುದಕ್ಕಾಗಿ ಕೃಷಿ ಸಂಶೋಧನೆಗೆ ಪ್ರೋತ್ಸಾಹ ಸೇರಿದಂತೆ ಅನೇಕ ರೈತರ ಕಲ್ಯಾಣದ ವಿವಿಧ ಸಂಕಲ್ಪಗಳೊಂದಿಗೆ ಪ್ರಾರಂಭವಾಗಿ ಇವತ್ತು 8 ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಗುಡ್ಡಗಾಡು ಗ್ರಾಮೀಣ ಹಾಗೂ ನಗರಗಳ ಕೊಳೆಗೇರಿಗಳಲ್ಲಿ ವಾಸಿಸುವ ಅವಕಾಶವಂಚಿತರಿಗೆ ನೆರವು ನೀಡುವ ಉದ್ದೇಶದಿಂದ ಪ್ರಾರಂಭವಾದ ಸೇವಾಭಾರತಿಯು 1 ಲಕ್ಷಕ್ಕೂ ಅಧಿಕ ಸೇವಾ ಯೋಜನೆಗಳನ್ನು ಇಂದಿಗೂ ಮುನ್ನಡೆಸುತ್ತಿದೆ. ಇವು ಕೆಲವೇ ಕೆಲವು ಉದಾಹರಣೆಗಳು ಮಾತ್ರ. ಸಮಾಜದ ಎಲ್ಲ ಮಜಲುಗಳಲ್ಲೂ ವ್ಯಾಪಿಸಿರುವ ಸಂಘದ ಎಲ್ಲ ವಿವಿಧ ಕ್ಷೇತ್ರಗಳ ಕಿರು ವಿವರಗಳೇ ಬೃಹತ್ ಬೆಟ್ಟದಷ್ಟಾಗಬಹುದು. ಹಾಗಾಗಿ ಇನ್ನುಳಿದ ಕೆಲವು ಪ್ರಮುಖ ಸಂಘಟನೆಗಳ ಹೆಸರುಗಳನ್ನು ಮಾತ್ರ ನೆನಪಿಸುತ್ತೇನೆ. ಅವುಗಳ ಪ್ರಸ್ತುತ ಕಾರ್ಯಶೈಲಿ ಕಾರ್ಯವ್ಯಾಪ್ತಿ ಖಂಡಿತವಾಗಿಯೂ ನಿಮ್ಮ ಕಣ್ಮುಂದೆ ಬರುತ್ತದೆ. ವಿಶ್ವಹಿಂದೂ ಪರಿಷತ್, ಸ್ವದೇಶಿ ಜಾಗರಣ ಮಂಚ್, ಸಂಸ್ಕೃತ ಭಾರತಿ, ಇತಿಹಾಸ ಸಂಕಲನ ಸಮಿತಿ, ಸಂಸ್ಕಾರ ಭಾರತಿ, ಅಖೀಲ ಭಾರತೀಯ ಅಧಿವಕ್ತಾ ಪರಿಷತ್, ಅಖೀಲ ಭಾರತೀಯ ಸಾಹಿತ್ಯ ಪರಿಷತ್, ಸಹಕಾರ ಭಾರತಿ, ಭಾರತ ವಿಕಾಸ ಪರಿಷತ್, ಹಿಂದೂ ಸೇವಾ ಪ್ರತಿಷ್ಠಾನ, ಕ್ರೀಡಾಭಾರತಿ, ಹಿಂದೂ ಜಾಗರಣ ಮಂಚ್, ಸಾಮಾಜಿಕ ಸಮರಸತಾ ಮಂಚ್, ಆರೋಗ್ಯ ಭಾರತಿ, ವಿಜ್ಞಾನ ಭಾರತಿ, ಲಘು ಉದ್ಯೋಗ ಭಾರತಿ, ಪೂರ್ವ ಸೈನಿಕ ಸೇವಾ ಪರಿಷತ್, ಅಖೀಲ ಭಾರತೀಯ ಗ್ರಾಹಕ ಪಂಚಾಯತ್, ಇತ್ಯಾದಿ. ಇವೆಲ್ಲವೂ ಅಖೀಲ ಭಾರತ ಮಟ್ಟ ಲ್ಲಿ ಮುಂಚೂಣಿಯಲ್ಲಿರುವ ಸಂಘಟನೆಗಳು ಅನ್ನುವುದು ಗಮನಾರ್ಹ ಸಂಗತಿ, ಮಾತ್ರವಲ್ಲ ಅಧ್ಯಯನ ಯೋಗ್ಯವೂ ಹೌದು. ಇನ್ನು ಗತಿವಿಧಿಗಳ ರೂಪದಲ್ಲಿ ಧರ್ಮಜಾಗರಣ, ಕುಟುಂಬ ಪ್ರಬೋಧನ, ಗ್ರಾಮವಿಕಾಸ, ಗೋಸೇವಾ, ಸಾಮರಸ್ಯ -ಹೀಗೆ ಸಮಾಜದ ಪ್ರತಿಯೊಂದು ಪದರಗಳಲ್ಲಿ ಸಂಘ ತಲುಪಿದೆ. ಸಂಘ ಈ ಪ್ರಾಚೀನ ನಾಡಿಗೆ ಮಾಡಿರುವ ಸೇವೆಯ ಅಗಾಧತೆ ಇತರರು ಕಲ್ಪಿಸಿಕೊಂಡಿ ರುವುದ ಕ್ಕಿಂತ ಅನೇಕ ಪಟ್ಟು ಹೆಚ್ಚಾಗಿದೆ. “ಸಿದ್ಧಾಂತ ಮತ್ತು ಆ ಸಿದ್ಧಾಂತ ನ್ನು ಆಧರಿಸಿ ನಿರ್ಮಿಸಲ್ಪಟ್ಟ ಸಂಘಟನೆಯು ತನ್ನ ಬೆಳವಣಿಗೆಯಲ್ಲಿ ನಿರ್ಲಕ್ಷ್ಯ, ಉಪಹಾಸ ಮತ್ತು ಸ್ವೀಕಾರ ಎಂಬ 3 ಹಂತಗಳನ್ನು ಹಾದು ಹೋಗುತ್ತದೆ’ ಎನ್ನುವುದು ಚಿಂತಕರೊಬ್ಬರ ಅಭಿಪ್ರಾಯ. ಸಂಘ ಈ 3 ಹಂತಗಳನ್ನು ಯಶಸ್ವಿಯಾಗಿ ದಾಟಿದೆ. ಸಂಘ ಪ್ರಾರಂಭವಾಗಿ 95 ವರ್ಷಗಳು ಸಂದಿವೆ. ಸಿಲ್ವರ್‌ಜ್ಯುಬಿಲಿ, ಗೋಲ್ಡನ್ ಜ್ಯುಬಿಲಿ, ಪ್ಲಾಟಿನಂ ಜುಬಿಲಿ ಇವೆಲ್ಲವುಗಳನ್ನು ದಾಟಿ ಬಂದಿದೆ, ಆದರೆ ಅಲ್ಲೆಲ್ಲೂ ಆ ಜುಬಿಲಿಗಳ ಆಚರಣೆ ನಡೆದಿಲ್ಲ. ಯಾಕೆಂದರೆ ಸಂಘ ವಿಶ್ವಾಸವಿಟ್ಟಿರುವುದು ಕಾರ್ಯದಲ್ಲಿಯೇ ವಿನಾ ಕಾರ್ಯಕ್ರಮಗಳಲ್ಲಿ ಅಲ್ಲ. ಅದೆಷ್ಟೋ ಬಾರಿ ತನ್ನ ಬುಡಕ್ಕೆ ಕೊಡಲಿ ಏಟು ಬಿದ್ದಾಗಲೂ ಅದನ್ನು ನಿವಾರಿಸಿಕೊಂಡು ಇವತ್ತು ಸಂಘದ ಸಸಿ ಹೆಮ್ಮರವಾಗಿ ತನ್ನೆಲ್ಲ ರೆಂಬೆ ಕೊಂಬೆಗಳಲ್ಲೂ ಯಥೇತ್ಛವಾಗಿ ಫಲವನ್ನು ಧರಿಸಿ ಕಂಗೊಳಿಸುತ್ತಿದೆಯೆಂದರೆ ಅದರ ಅರ್ಥ 1925ರ ವಿಜಯದಶಮಿಯಂದು ಪ್ರಾರಂಭವಾಗಿದ್ದು ಕೇವಲ ಸಂಘ ಮಾತ್ರವಲ್ಲ… – ಪ್ರಕಾಶ್ ಮಲ್ಪೆ, ಉಡುಪಿ