Advertisement

ವಿಜಯ ಬ್ಯಾಂಕ್‌ಗೆ 207 ಕೋಟಿ ನಿವ್ವಳ ಲಾಭ

12:32 PM May 08, 2018 | |

ಬೆಂಗಳೂರು: ಸರ್ಕಾರಿ ಸ್ವಾಮ್ಯದ ವಿಜಯ ಬ್ಯಾಂಕ್‌ 2017-18ನೇ ಸಾಲಿನ ವಿತ್ತ ವರ್ಷದ ನಾಲ್ಕನೇ ತ್ತೈಮಾಸಿಕದಲ್ಲಿ 207 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಬ್ಯಾಂಕಿನ ಕೇಂದ್ರ ಕಚೇರಿಯ ಮುಲ್ಕಿ ಸುಂದರರಾವ್‌ ಶೆಟ್ಟಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ 4ನೇ ತ್ತೈಮಾಸಿಕದ ಹಣಕಾಸು ವರದಿಯ ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆರ್‌.ಎ. ಶಂಕರ ನಾರಾಯಣನ್‌ ಅವರು, ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದಲ್ಲಿ ಬ್ಯಾಂಕಿನ ವಹಿವಾಟು ಶೇ.20.07ರಷ್ಟು ಹೆಚ್ಚಳವಾಗಿದೆ. ಅದರಲ್ಲಿ ಶೇ.22.57 ರಷ್ಟು ಅಂದರೆ 1,18,677 ಕೋಟಿ ರೂ. ಸಾಲದ ರೂಪದಲ್ಲಿ ಹಾಗೂ ಶೇ.18.25ರಷ್ಟು (1,57,288 ಕೋಟಿ ರೂ.) ಠೇವಣಿ ರೂಪದಲ್ಲಿದೆ ಬಂದಿದೆ ಎಂದರು.

Advertisement

ಬ್ಯಾಂಕ್‌ ಅಂತಿಮ ತ್ತೈಮಾಸಿಕದಲ್ಲಿ 207 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದ್ದು, ಇದು ಮೂರನೇ ತ್ತೈಮಾಸಿಕಕ್ಕಿಂತ 127 ಕೋಟಿ ರೂ. ಹೆಚ್ಚಳ ಎನಿಸಿದೆ. ಆದರೆ, ಕಾರ್ಯಚರಣಾ ಲಾಭದಲ್ಲಿ 3098 ಕೋಟಿ ರೂ.ಗಳ  ಗಳಿಸಿರುವುದು ದಾಖಲೆಯಾಗಿದೆ. ಆದರೆ, ನಿವ್ವಳ ಲಾಭ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಕೇವಲ ಮೂರು ಕೋಟಿಗಳು ಮಾತ್ರ ಏರಿಕೆಯಾಗಿದೆ. ಒಟ್ಟಾರೆ, 2017-18ನೇ ಸಾಲಿನಲ್ಲಿ ನಿವ್ವಳ ಲಾಭ 727 ಕೋಟಿ ರೂ.ಗಳಾಗಿದೆ. 

ಲಾಭದಾಯಕವಲ್ಲದ ಸ್ವತ್ತು (ಎನ್‌ಪಿಎ) ಶೇ.6.59 ರಿಂದ ಶೇ.6.34 ಇಳಿಕೆಯಾಗಿರುವುದು ಬ್ಯಾಂಕಿನ ಅಭಿವೃದ್ಧಿಯ ಹಾದಿಯನ್ನು ಸೂಚಿಸುತ್ತದೆ. ಅಲ್ಲದೆ, ಈ ಅವಧಿಯಲ್ಲಿ ಗೃಹ ಸಾಲ ಶೇ.30.50 ರಷ್ಟು ಹಾಗೂ ಸಿಆರ್‌ಎಆರ್‌ (ಬೆಸೆಲ್‌-3) ಪ್ರತಿಶತ 13.90ಕ್ಕೆ ತಲುಪಿರುವುದು ಸಂತಸ ತಂದಿದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾದ ವೈ. ನಾಗೇಶ್ವರ ರಾವ್‌ ಹಾಗೂ ಮುರಳಿ ರಾಮಸ್ವಾಮಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next