Advertisement

Vijaya Raghavendra; ಸೆನ್ಸಾರ್‌ ಪಾಸಾದ ʼರಿಪ್ಪನ್‌ ಸ್ವಾಮಿʼ

02:40 PM Dec 08, 2024 | Team Udayavani |

ನಟ ವಿಜಯ ರಾಘವೇಂದ್ರ ಭಿನ್ನ-ವಿಭಿನ್ನ ಪಾತ್ರ, ಸಿನಿಮಾಗಳನ್ನು ಪ್ರಯತ್ನಿಸುತ್ತಲೇ ಇರುತ್ತಾರೆ. ಈಗ ಇದೇ ರೀತಿ ಹೊಸ ಗೆಟಪ್‌ನಲ್ಲಿ ಅವರು ಕಾಣಿಸಿಕೊಂಡಿರುವ ಅವರ ಹೊಸ ಚಿತ್ರ “ರಿಪ್ಪನ್‌ ಸ್ವಾಮಿ’ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಇತ್ತೀಚೆಗೆ ಚಿತ್ರ ಸೆನ್ಸಾರ್‌ ಪಾಸಾಗಿದ್ದು, ಯು/ಎ ಪ್ರಮಾಣ ಪತ್ರ ಪಡೆದುಕೊಂಡಿದೆ. ಚಿತ್ರ ಜನವರಿಯಲ್ಲಿ ತೆರೆಕಾಣಲಿದೆ.

Advertisement

ಮಲೆನಾಡಿನ ಹಳ್ಳಿಯೊಂದರಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾ ಹೊಂದಿದೆ. ಪಂಚಾಂನನ ಫಿಲಂಸ್‌ ನಿರ್ಮಾಣದ ಈ ಸಿನಿಮಾವನ್ನು ಕಿಶೋರ್‌ ಮೂಡುಬಿದ್ರೆ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ “ಮಾಲ್ಗುಡಿ ಡೇಸ್‌’ ಸಿನಿಮಾ ಮಾಡಿದ್ದ ಕಿಶೋರ್‌ ಈಗ ಹೊಸ ಜಾನರ್‌ ಪ್ರಯತ್ನಿಸಿದ್ದಾರೆ.

ಚಿತ್ರದ ತಾರಾಗಣದಲ್ಲಿ ಅಶ್ವಿ‌ನಿ ಚಂದ್ರಶೇಖರ್‌, ಪ್ರಕಾಶ್‌ ತುಮ್ಮಿ ನಾಡು ,ವಜ್ರಧೀರ್‌ ಜೈನ್‌ ,ಯಮುನಾ ಶ್ರೀನಿಧಿ ಸೇರಿದಂತೆ ಅನೇಕರು ನಟಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು 48 ದಿನಗಳ ಚಿತ್ರೀಕರಣವನ್ನು ಕೊಪ್ಪ, ಕಳಸ, ಬಾಳೆಹೊನ್ನೂರು ಸುತ್ತಮುತ್ತ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next