Advertisement

ಕ್ರೈಮ್‌ ಥ್ರಿಲ್ಲರ್‌ನಲ್ಲಿ ವಿಜಯ ರಾಘವೇಂದ್ರ

12:48 PM Oct 28, 2020 | Suhan S |

ನಟ ವಿಜಯ ರಾಘವೇಂದ್ರ ಈಗ 50ನೇ ಸಿನಿಮಾದ ಹೊಸ್ತಿಲಿನಲ್ಲಿದ್ದಾರೆ. ಈಗಾಗಲೇ ಸದ್ದಿಲ್ಲದೇ ಹೊಸ ಸಿನಿಮಾದ ಚಿತ್ರೀಕರಣ ಕೂಡಾ ಮುಗಿಸಿದ್ದಾರೆ ವಿಜಯ ರಾಘವೇಂದ್ರ. ನಾಯಕ ನಟರಾಗಿ ನಟಿಸಿರುವ 50ನೇ ಸಿನಿಮಾದ ಫ‌ಸ್ಟ್ ‌ಲುಕ್‌ ಬಿಡುಗಡೆಯಾಗಿದೆ. ಅದು “ಸೀತಾರಾಮ್‌ ಭಿನೋಯ್‌ ಕೇಸ್‌ ನಂ.18′. ಈ ಚಿತ್ರವನ್ನು ದೇವಿಪ್ರಸಾದ್‌ ಶೆಟ್ಟಿ ಎನ್ನುವವರು ನಿರ್ದೇಶಿಸಿದ್ದಾರೆ. ಇವರಿಗಿದು ಚೊಚ್ಚಲ ಸಿನಿಮಾ. ಈ ಚಿತ್ರದಲ್ಲಿ ವಿಜಯ ರಾಘವೇಂದ್ರ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದಾರೆ.

Advertisement

ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈಗ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ಬಿಝಿಯಾಗಿದೆ. ಆಗಸ್ಟ್‌ನಲ್ಲಿ ಚಿತ್ರೀಕರಣ ಆರಂಭಿಸಿ, 20 ದಿನಗಳ ಕಾಲ ಚಿತ್ರೀಕರಿಸಿದೆ. ಇದೊಂದು ಕ್ರೈಂ ಥ್ರಿಲ್ಲರ್‌ ಚಿತ್ರವಾಗಿದ್ದು, ಶಿವಮೊಗ್ಗ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ನವಪ್ರತಿಭೆ ಅಕ್ಷತಾ ನಾಯಕಿಯಾಗಿದ್ದಾರೆ. ಚಿತ್ರದ ನಿರ್ದೇಶನದ ಜೊತೆಗೆ ದೇವಿಪ್ರಸಾದ್‌ ಅವರು ನಿರ್ಮಾಣದಲ್ಲೂ ಸಾಥ್‌ ನೀಡಿದ್ದು, ಇವರ ಜೊತೆ ಸಾತ್ವಿಕ್‌ ಹೆಬ್ಟಾರ್‌ ಕೈ ಜೋಡಿಸಿದ್ದಾರೆ.

ಚಿತ್ರಕ್ಕೆ ಗಗನ್‌ ಬಡೇರಿಯಾ ಸಂಗೀತ, ಹೇಮಂತ್‌ ಛಾಯಾಗ್ರಹಣವಿದೆ. ಚಿತ್ರಮಂದಿರಗಳು ಸಹಜ ಸ್ಥಿತಿಗೆ ಬಂದರೆ ಡಿಸೆಂಬರ್‌ ಅಥವಾ ಜನವರಿಯಲ್ಲಿ ಚಿತ್ರಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ.

 

ಸಾಹಸ ನಿರ್ದೇಶಕರ ಕನಸಿನ ಸಾಹಸ ನಿಲಯ : ಸಿನಿಮಾದಲ್ಲಿ ಸಾಹಸ ಸನ್ನಿವೇಶಗಳು ಚೆನ್ನಾಗಿ ಮೂಡಿಬರುವಲಿ ಸಾಹಸ ನಿರ್ದೇಶಕರ ಪಾತ್ರ ಮಹತ್ವದು. ಕನ್ನಡದ ಸಾಕಷ್ಟು ಸಾಹಸ ನಿರ್ದೇಶಕರು ಭಾರತದಾದ್ಯಂತ ಅನೇಕ ಭಾಷೆಯ ಸಿನಿಮಾಗಳಲ್ಲಿ ಕಾರ್ಯನಿರ್ವಹಿಸಿ ಪ್ರಸಿದ್ದರಾಗಿದ್ದಾರೆ. ಈಗ ಸಾಹಸ ನಿರ್ದೇಶಕರು ತಮ್ಮದೇ ಆದ ನೂತನ ಕಟ್ಟಡ ಹೊಂದಿದ್ದಾರೆ.

Advertisement

ವಿಜಯ ದಶಮಿಯಂದು ಅಖೀಲ ಕರ್ನಾಟಕ ಸಾಹಸ ಕಲಾವಿದರ ಸಂಘದ ನೂತನ ಕಟ್ಟಡ “ಸಾಹಸ ನಿಲಯ’ದ ಉದ್ಘಾಟನೆಯಾಗಿದೆ. ನಾಯಂಡಹಳ್ಳಿಯ ಐ ಟಿ ಐ ಲೇಔಟ್‌ನಲ್ಲಿ ಅಖೀಲ ಕರ್ನಾಟಕ ಸಾಹಸ ಕಲಾವಿದರ ಸಂಘದ ಕಟ್ಟಡವಿದೆ.  ನಟರಾದ ವಿನೋದ್‌ ಪ್ರಭಾಕರ್‌, ತರುಣ್‌ ಸುಧೀರ್‌, ಥ್ರಿಲ್ಲರ್‌ ಮಂಜು, ರವಿವರ್ಮ, ಡಿಫ‌ರೆಂಟ್‌ ಡ್ಯಾನಿ ಸೇರಿದಂತೆ ಅನೇಕ ಸಾಹಸ ನಿರ್ದೇಶಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next