Advertisement

ಅಪ್ಪು ನೆನಪಲ್ಲಿ ವಿಜಯ್‌ ಪ್ರಕಾಶ್‌

02:15 PM Feb 23, 2022 | Team Udayavani |

“ಅದೊಂದು ದಿನ ನಾನು ಹಾಡಿದ ಹಾಡು ಕೇಳಿದ ಪುನೀತ್‌ರಾಜ್‌ಕುಮಾರ್‌, ನನಗೆ ಕರೆ ಮಾಡಿ, “ನೀವು ಎಲ್ಲಿದ್ದೀರಾ ಹೇಳಿ, ನಾನು ಅಲ್ಲಿಗೆ ಬರುತ್ತೇನೆ’ ಎಂದರು. ಆಗ ನಾನು, “ಇಲ್ಲ ಅಣ್ಣ, ನಾನೇ ಬರುತ್ತೇನೆ’ ಎಂದು ಅವರ ಮನೆಗೆ ಹೋದೆ. ನಾನು ಹಾಡಿದ ಹಾಡನ್ನು ಮೆಚ್ಚಿಕೊಂಡು, ತುಂಬಾ ಹೊತ್ತು ಆ ಹಾಡಿನ ಬಗ್ಗೆ ಮಾತನಾಡಿ, ಒಂದಷ್ಟು ಉಡುಗೊರೆ ಕೊಟ್ಟರು. ಆ ಎಲ್ಲವನ್ನು ಜೋಪಾನವಾಗಿ ಇಟ್ಟುಕೊಂಡಿದ್ದೀನಿ’- ಹೀಗೆ ಹೇಳುತ್ತಾ ಕೊಂಚ ಭಾವುಕರಾದರು ಗಾಯಕ ವಿಜಯ್‌ ಪ್ರಕಾಶ್‌.

Advertisement

ಅದಕ್ಕೆ ಕಾರಣವಾಗಿದ್ದು, ಸೆಲೆಬ್ರೇಶನ್‌ ಟೀ ಆಯೋಜಿಸಿದ್ದ ವಿಜಯ್‌ ಪ್ರಕಾಶ್‌ ಬರ್ತ್‌ಡೇ ಸೆಲೆಬ್ರೇಶನ್‌.

ಇದನ್ನೂ ಓದಿ:ಮೊಣಕಾಲಿನ ಗಾಯದಿಂದ ಗುಣಮುಖ: ಅಭ್ಯಾಸಕ್ಕೆ ಮರಳಿ ಸಂತಸ ವ್ಯಕ್ತ ಪಡಿಸಿದ ಜಡೇಜಾ

ಚಂದನ್‌ ಹಾಗೂ ಪವನ್‌ ಅವರು ಸ್ಥಾಪಿಸಿರುವ ಸೆಲೆಬ್ರೇಶನ್‌ ಟೀ ಸಂಸ್ಥೆಯ ರಾಯಭಾರಿ. ಈ ಹಿನ್ನೆಲೆಯಲ್ಲಿ ಸಂಸ್ಥೆ ಹುಟ್ಟುಹಬ್ಬ ಆಚರಣೆ ಮಾಡಿತ್ತು. ಈ ಸಂದರ್ಭದಲ್ಲಿ ವಿಜಯ್‌ ಪ್ರಕಾಶ್‌ ಅಪ್ಪು ನೆನಪಿನ ಜೊತೆ ಕೆಲವು ಹಾಡುಗಳನ್ನು ಕೂಡಾ ಹಾಡಿದರು. ಇದೇ ವೇಳೆ ಸೆಲೆಬ್ರೇಶನ್‌ ಸಂಸ್ಥೆಯ ಸಾಧನೆಗೆ ಮೆಚ್ಚುಗೆ ಸೂಚಿಸಿದರು

Advertisement

Udayavani is now on Telegram. Click here to join our channel and stay updated with the latest news.

Next