Advertisement

ಭಾರತಕ್ಕೆ ಗಡೀಪಾರು ವಿರುದ್ಧ ವಿಜಯ್‌ ಮಲ್ಯ ಮನವಿ ಬ್ರಿಟನ್‌ ಕೋರ್ಟಿನಲ್ಲಿ ತಿರಸ್ಕೃತ

09:09 AM Apr 09, 2019 | Sathish malya |

ಹೊಸದಿಲ್ಲಿ : ತನ್ನನ್ನು ಭಾರತಕ್ಕೆ ಗಡೀಪಾರು ಗೊಳಿಸಬಾರದೆಂದು ಮದ್ಯ ದೊರೆ, 63ರ ಹರೆಯದ ವಿಜಯ್‌ ಮಲ್ಯ ಮಾಡಿಕೊಂಡಿದ್ದ ಮನವಿಯನ್ನು ಬ್ರಿಟನ್‌ ಕೋರ್ಟ್‌ ತಿರಸ್ಕರಿಸಿದೆ.

Advertisement

ಭಾರತೀಯ ಬ್ಯಾಂಕುಗಳಿಗೆ 9,000 ಕೋಟಿ ರೂ. ಸಾಲ ಬಾಕಿ ಇರಿಸಿ ವಿದೇಶಕ್ಕೆ ಪಲಾಯನ ಮಾಡಿದ್ದ ವಿಜಯ್‌ ಮಲ್ಯ ಗೆ ಬ್ರಿಟನ್‌ ಕೋರ್ಟಿನ ಈ ಆದೇಶ ಆಘಾತ ಉಂಟುಮಾಡಿದೆ; ಅಂತೆಯೇ ಮಲ್ಯ ಈಗಿನ್ನು ಬೇಗನೆ ಭಾರತಕ್ಕೆ ಗಡೀಪಾರಾಗುವುದು ಖಚಿತವಾಗಿದೆ.

ವಿಜಯ್‌ ಮಲ್ಯ ಕಳೆದ 2016ರ ಮಾರ್ಚ್‌ ತಿಂಗಳಿಂದಲೂ ಬ್ರಿಟನ್‌ನಲ್ಲಿ ನೆಲೆಸಿದ್ದಾರೆ. 2017ರ ಎಪ್ರಿಲ್‌ ನಲ್ಲಿ ಸ್ಕಾಟ್ಲಂಡ್‌ ಯಾರ್ಡ್‌ ಜಾರಿಗೊಳಿಸಿದ್ದ ಗಡೀಪಾರು ವಾರಂಟ್‌ ವಿರುದ್ಧ ಪಡೆದು ಕೊಳ್ಳಲಾಗಿದ್ದ ಜಾಮೀನಿನ ಆಧಾರದಲ್ಲಿ ಈ ತನಕವೂ ಬ್ರಿಟನ್‌ನಲ್ಲೇ ಉಳಿದುಕೊಳ್ಳಲು ಮಲ್ಯಗೆ ಸಾಧ್ಯವಾಗಿತ್ತು.

ಭಾರತ ಮತ್ತು ಬ್ರಿಟನ್‌ 1992ರಲ್ಲಿ ಗಡೀಪಾರು ಒಪ್ಪಂದಕ್ಕೆ ಸಹಿ ಹಾಕಿದ್ದು 1993ರ ನವೆಂಬರ್‌ ನಿಂದ ಈ ಒಪ್ಪಂದ ಜಾರಿಯಲ್ಲಿದೆ.

ಬ್ರಿಟನ್‌ನಿಂದ ಭಾರತಕ್ಕೆ ಈ ವರೆಗೆ ಕೇವಲ ಒಂದೇ ಒಂದು ಗಡೀಪಾರು ಉಪಕ್ರಮ ಯಶಸ್ವಿಯಾಗಿದೆ. ಅದೆಂದರೆ ಗೋದ್ರಾ ನಂತನದಲ್ಲಿ 2002ರಲ್ಲಿ ಸಂಭವಿಸಿದ್ದ ದೊಂಬಿಯಲ್ಲಿ ಶಾಮೀಲಾಗಿದ್ದ ಆರೋಪಿ ಸಮೀರ್‌ಭಾಯಿ ವಿನೂಭಾಯಿ ಪಟೇಲ್‌ ನನ್ನು ಭಾರತದಲ್ಲಿ ತನಿಖೆ ಎದುರಿಸಲು 2016ರಲ್ಲಿ ಭಾರತಕ್ಕೆ ಗಡೀಪಾರು ಮಾಡಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next