Advertisement

ಸ್ವಿಸ್‌ ಬ್ಯಾಂಕ್‌ ಸಾಲ ತೀರಿಸಲು ಮುಂದಾದ ವಿಜಯ್‌ ಮಲ್ಯ

04:39 AM May 15, 2019 | mahesh |
ಲಂಡನ್‌: ಸ್ವಿಜರ್ಲೆಂಡ್‌ನ‌ ಯುಎಸ್‌ಬಿ ಬ್ಯಾಂಕ್‌ಗೆ ತಾವು ನೀಡಬೇಕಿದ್ದ ಸಾಲ ಬಾಕಿ ಪ್ರಕರಣವನ್ನು ಉದ್ಯಮಿ ವಿಜಯ್‌ ಮಲ್ಯ ಇತ್ಯರ್ಥಗೊಳಿಸಿಕೊಂಡಿದ್ದಾರೆ. ಮುಂದಿನ ಎಪ್ರಿಲ್ನೊಳಗೆ ಬ್ಯಾಂಕಿಗೆ ನೀಡಬೇಕಿರುವ ಬಾಕಿ ಮೊತ್ತವನ್ನು ಪಾವತಿಸುವ ಖಾತ್ರಿಯನ್ನು ಮಲ್ಯ ನೀಡಿದ್ದಾರೆಂದು ಹೇಳಲಾಗಿದೆ. ಲಂಡನ್‌ನ ಕೇಂದ್ರ ಭಾಗದಲ್ಲಿರುವ ಕಾರ್ನ್ವೆಲ್ ಟೆರೇಸ್‌ ಅಪಾರ್ಟ್‌ಮೆಂಟ್‌ನ ಖರೀದಿಗಾಗಿ ಆ ಬ್ಯಾಂಕಿನಿಂದ ಮಲ್ಯ ಅವರು, 20.4 ಮಿಲಿಯನ್‌ ಪೌಂಡ್‌ಗಳ (ಅಂದಾಜು 185 ಕೋಟಿ ರೂ.) ಸಾಲ ಪಡೆದಿದ್ದರು. ಸಾಲ ಮರು ಪಾವತಿ ಮಾಡದ ಹಿನ್ನೆಲೆಯಲ್ಲಿ ಕಾನೂನಾತ್ಮಕ ಕ್ರಮ ಕೈಗೊಂಡಿದ್ದ ಬ್ಯಾಂಕ್‌, ಅಪಾರ್ಟ್‌ಮೆಂಟ್ ಅನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು.
Advertisement

Udayavani is now on Telegram. Click here to join our channel and stay updated with the latest news.

Next