Advertisement

ಮತ್ತೂಮ್ಮೆ ಸೋತ ಮಲ್ಯ

08:15 AM Feb 13, 2018 | Team Udayavani |

ಲಂಡನ್‌: ಉದ್ಯಮಿ ವಿಜಯ್‌ ಮಲ್ಯ ಕಿಂಗ್‌ಫಿಷರ್‌ ಏರ್‌ಲೈನ್ಸ್‌ಗೆ ಸಂಬಂಧಿಸಿದಂತೆ ಮತ್ತೂಂದು ಪ್ರಕರಣದಲ್ಲಿ ಹಿನ್ನಡೆ ಅನುಭವಿಸಿ ದ್ದಾರೆ. ಭಾರತದಲ್ಲಿ 9 ಸಾವಿರ ಕೋಟಿ ರೂ. ಸಾಲ ಸುಸ್ತಿದಾರರಾಗಿರುವ ಮಲ್ಯ, ಇಂಗ್ಲೆಂಡ್‌ನ‌ಲ್ಲಿ ಬಿಒಸಿ ಏವಿಯೇಶನ್‌ ಕಂಪನಿಯ ವಿಮಾನ ಗಳನ್ನು ಬಾಡಿಗೆಗೆ ಪಡೆದ ಪ್ರಕರಣದಲ್ಲಿ 550 ಕೋಟಿ ರೂ. ದಂಡ ಪಾವತಿಗೆ ಆಗ್ರಹಿಸಿದ್ದರು. ಆದರೆ ಇಂಗ್ಲೆಂಡ್‌ ಹೈಕೋರ್ಟ್‌ ಇದನ್ನು ನಿರಾಕರಿಸಿದ್ದು, ಈ ಪ್ರಕರಣದಲ್ಲಿ ಮಲ್ಯ ಸೋಲನುಭವಿಸಿದ್ದಾರೆ.

Advertisement

ಕ್ಲೇಮ್‌ ಅನ್ನು ಯಶಸ್ವಿಯಾಗಿ ಸಮರ್ಥಿಸಿಕೊಳ್ಳಲು ದೂರುದಾರರಿಗೆ ಸಾಧ್ಯವಾಗಿಲ್ಲ. ಹೀಗಾಗಿ ಪ್ರಕರಣವನ್ನು ವಜಾ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ನಾಲ್ಕು ವಿಮಾನಗಳನ್ನು ಭೋಗ್ಯಕ್ಕೆ ಪಡೆಯುವ ಸಂಬಂಧ ಬಿಒಸಿ ಏವಿಯೇಶನ್‌ ಮತ್ತು ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಮಧ್ಯೆ ಒಪ್ಪಂದ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next