Advertisement

2ನೇ ಬಾರಿಗೆ ಉದ್ಯಮಿ ಮಲ್ಯ ಬಂಧನ, ಬಿಡುಗಡೆ

09:56 AM Oct 04, 2017 | Team Udayavani |

ಲಂಡನ್‌: ಕೋಟಿಗಟ್ಟಲೆ ಸಾಲದ ಸುಸ್ತಿ ದಾರನಾಗಿ ಲಂಡನ್‌ಗೆ ಪರಾರಿಯಾಗಿ ರುವ ಉದ್ಯಮಿ ವಿಜಯ ಮಲ್ಯ ಅವರನ್ನು ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿ ದಂತೆ ಮಂಗಳವಾರ ಬಂಧಿಸಿ, ಬಿಡುಗಡೆ ಮಾಡಲಾಗಿದೆ. ಯುನೈಟೆಡ್‌ ಕಿಂಗ್‌ಡಮ್‌ನ ವೆಸ್ಟ್‌ಮಿನಿಸ್ಟರ್‌ನಲ್ಲಿರುವ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಮಲ್ಯ ಬಂಧನವಾದ ಅರ್ಧ ಗಂಟೆಯಲ್ಲೇ ಜಾಮೀನು ನೀಡಿದೆ. 

Advertisement

ಎಸ್‌ಬಿಐ ಸೇರಿದಂತೆ ಪ್ರಮುಖ ಬ್ಯಾಂಕ್‌ಗಳಿಂದ ಪಡೆದ ಸಾಲವನ್ನು ನಕಲಿ ಕಂಪೆನಿ ಗಳಿಗೆ ವರ್ಗಾಯಿಸಿದ್ದ ಕುರಿತು ಜಾರಿ ನಿರ್ದೇ ಶನಾಲಯ (ಇ.ಡಿ)  ಪ್ರಕರಣ ದಾಖಲಿಸಿತ್ತು. ಮಲ್ಯ ಹಣಕಾಸು ಅಕ್ರಮ ಎಸಗಿದ್ದಾರೆ ಎಂದು ಸಾಬೀತು ಮಾಡುವ ನಿಟ್ಟಿನಲ್ಲಿ ಸಿಬಿಐ ಮತ್ತು ಇಡಿ ಪ್ರತ್ಯೇಕವಾಗಿ ಸಲ್ಲಿಕೆ ಮಾಡಿರುವ ಕೇಸುಗಳನ್ನು ಒಂದೇ ಎಂದು ಪರಿಗಣಿಸಿ ಆ ಮೂಲಕ ಅವರ ವಿರುದ್ಧ ಕೇಸು ಬಲಗೊಳಿಸಲು ಕೇಂದ್ರ ಸರಕಾರ ಯೋಚಿಸುತ್ತಿದೆ. ಮಲ್ಯ ವಿರುದ್ಧ ದಾಖಲಾಗಿ ರುವ ಪ್ರಕರಣಗಳ ವಿಚಾರಣೆ ಡಿ.4ರಿಂದ 2 ವಾರ ನಡೆಯಲಿದೆ. ಎ. 18ರಂದು ಪೊಲೀಸರು ಅವರನ್ನು ಬಂಧಿಸಿದ್ದರೂ, ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next