Advertisement
ಎರಡೂ ತಂಡಗಳು ಲೀಗ್ ಹಂತದಲ್ಲಿ ಸಮಬಲದ ಸಾಧನೆ ಯೊಂದಿಗೆ ನಾಕೌಟ್ ಪ್ರವೇಶಿಸಿದ್ದವು. ಕರ್ನಾಟಕ “ಎ’ ವಿಭಾಗದಲ್ಲಿ 18 ಅಂಕದೊಂದಿಗೆ ದ್ವಿತೀಯ ಸ್ಥಾನಿ ಯಾದರೆ, ಮಹಾರಾಷ್ಟ್ರ “ಬಿ’ ವಿಭಾಗದಲ್ಲಿ ಇಷ್ಟೇ ಅಂಕ ಗಳಿಸಿ ಅಗ್ರಸ್ಥಾನಿಯಾಗಿ ಹೊರಹೊಮ್ಮಿತ್ತು. ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ತಂಡ ಹೈದರಾಬಾದನ್ನು ಉರುಳಿಸಿದರೆ, ಮಹಾರಾಷ್ಟ್ರ ಮುಂಬಯಿಗೆ ನೀರು ಕುಡಿಸಿತು.
ಬೌಲಿಂಗ್‌ನಲ್ಲಿ ವಿನಯ್ ಕುಮಾರ್ ಇಲ್ಲದಿರುವುದೊಂದು ಕೊರತೆ. ಆದರೆ ಪ್ರಸಿದ್ಧ್ ಕೃಷ್ಣ, ಟಿ. ಪ್ರದೀಪ್, ರೋನಿತ್ ಮೋರೆ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಗುತ್ತಿ ದ್ದಾರೆ. ಆಲ್‌ರೌಂಡರ್‌ಗಳಾದ ಕೆ. ಗೌತಮ್, ಶ್ರೇಯಸ್ ಗೋಪಾಲ್ ಮತ್ತು ಸ್ಟುವರ್ಟ್ ಬಿನ್ನಿ ಅವರಿಂದ ಕರ್ನಾಟಕ ಹೆಚ್ಚು ಸಶಕ್ತವಾಗಿದೆ. ಮಹಾರಾಷ್ಟ್ರವನ್ನು ರಾಹುಲ್ ತ್ರಿಪಾಠಿ ಮುನ್ನಡೆಸುತ್ತಿದ್ದಾರೆ. ಶ್ರೀಕಾಂತ್ ಮುಂಢೆ, ಅಂಕಿತ್ ಭವೆ° ಅವರ ಬ್ಯಾಟಿಂಗನ್ನು ಹೆಚ್ಚು ಅವಲಂಬಿಸಿದೆ. ಪ್ರದೀಪ್ ದಾಢೆ, ಪ್ರಶಾಂತ್ ಕೋರೆ ಪ್ರಮುಖ ಬೌಲರ್‌ಗಳಾಗಿದ್ದಾರೆ. ಮುಂಬಯಿಯನ್ನು ಮಣಿಸುವಲ್ಲಿ ಈ ಐವರ ಪಾಲು ಮಹತ್ವದ್ದಾಗಿತ್ತು.