Advertisement

ವಿಜಯ್‌ ಹಜಾರೆ ಏಕದಿನ ಕರ್ನಾಟಕಕ್ಕೆ ಹ್ಯಾಟ್ರಿಕ್‌ ಜಯ

11:17 AM Mar 01, 2017 | Harsha Rao |

ಕೋಲ್ಕತಾ: ರಾಜ್ಯ ಬೌಲರ್‌ಗಳ ಘಾತಕ ಬೌಲಿಂಗ್‌ ದಾಳಿಯಿಂದಾಗಿ ವಿಜಯ್‌ ಹಜಾರೆ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಆತಿಥೇಯ ಕರ್ನಾಟಕ 73 ರನ್‌ ಗೆಲವು ಸಾಧಿಸಿದೆ. ಹ್ಯಾಟ್ರಿಕ್‌ ಜಯಭೇರಿಯೊಂದಿಗೆ ನಾಗಾಲೋಟಗೈದಿದೆ.

Advertisement

ಕೋಲ್ಕತಾದ “ಈಡನ್‌ ಗಾರ್ಡನ್ಸ್‌’ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ ದೊಡ್ಡ ಮೊತ್ತವೇನೂ ಪೇರಿಸಲಿಲ್ಲ. 47.1 ಓವರ್‌ಗಳಲ್ಲಿ ಕೇವಲ 201 ರನ್ನಿಗೆ ಆಲೌಟ್‌ ಆಯಿತು. ಈ ಗುರಿ ಬೆನ್ನು ಹತ್ತಿದ ಸೌರಾಷ್ಟ್ರ ಬ್ಯಾಟ್ಸ್‌ಮನ್‌ಗಳು ಕರ್ನಾಟಕ ಬೌಲರ್‌ಗಳ ಮಾರಕ ದಾಳಿಗೆ ಸಾಲು ಸಾಲಾಗಿ ಉದುರತೊಡಗಿದರು. 27 ರನ್‌ ಆಗುವಷ್ಟರಲ್ಲಿಯೇ 5 ವಿಕೆಟ್‌ ಕಳೆದುಕೊಂಡು ಭಾರೀ ಅಂತರದ ಸೋಲಿನ ಸೂಚನೆ ನೀಡಿದರು. ಆದರೆ ಜಯದೇವ್‌ ಶಾ (38), ಚಿರಾಜ್‌ ಜಾನಿ (ಅಜೇಯ 25) ತಂಡಕ್ಕೆ ಅಲ್ಪ ಚೇತರಿಕೆ ನೀಡಿದರು. ಅನಂತರ ಶೌರ್ಯ ಸನದಿಯ (31) ಹೊರತು ಪಡಿಸಿ ಉಳಿದ ಬ್ಯಾಟ್ಸ್‌ಮನ್‌ಗಳು ಎರಡಂಕಿಯ ಮೊತ್ತ ದಾಟಲಿಲ್ಲ.

ಹೀಗಾಗಿ ಸೌರಾಷ್ಟ್ರ 36.2 ಓವರ್‌ನಲ್ಲಿಯೇ 128 ರನ್‌ಗೆ ಎಲ್ಲ ವಿಕೆಟ್‌ ಕಳೆದುಕೊಂಡು ಸೋಲುಂಡಿತು. ಕರ್ನಾಟಕದ ಪರ ಬಿಗು ದಾಳಿ ನಡೆಸಿದ ರೋನಿತ್‌ ಮೋರೆ 4 ವಿಕೆಟ್‌ ಉರುಳಿಸಿದರೆ, ಪ್ರಸಿದ್ಧ್ ಕೃಷ್ಣ ಮತ್ತು ಸ್ಟುವರ್ಟ್‌ ಬಿನ್ನಿ ತಲಾ 2 ವಿಕೆಟ್‌ ಪಡೆದರು.

ರಾಜ್ಯಕ್ಕೆ ಅಗರ್ವಾಲ್‌ ಆಸರೆ
ಮೊದಲು ಬ್ಯಾಟಿಂಗ್‌ ಮಾಡಲಿಳಿದ ಕರ್ನಾಟಕ 2ನೇ ಎಸೆತದಲ್ಲಿಯೇ ರಾಬಿನ್‌ ಉತ್ತಪ್ಪ ವಿಕೆಟ್‌ ಕಳೆದುಕೊಂಡಿತು. ಉತ್ತಪ್ಪ ಖಾತೆಯನ್ನೇ ತೆರೆದಿರಲಿಲ್ಲ. ಅನಂತರವೂ ಕರ್ನಾಟಕ ಒಂದು ಕಡೆಯಿಂದ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ಆದರೆ ಮತ್ತೂಂಡೆದೆ ಆರಂಭಿಕ ಬ್ಯಾಟ್ಸ್‌ಮನ್‌ ಮಾಯಾಂಕ್‌ ಅಗರ್ವಾಲ್‌ ಕ್ರೀಸ್‌ಗೆ ಅಂಟಿಕೊಂಡು ನಿಂತರು. 114 ಎಸೆತ ಎದುರಿಸಿದ ಅಗರ್ವಾಲ್‌ ಒಂದು ಸಿಕ್ಸರ್‌, 5 ಬೌಂಡರಿ ಸೇರಿದಂತೆ 89 ರನ್‌ ಬಾರಿಸಿದರು. 

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ-47.1 ಓವರ್‌ಗಳಲ್ಲಿ 201 (ಮಾಯಾಂಕ್‌ ಅಗರ್ವಾಲ್‌ 89, ಸ್ಟುವರ್ಟ್‌ ಬಿನ್ನಿ 31, ಕುಶಂಗ್‌ ಪಟೇಲ್‌ 36ಕ್ಕೆ 4).ಸೌರಾಷ್ಟ್ರ-36.2 ಓವರ್‌ಗಳಲ್ಲಿ 128 (ಜಯದೇವ್‌ ಶಾ 38, ಚಿರಾಗ್‌ ಜಾನಿ 28, ರೋನಿತ್‌ ಮೋರೆ 20ಕ್ಕೆ 4).

Advertisement
Advertisement

Udayavani is now on Telegram. Click here to join our channel and stay updated with the latest news.

Next