Advertisement
ಇವರಿಬ್ಬರ ಜತೆಗೆ ಕರ್ನಾಟಕದ ನಾಯಕ ರವಿಕುಮಾರ್ ಸಮರ್ಥ್ ಕೂಡ ಪ್ರಚಂಡ ಫಾರ್ಮ್ನಲ್ಲಿದ್ದು, ಎದುರಾಳಿ ಬೌಲರ್‌ಗಳಿಗೆ ತಲೆನೋವಾಗಿ ಪರಿಣಮಿಸುವ ಎಲ್ಲ ಸಾಧ್ಯತೆ ಇದೆ.
Related Articles
ಪಡಿಕ್ಕಲ್-ಸಮರ್ಥ್ ಜೋಡಿಯ ಹೊರತಾಗಿಯೂ ಕರ್ನಾಟಕ ತಂಡ ಹೆಚ್ಚು ಬಲಿಷ್ಠವಾಗಿ ಗೋಚರಿಸುತ್ತದೆ. ಅನುಭವಿ ಬ್ಯಾಟ್ಸ್ ಮನ್ ಮನೀಷ್ ಪಾಂಡೆ, ಸಿದ್ಧಾರ್ಥ್, ಶರತ್, ನಾಯರ್, ಪೇಸ್ ಬೌಲರ್‌ಗಳಾದ ರೋನಿತ್ ಮೋರೆ, ಪ್ರಸಿದ್ಧ್ ಕೃಷ್ಣ, ಆಲ್‌ರೌಂಡರ್‌ಗಳಾದ ಶ್ರೇಯಸ್ ಗೋಪಾಲ್, ಕೆ. ಗೌತಮ್ ಅವರಿಂದ ತಂಡದ ಸಾಮರ್ಥ್ಯ ಸಹಜವಾಗಿಯೇ ಉನ್ನತ ಮಟ್ಟದಲ್ಲಿದೆ.
Advertisement
ಮುಂಬಯಿ ತಂಡ ಯುವ ಆಟಗಾರರನ್ನೇ ಹೆಚ್ಚು ನೆಚ್ಚಿಕೊಂಡಿದೆ. ನಾಯಕ ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಶಾರ್ದೂಲ್ ಠಾಕೂರ್ ಸೇವೆ ಲಭಿಸದಿರುವುದು ಮುಂಬಯಿ ಪಾಲಿಗೊಂದು ಹಿನ್ನಡೆಯೇ ಆಗಿದೆ. ಇವರೆಲ್ಲ ಟೀಮ್ ಇಂಡಿಯಾ ಡ್ನೂಟಿಯಲ್ಲಿದ್ದಾರೆ.
ಶಮ್ಸ್ ಮುಲಾನಿ, ಪ್ರಶಾಂತ್ ಸೋಲಂಕಿ, ತನುಷ್ ಕೋಟ್ಯಾನ್, ಆಲ್‌ರೌಂಡರ್ ಶಿವಂ ದುಬೆ ಅವರಿಂದ ಕರ್ನಾಟಕದ ಬ್ಯಾಟಿಂಗ್ ಸರದಿಗೆ ಕಡಿವಾಣ ಹಾಕಲು ಸಾಧ್ಯವೇ ಎಂಬುದೊಂದು ಪ್ರಶ್ನೆ.
ಮುಂಬಯಿ 2018-19ರಲ್ಲಿ ಕೊನೆಯ ಸಲ ಚಾಂಪಿಯನ್ ಆಗಿತ್ತು. ಆದರೆ ಕರ್ನಾಟಕ ಹಾಲಿ ಚಾಂಪಿಯನ್ ಎಂಬುದನ್ನು ಮರೆಯುವಂತಿಲ್ಲ.
ಗುಜರಾತ್ ಮತ್ತು ಯುಪಿಗುಜರಾತ್-ಉತ್ತರ ಪ್ರದೇಶ ನಡುವಿನ ಇನ್ನೊಂದು ಸೆಮಿಫೈನಲ್ “ಅರುಣ್ ಜೇಟ್ಲಿ ಸ್ಟೇಡಿಯಂ’ನಲ್ಲಿ ನಡೆಯಲಿದೆ. ಇದನ್ನು ಸಮಬಲದ ಸ್ಪರ್ಧೆ ಎಂದು ಭಾವಿಸಲಾಗಿದ್ದು, ನಾಯಕರಾದ ಪ್ರಿಯಾಂಕ್ ಪಾಂಚಾಲ್ ಮತ್ತು ಕರಣ್ ಶರ್ಮ ಉತ್ತಮ ಫಾರ್ಮ್ ನಲ್ಲಿದ್ದಾರೆ. ಎರಡೂ ಪಂದ್ಯಗಳು ಬೆಳಗ್ಗೆ 9 ಗಂಟೆಗೆ ಆರಂಭವಾಗಲಿವೆ.