Advertisement

ದೇವರಕೊಂಡ, ಮೈಕ್ ಟೈಸನ್, ಪಾಂಡೆ ಅಭಿನಯದ ಲೈಗರ್ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

04:14 PM Dec 16, 2021 | Team Udayavani |

ಮುಂಬಯಿ: ನಟ ವಿಜಯ್ ದೇವರಕೊಂಡ, ಮೈಕ್ ಟೈಸನ್ ಹಾಗೂ ನಟಿ ಅನನ್ಯ ಪಾಂಡೆ ನಟಿಸಿರುವ ಲೈಗರ್ ಸಿನಿಮಾ 2022ರ ಆಗಸ್ಟ್ 25ರಂದು ವಿಶ್ವಾದ್ಯಂತ ತೆರೆಕಾಣಲಿದೆ ಎಂದು ಚಿತ್ರತಂಡ ಗುರುವಾರ(ಡಿಸೆಂಬರ್ 16) ಘೋಷಿಸಿದೆ.

Advertisement

ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ಜಗತ್ತಿನಾದ್ಯಂತ ಥಿಯೇಟರ್ ನಲ್ಲಿ 2022ರ ಆಗಸ್ಟ್ 25ರಂದು ಬಿಡುಗಡೆಯಾಗಲಿದೆ ಎಂದು ಸಿನಿಮಾದ ನಿರ್ಮಾಪಕ ಕರಣ್ ಜೋಹರ್ ಇನ್ಸ್ ಸ್ಟಾಗ್ರಾಮ್ ನಲ್ಲಿ ಪೋಸ್ಟರ್ ಅನ್ನು ಹಂಚಿಕೊಳ್ಳುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

“ಸಾಹಸ, ಕುತೂಹಲ ಹಾಗೂ ಹುಚ್ಚುತನ”…ಹೀಗೆ ಪೋಸ್ಟರ್ ಗೆ ಅಡಿಬರಹ ನೀಡಿರುವ ಕರಣ್ ಜೋಹರ್, ಲೈಗರ್ ಮುಂದಿನ ವರ್ಷ ಆಗಸ್ಟ್ 25ರಂದು ತೆರೆಕಾಣಲಿದ್ದು, ಡಿಸೆಂಬರ್ 31ರಂದು ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಲಿದೆ. ಭರ್ಜರಿ ಧಮಾಕದೊಂದಿಗೆ ನಿಮ್ಮ ಹೊಸ ವರ್ಷ ಆರಂಭವಾಗಲಿ ಎಂದು ತಿಳಿಸಿದ್ದಾರೆ.

ಲೈಗರ್ ಸಿನಿಮಾವನ್ನು ಪುರಿ ಜಗನ್ನಾಥ್, ಚಾರ್ಮಿ ಕೌರ್, ಕರಣ್ ಜೋಹರ್ ಹಾಗೂ ಅಪೂರ್ವ ಮೆಹ್ತಾ ಜತೆಗೂಡಿ ನಿರ್ಮಿಸಿದ್ದು, ವಿಜಯ್ ದೇವರಕೊಂಡ ಸಿನಿಮಾದಲ್ಲಿ ಬಾಕ್ಸರ್ ಪಾತ್ರದಲ್ಲಿ ಅಭಿನಯಿಸಿರುವುದಾಗಿ ಚಿತ್ರತಂಡ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next