Advertisement

ವಿಟ್ಲ: ಹಾಳೆ ತಟ್ಟೆ ಕಾರ್ಖಾನೆಯಲ್ಲಿ ಬೆಂಕಿ; ಲಕ್ಷಾಂತರ ರೂ. ನಷ್ಟ

12:26 PM Jul 21, 2022 | Team Udayavani |

ವಿಟ್ಲ: ಇಲ್ಲಿನ ಪಡ್ನೂರು ಗ್ರಾಮದ ಬಲಿಪಗುಳಿಯಲ್ಲಿ  ಕಾರ್ಯನಿರ್ವಹಿಸುತ್ತಿರುವ ಹಾಳೆ ತಟ್ಟೆ ತಯಾರಿಕಾ ಘಟಕ ಇಕೋ ವಿಶನ್ ನಲ್ಲಿ ಶಾರ್ಟ್‌ ಸರ್ಕ್ಯುಟ್‌ನಿಂದಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಗುರುವಾರ ನಡೆದಿದೆ.

Advertisement

ಕಟ್ಟಡದ ಮೇಲ್ಭಾಗದಲ್ಲಿ ಶಾರ್ಟ್ ಸರ್ಕ್ಯುಟ್ ನಿಂದ ಬೆಂಕಿ ಕಾಣಿಸಿಕೊಂಡಿದ್ದು,  ಹಲವು ಮೆಷಿನ್, ಮತ್ತು ಹಾಳೆತಟ್ಟೆಗಳು ಸುಟ್ಟು ಕರಕಲಾಗಿದೆ. ಇದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಇದನ್ನೂ ಓದಿ: ಸರ್ಕಾರ ನಿಷೇಧಿಸಿದ್ದರೂ ಎಗ್ಗಿಲ್ಲದೆ ಸಾಗಿದೆ ಕ್ಯಾಟ್ ಫಿಶ್ ಸಾಕಣೆ ಹಾಗೂ ಮಾರಾಟ..!

ಫ್ಯಾಕ್ಟರಿಯಲ್ಲಿ ದಟ್ಟ ಹೊಗೆ ಆವರಿಸುತ್ತಿದ್ದಂತೆ ಘಟನೆ ತಿಳಿದ ಪೊಲೀಸರು, ಅಗ್ನಿಶಾಮಕ ದಳದ  ಸಿಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next