Advertisement

ಮತದಾನಕ್ಕೆ ಅಡ್ಡಿ ಮಾಡಿದರೆ ಕಠಿನ ಶಿಕ್ಷೆ: ಜಿಲ್ಲಾಧಿಕಾರಿ

12:47 AM Mar 27, 2019 | sudhir |

ಮಂಗಳೂರು: ಮತದಾನದ ದಿನದಂದು ಪ್ರಜಾಪ್ರಭುತ್ವದ ಮೌಲ್ಯವನ್ನು ಸಾರುವ ಮತದಾನದ ಹಕ್ಕನ್ನು ಚಲಾಯಿಸಲು ಯಾರೇ ಅಡ್ಡಿಪಡಿಸಿದರೂ ಅವರಿಗೆ ಕಠಿನ ಶಿಕ್ಷೆಯಾಗಲಿದೆ ಎಂದು ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ಹೇಳಿದರು.

Advertisement

ದಕ್ಷಿಣ ಕನ್ನಡ ವಿಧಾನಸಭಾ ಕ್ಷೇತ್ರವಾರು ಮಾಸ್ಟರ್‌ ಟ್ರೈನರ್‌ಗಳಿಗೆ ತರಬೇತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಚುನಾವಣಾ ದಿನದಂದು ಪ್ರಿಸೈಡಿಂಗ್‌ ಅಧಿಕಾರಿಗಳು ಚುನಾವಣಾ ಆಯೋಗ ನೀಡಿದ ಕೈಪಿಡಿಯನ್ನು ಓದಿ ಅನುಷ್ಠಾನಗೊಳಿಸಿದರೆ ಚುನಾವಣೆ ಯಶಸ್ವಿಯಾಗುತ್ತದೆ; ಅನುಭವಗಳಿಂದಷ್ಟೇ ಚುನಾವಣೆ ನಡೆಸಲು ಸಾಧ್ಯವಿಲ್ಲ; ಚುನಾವಣ ಆಯೋಗದ ಮಾರ್ಗಸೂಚಿಗಳನ್ನು ಓದಿ ತಿಳಿದು
ಕೊಂಡು ಅನುಸರಿಸಿ. ಸಂಶಯಗಳನ್ನು ನಿವಾರಿಸಿಕೊಂಡರೆ ಪಿಆರ್‌ಒ ಕೆಲಸ ಸುಲಲಿತವಾಗಲಿದೆ ಎಂದರು.

ಈ ಬಾರಿ ಮತದಾನದ ವೇಳೆ ವೋಟರ್‌ ಸ್ಲಿಪ್‌ ಅಧಿಕೃತ ಗುರುತು ಪತ್ರ
ವಲ್ಲ ಎಂಬುದನ್ನು ಈಗಾಗಲೇ ಬಹು ಮಾಧ್ಯಮಗಳ ಮೂಲಕ ಮಾಹಿತಿಯನ್ನು ನೀಡಲಾಗಿದೆ. ಪ್ರತಿಯೊಂದು ತರಬೇತಿಯಲ್ಲೂ ವಿವರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

17 ಸಿ ಫಾರಂ ಮಹತ್ವದ ದಾಖಲೆಯಾಗಿದ್ದು, ಇದನ್ನು ಮತಗಟ್ಟೆ ಅಧಿಕಾರಿ ಸರಿಯಾದ ರೀತಿಯಲ್ಲಿ ಭರ್ತಿ ಮಾಡುವುದು ಆವಶ್ಯಕ. ಈ ಬಗ್ಗೆ ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಮನವರಿಕೆ ಮಾಡಿ; ಈ ಬಾರಿ ಪೋಸ್ಟಲ್‌ ಬ್ಯಾಲೆಟ್‌ಗಳ ಸಂಖ್ಯೆ ಕಡಿಮೆಯಾಗಲಿದ್ದು, ಸಿಬಂದಿಗೆ ಇಡಿಸಿ (ಇಲೆಕ್ಷನ್‌ ಡ್ನೂಟಿ ಸರ್ಟಿಫಿಕೆಟ್‌) ನ್ನು ನೀಡಲಾಗುವುದು. ಈ ಬಗ್ಗೆ ಮಾಹಿತಿ ಪಡೆದು ಗೊಂದಲಕ್ಕೆಡೆ ಮಾಡದಂತೆ ಕರ್ತವ್ಯ ನಿರ್ವಹಿಸಿ ಎಂದರು.

Advertisement

ಈ ಬಾರಿ ಚುನಾವಣಾ ಕರ್ತವ್ಯದಲ್ಲಿರುವ ಸಿಬಂದಿಗಳಿಗೆ ಚುನಾವಣಾ ಕರ್ತವ್ಯ ಪ್ರಮಾಣ ಪತ್ರ ಬಳಸುವ ಅವಕಾಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಇಡಿಸಿ ಬಳಕೆ ಆಗಲಿವೆ. ಪೊಲೀಸ್‌ ಸಿಬಂದಿಗೆ ಮತ್ತು ಕ್ಷೇತ್ರದ ಹೊರಗಡೆ ನಿಯೋಜನೆಗೊಳ್ಳುವ ಸಿಬಂದಿಗೆ ಅಂಚೆ ಮತ ಪತ್ರದ ಅವಕಾಶವಿದೆ ಎಂದು ತಿಳಿಸಿದರು.

ಇವಿಎಂ/ ವಿವಿಪ್ಯಾಟ್‌ ಮಷಿನ್‌ಗಳ ಬಗ್ಗೆ ಪಿಆರ್‌ಒಗಳು ಸಂಪೂರ್ಣವಾಗಿ ತಿಳಿದುಕೊಳ್ಳುವುದು ಆವಶ್ಯಕ. ಚುನಾವಣ ಸಮಯದಲ್ಲಿ ಮಷಿನ್‌
ನಲ್ಲಿ ತೊಂದರೆ ಕಂಡುಬಂದರೆ ಎದೆಗುಂದಬೇಕಿಲ್ಲ; ಸಮಯೋಚಿತ
ವಾಗಿ ನಿರ್ಧಾರ ತೆಗೆದುಕೊಳ್ಳಿ; ಆತ್ಮ ವಿಶ್ವಾಸದೊಂದಿಗೆ ಕರ್ತವ್ಯ ನಿರ್ವ
ಹಿಸುವುದರ ಜತೆಗೆ ತಂಡದಲ್ಲಿಯೂ ಆತ್ಮವಿಶ್ವಾಸ ತುಂಬಿ ಎಂದರು.

ಮಾಧ್ಯಮಗಳ ಪ್ರತಿನಿಧಿಗಳಿಗೂ ಬೂತ್‌ ಒಳಗಡೆ ಪ್ರವೇಶವಿಲ್ಲ ಎಂದ ಅವರು, ತನ್ನ ಬೂತ್‌ ಒಳಗಡೆ ಸುಗಮ ಹಾಗೂ ಸುಸೂತ್ರ ಚುನಾವಣೆಗೆ ಬೇಕಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಪಿಆರ್‌ಒ ಸ್ವತಂತ್ರರು. ತರಬೇತಿ ಪಡೆದು ಉತ್ತಮ ಗುಣಮಟ್ಟದ ತರಬೇತಿ ನೀಡಿ ಎಂದು ಮಾಸ್ಟರ್‌ ಟ್ರೈನರ್‌ಗಳಿಗೆ ಜಿಲ್ಲಾ ಚುನಾವಣಾಧಿಕಾರಿಗಳು ಸಲಹೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next