Advertisement
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗೆ ಹೆಸರು ನೋಂದಣಿ ಮಾಡಿಸಲು ಶುಕ್ರವಾರ ಬೆಳಗಿನ ಜಾವ ನಾಲ್ಕು ಗಂಟೆಯಿಂದ ನಗರದ ಎಪಿಎಂಸಿ ಆವರಣದಲ್ಲಿ ಕಾದು ಕುಳಿದ್ದ ರೈತರಿಗೆ ಏ.26ರಂದು ಎರಡನೇ ಬಾರಿಗೆ 1.15 ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿಗೆ ಸರ್ಕಾರ ನೀಡಿದ್ದ ಅನುಮತಿ ಎರಡೇ ದಿನದಲ್ಲಿ ಮುಕ್ತಾಯವಾಗಿತ್ತು. ಇದರಿಂದ ರೈತರು ರಸ್ತೆ ತಡೆ ನಡೆಸಿ ಮತ್ತಷ್ಟು ರಾಗಿ ಖರೀದಿಗೆ ಆಗ್ರಹಿಸಿದ್ದರು. ಹೀಗಾಗಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೇ 6ರಿಂದ ಮತ್ತೆ ರಾಗಿ ಖರೀದಿಗೆ ನೋಂದಣಿ ನಡೆಯಲಿದೆ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆ, ಶುಕ್ರವಾರ ಬೆಳಗಿನ ಜಾವದಿಂದಲೇ ರೈತರು ಖರೀದಿ ಕೇಂದ್ರದ ಬಳಿ ಸಾಲುಗಟ್ಟಿ ನಿಂತಿದ್ದರು.
ಇಲಾಖೆ ಅಧಿಕಾರಿ ರಾಘವೇಂದ್ರ ಬಂದು ಸಭೆ ನಡೆಸಿದರು.
Related Articles
Advertisement
ನೋಂದಣಿಗೆ ಸಹಕರಿಸಲು ಮನವಿ: ಸರ್ಕಾರದ ಆದೇಶದ ಅನ್ವಯ 4 ಎಕರೆ 39 ಗುಂಟೆ ಜಮೀನು ಒಳಗಿರುವ ರೈತರಿಂದ ಮಾತ್ರ ಖರೀದಿ. ಕಳೆದ ಸಲ ಕೂಪನ್ ಪಡೆದವರಿಗೆ ಪ್ರತ್ಯೇಕ ಸಾಲು. ಹೊಸದಾಗಿ ನೋಂದಣಿ ಚೀಟಿ ಪಡೆಯಲು ಬರುವವರಿಗೆ ಮತ್ತೊಂದು ಸಾಲು. ಈ ಮುಂಚೆ ರಾಗಿ ಖರೀದಿಗೆ ನೋಂದಣಿ ಮಾಡಿ ರಾಗಿ ಮಾರಿರುವವರಿಗೆ ಅವಕಾಶ ನೀಡದಿರಲು ತೀರ್ಮಾನಿಸಲಾಯಿತು. ಅಲ್ಲದೇ ನೋಂದಣಿ ಸಮಯ ಬೆಳಗ್ಗೆ 8ರಿಂದ ಸಂಜೆ 5ರವರೆಗೆ ನಿಗದಿ ಮಾಡಿದ್ದು, ರೈತರು ವ್ಯವಸ್ಥಿತವಾಗಿ ನೋಂದಣಿಗೆ ಸಹಕರಿಸಲು ಶಾಸಕ ಟಿ.ವೆಂಕಟರಮಣಯ್ಯ ಹಾಗೂ ಅಧಿಕಾರಿಗಳು ಮನವಿ ಮಾಡಿದರು. ಸರ್ಕಲ್ ಇನ್ಸ್‌ಪೆಕ್ಟರ್ ಹರೀಶ್, ಇನ್ಸ್‌ಪೆಕ್ಟರ್ ಗೋವಿಂದ್ ಇದ್ದರು.
ನೋಂದಣಿಗೆ ಆಹಾರ ನಿಗಮದ ವೆಬ್‌ಸೈಟ್ ಒಪನ್ ಆಗುತ್ತಿಲ್ಲ ಬೆಳಗ್ಗೆ 10ಗಂಟೆಗೆ ಖರೀದಿ ಕೇಂದ್ರಕ್ಕೆ ಬಂದ ಅಧಿಕಾರಿಗಳು, ರಾಗಿ ಖರೀದಿ ಕುರಿತಂತೆ ಸರ್ಕಾರದಿಂದ ನಮಗೆ ಇನ್ನು ಯಾವುದೇ ಅಧಿಕೃತ ಆದೇಶ ಬಂದಿಲ್ಲ. ಅಲ್ಲದೆ, ರೈತರ ಹೆಸರು ನೋಂದಣಿಗೆ ಆಹಾರ ನಿಗಮದ ವೆಬ್‌ಸೈಟ್ ಸಹ ಒಪನ್ ಆಗುತ್ತಿಲ್ಲ. ಹೀಗಾಗಿ, ನಾವು ನೋಂದಣಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದರು. ಆದರೂ, ಮಧ್ಯಾಹ್ನ 4ಗಂಟೆವರೆಗೂ ರೈತರು ರಾಗಿ ಖರೀದಿ ಕೇಂದ್ರದ ಬಳಿ ಕಾದು ಕುಳಿತಿದ್ದ ದೃಶ್ಯ ಕಂಡು ಬಂತು.