Advertisement

ಬೈಂದೂರು ಶಾಸಕರಿಂದ ವಿವಿಧ ಕಿಂಡಿ ಅಣೆಕಟ್ಟು ಕಾಮಗಾರಿ ವೀಕ್ಷಣೆ

11:35 PM Jul 13, 2019 | sudhir |

ಕೊಲ್ಲೂರು: ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಶನಿವಾರ ಜಡ್ಕಲ್‌ ಕಿಂಡಿ ಅಣೆಕಟ್ಟು, ಮುದೂರು ಸಮೀಪದ ಕಿಂಡಿ ಅಣೆಕಟ್ಟು, ಕೊಲ್ಲೂರಿನ ಕಿಂಡಿ ಅಣೆಕಟ್ಟು, ಬಿಜೂರಿನ ಕಿಂಡಿ ಅಣೆಕಟ್ಟು ನಿರ್ಮಾಣ ಪ್ರದೇಶಕ್ಕೆ ಭೇಟಿ ನೀಡಿ, ಕಾಮಗಾರಿ ಪರಿಶೀಲನೆ ನಡೆಸಿದರು.

Advertisement

ಜಡ್ಕಲ್‌ ಗ್ರಾಮದ ಕಾನಕಿ ಎಂಬಲ್ಲಿ ಪಶ್ಚಿಮ ವಾಹಿನಿ ಯೋಜನೆಯಡಿ ಮಂಜೂರಾದ 4.40 ಕೋ. ರೂ. ವೆಚ್ಚದ ಸೇತುವೆ ಸಹಿತ ಕಿಂಡಿ ಅಣೆಕಟ್ಟು ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು ರೈತರ ಕೃಷಿಗೆ ಅನುಕೂಲದೊಂದಿಗೆ ಸೇತೆವೆಯಿಂದ ಜನರಿಗೆ ಪ್ರಯೋಜನವಾಗಲಿದೆ. ಮುಂದಿನ ದಿನಗಳಲ್ಲಿ ಸಂಪರ್ಕ ರಸ್ತೆಗೆ ಅನುದಾನ ನೀಡಿ ಈ ಭಾಗದ ಜನರಿಗೆ ಅನುಕೂಲವಾಗುವಂತೆ ಮಾಡಲಾಗುವುದು. ಬೈಂದೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಚಿಂತಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭ ಸ್ಥಳೀಯ ಜಿ.ಪಂ. ಸದಸ್ಯ ಶಂಕರ ಪೂಜಾರಿ, ದೀಪಕ್‌ ಕುಮಾರ್‌ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷ ಅನಂತ್‌ ಮೂರ್ತಿ ಭಟ್‌, ಗ್ರಾ.ಪಂ. ಸದಸ್ಯ ನಾರಾಯಣ ಶೆಟ್ಟಿ, ನಾರಾಯಣ ಶೆಟ್ಟಿ ಹೊಸೂರು, ತಂಗಪ್ಪನ್‌, ಶ್ರೀನಿವಾಸ ಆಚಾರ್‌, ನಾಗರಾಜ ಶೆಟ್ಟಿ ನಾರ್ಕಳಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next