Advertisement

ಅಧಿಕಾರಿಗಳಿಂದ ಸ್ಮಾರಕಗಳ ವೀಕ್ಷಣೆ

12:29 PM Dec 14, 2018 | |

ವಿಜಯಪುರ: ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಹಾಗೂ ಮೂಲ ಸೌಲಭ್ಯ ಕಲ್ಪಿಸಲು ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲಕುಮಾರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ನಗರದಲ್ಲಿರುವ ಐತಿಹಾಸಿಕ ಸ್ಮಾರಕಗಳ ವೀಕ್ಷಣೆ ನಡೆಸಿದರು.

Advertisement

ಗುರುವಾರ ಬೆಳ್ಳಂಬೆಳಿಗ್ಗೆ ಗೋಲಗುಮ್ಮಟ ಸೇರಿದಂತೆ ಐತಿಹಾಸಿಕ ವಿವಿಧ ಸ್ಮಾರಕಗಳ ವೀಕ್ಷಣೆ ನಡೆಸಿದ ಅವರು, ಐತಿಹಾಸಿಕ ಆದಿಲ್‌ಶಾಹಿ ಕಾಲದ ಭೂಗತ ಜಲಮಾರ್ಗ (ಕರೇಜ್‌ ವ್ಯವಸ್ಥೆ) ಕಾಮಗಾರಿ ಸೇರಿದಂತೆ ಇತರೆ ವಿವಿಧ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಿದರು.

ನಗರದ ವಿಶ್ವವಿಖ್ಯಾತ ಗೋಲಗುಂಬಜ್‌ ಆವರಣದಲ್ಲಿ ಕಲ್ಪಿಸಲಾಗಿರುವ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದ ಅವರು, ಆದಿಲ್‌ ಶಾಹಿ ಅರಸರು ನಿರ್ಮಿಸಿದ ಕುಮಟಗಿ ಬೇಸಿಗೆ ಅರಮನೆ, ರಾಮಲಿಂಗ ಕೆರೆ, ನವರಸಪುರ ಸಂಗೀತ್‌ ಮಹಲ್‌, ನಾರಿಮಹಲ್‌ ವೀಕ್ಷಣೆ, ತೊರವಿ ಸುರಂಗ ಬಾವಡಿ, ಜಿಲ್ಲಾಸ್ಪತ್ರೆ ಹತ್ತಿರದಲ್ಲಿರುವ ಕರೇಜ್‌ ವ್ಯವಸ್ಥೆ ಕಾಮಗಾರಿ ಪರಿಶೀಲನೆ ನಡೆಸಿದರು.

ಇದಲ್ಲದೇ ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಯಲ್ಲಿ ಹೋಟೆಲ್‌ ಉದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ಭೂತನಾಳದಲ್ಲಿ ಮೀಸಲಿರಿಸಿರುವ ಜಮೀನು ವೀಕ್ಷಣೆ ಮಾಡುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿದರು. ಡಿಸಿ ಎಸ್‌.ಬಿ.ಶೆಟ್ಟೆಣ್ಣವರ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಹೇಶ್‌ ಕ್ಯಾತನ್‌, ಮಹಾನಗರ ಪಾಲಿಕೆ
ಪರಿಸರ ಅಧಿಕಾರಿ ಎಸ್‌.ಆರ್‌. ಜಗದೀಶ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next