Advertisement

ಸೋಲಾರ್‌ ಕನ್ನಡಕದಿಂದ ವೀಕ್ಷಣೆ

08:21 AM Jun 22, 2020 | Suhan S |

ಹರಪನಹಳ್ಳಿ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ತಾಲೂಕು ಘಟಕದ ಪದಾಧಿಕಾರಿಗಳು ಭಾನುವಾರ ಕಂಕಣ ಸೂರ್ಯ ಗ್ರಹಣವನ್ನು ಸೋಲಾರ್‌ ಪಿಲ್ಟರ್‌ ಕನ್ನಡಕದ ಮೂಲಕ ವೀಕ್ಷಿಸಲಾಯಿತು

Advertisement

ಈ ಸಂದರ್ಭದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಸದಸ್ಯರಾದ ಬಸವರಾಜ ಸಂಗಪ್ಪನವರ್‌ ಮಾತನಾಡಿ, ಗ್ರಹಣ ಎನ್ನುವುದು ಸೌರಮಂಡಲದಲ್ಲಿ ನಡೆಯುವಂತಹ ಒಂದು ವಿಶೇಷ ವಿಸ್ಮಯ ಕೌತುಕ ಘಟನೆಯಾಗಿದ್ದು, ಅದರಲ್ಲಿ ಯಾವುದೇ ಮೂಢನಂಬಿಕೆ ಸಲ್ಲದು. ಮಕ್ಕಳಲ್ಲಿ ಮೌಡ್ಯದ ಬದಲು ವೈಚಾರಿಕ ಚಿಂತನೆ ಮೂಡಿಸಬೇಕಿದೆ ಎಂದು ಹೇಳಿದರು.

ಗ್ರಹಣದ ಸಂದರ್ಭದಲ್ಲಿ ಉಪಹಾರ ಸೇವಿಸಿದರು. ಮುಖಂಡರಾದ ಮಾಲತೇಶ್‌, ಉಮಾಕಾಂತ್‌, ಮಹಾಂತೇಶ, ಪ್ರವೀಣ್‌, ಶಿಕ್ಷಕರ ಸಂಘದ ಅಧ್ಯಕ್ಷ ಅಂಜಿನಪ್ಪ, ಇಟ್ಟಿಗುಡಿ ಅಂಜಿನಪ್ಪ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next