ಮುಂಬಯಿ: ವಿದ್ಯಾವಿಹಾರ್ ಪಶ್ಚಿಮದ ಕಲಾಯಿ ವಿಲೇಜ್ ಶ್ರೀ ಗಾಂಮ್‌ದೇವಿ, ಶ್ರೀ ಅಂಬಿಕಾ ಆದಿನಾಥೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವವು ಮೇ 15 ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಮಂದಿರದ ಪ್ರಧಾನ ಅರ್ಚಕ ಪೆರ್ಣಂಕಿಲ ಹರಿದಾಸ್ ಭಟ್ ಅವರ ಪೌರೋಹಿತ್ಯದಲ್ಲಿ ಸ್ವಸ್ತಿ ಪುಣ್ಯಾಹ ವಾಚನ, ದ್ವಾದಶ ನಾಳಿಕೇರ, ಮಹಾಗಣಪತಿ ಯಾಗ, ಶ್ರೀ ದುರ್ಗಾ ಹೋಮ, ಶ್ರೀ ಮಹಾಗಣಪತಿ ದೇವರಿಗೆ ನವಕ ಪ್ರಧಾನ ಕಲಾಭಿಷೇಕ, ಶ್ರೀ ಆದಿನಾಥೇಶ್ವರ ದೇವರಿಗೆ ನವಕ ಪ್ರಧಾನ ಕಲಶಾಭಿಷೇಕ, ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಿಗೆ ನವಕ ಪ್ರಧಾನ ಕಲಶಾಭಿಷೇಕ, ಪ್ರಸನ್ನ ಪೂಜೆ, ಮಹಾಪೂಜೆ ಇನ್ನಿತರ ಪೂಜೆಗಳು ನಡೆಯಿತು.
ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆಯನ್ನು ಆಯೋ ಜಿಸಲಾಗಿತ್ತು.
ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ದೇವಸ್ಥಾನದ ಅಧ್ಯಕ್ಷ ಗುರುದಾಸ್ ಗೋಪಾಲ್ ಶೆಟ್ಟಿ, ಆಡಳಿತ ಮೊಕ್ತೇಸರ ಹರಿದಾಸ್ ಗೋಪಾಲ್ ಶೆಟ್ಟಿ ಅವರ ಮುಂದಾಳತ್ವದಲ್ಲಿ ಜರಗಿದ ಮಹಾ ಉತ್ಸವದಲ್ಲಿ ಸರಳಾ ಗೋಪಾಲ್ ಶೆಟ್ಟಿ, ಶೈಲಜಾ ಶೆಟ್ಟಿ ಹಾಗೂ ಅಪಾರ ಸಂಖ್ಯೆಯಲ್ಲಿ ಗಣ್ಯರು ಉಪಸ್ಥಿತರಿದ್ದರು.
ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ಬಳಿಕ ದುರ್ಗಾ ನಮಸ್ಕಾರ ಪೂಜೆ, ರಂಗಪೂಜೆ, ಪಲ್ಲಕ್ಕಿ ಉತ್ಸವ, ಉತ್ಸವ ಬಲಿ, ರಾತ್ರಿ ಪೂಜೆ, ಪ್ರಸಾದ ವಿತರಣೆ ನಡೆಯಿತು. ಉತ್ಸವದ ಯಶಸ್ಸಿಗೆ ಶ್ರೀವತ್ಸ ಭಟ್, ರಾಜಾ ಭಟ್, ವಿನಯ ಭಟ್, ಸತೀಶ್ ಭಟ್, ಪ್ರದ್ಯುಮ್ನ ಭಟ್, ಯಾಜ್ನಿಕ್ ಭಟ್, ಸುಬ್ರಹ್ಮಣ್ಯ ಭಟ್, ಅನಂತ್ ಭಟ್ ಅಲ್ಲದೆ ಲವ ಅಮೀನ್, ಸುರೇಶ್ ಕರ್ಕೇರ, ಸೂರ್ಯ ಪ್ರಕಾಶ್, ಸಂತೋಷ್ ಪಾಂಡೆ ಮೊದಲಾದವದ್ದರು.