Advertisement

ವಿದ್ಯಾವರ್ಧಕ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಶ್ವಾನಗಳ ರ್‍ಯಾಂಪ್‌ ವಾಕ್

12:52 PM Apr 17, 2017 | Team Udayavani |

ಮೈಸೂರು: ವಿದ್ಯಾವರ್ಧಕ ಎಂಜಿ ನಿಯರಿಂಗ್‌ ಕಾಲೇಜಿನಲ್ಲಿ “ವಿದ್ಯುತ್‌’ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಡೆದ ಶ್ವಾನಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಮೈಸೂರು, ಬೆಂಗಳೂರು, ಶ್ರೀರಂಗ ಪಟ್ಟಣ, ಮದ್ದೂರು, ಮಡಿಕೇರಿ ಸುತ್ತಮುತ್ತಲಿನ ಶ್ವಾನ ಪ್ರಿಯರು ತಮ್ಮ ನೆಚ್ಚಿನ ಶ್ವಾನಗಳೊಂದಿಗೆ ಪ್ರದರ್ಶನದಲ್ಲಿ ಭಾಗವಹಿಸಿದ್ದರು.

Advertisement

ಸುಮಾರು 26 ತಳಿಯ 45 ಶ್ವಾನಗಳು ಪ್ರದರ್ಶನದ ಆಕರ್ಷಣೆಯಾಗಿದ್ದವು. ಗ್ರೇಟ್‌ಡೆನ್‌, ಜರ್ಮನ್‌ ಶಪರ್ಡ್‌, ರಾಟ್‌ ವಿಲ್ಲರ್‌, ಗೋಲ್ಡನ್‌ ರೆಟ್‌ ರಿವರ್‌, ಬಾಕ್ಸರ್‌, ಬಾರ್ಡರ್‌ ಕೂಲಿ, ಪಗ್‌, ಸೈಬಿರಿಯಾ ಹಸ್ಕಿ, ಅಮೆರಿಕನ್‌ ಬುಲ್ಲಿ, ಬೆಲ್ಜಿಯಂ ಮಂಗೋಲಿಯನ್‌, ಪಮೋರಿಯನ್‌,

ಡಾಬರ್‌ ಮನ್‌, ಮಿನಿಎಚ್ಚರ್‌, ಜರ್ಮನ್‌ ಷೆಪರ್‌, ಲ್ಯಾಬರ್‌ ಡಾಗ್‌, ಗೋಲ್ಡನ್‌ ರಿಟ್‌ರಿವರ್‌, ಅಮೇರಿಕನ್‌ ಪಿಟ್‌ಬುಲ್‌, ಡಾಬರ್‌ ಮೆನ್‌, ಗ್ರೇಡ್‌ ಡೇನ್‌, ಬಾಕ್ಸರ್‌, ಪಗ್‌, ಸೈಬಿರೀಯನ್‌ ಹಸ್ಕಿ ಸೇರಿದಂತೆ ವಿವಿಧ ತಳಿಗಳ ಶ್ವಾನಗಳು ಸ್ಪರ್ಧೆಯಲ್ಲಿ ಭಾಗವಹಿಸಿ ರ್‍ಯಾಂಪ್‌ ಮೇಲೆ ವಾಕ್‌ ಮಾಡಿ ವೀಕ್ಷಕರ ಚಪ್ಪಾಳೆ ಗಿಟ್ಟಿಸಿದವು.

ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಕಾರ್ಯದರ್ಶಿ ವಿಶ್ವನಾಥ್‌, ಕಾರ್ಯಕ್ರಮದ ಆಯೋಜಕರಾದ ಹೇಮಂತ್‌ ಚಂದ್ರ, ವರುಣ್‌ ಸುಬ್ಬಣ್ಣ, ಗುರುದತ್ತ, ಅನಿಲ್‌ ಶಿವಣ್ಣ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next