Advertisement
12 ವಿದ್ಯಾರ್ಥಿಗಳು ಮತ್ತು ಮೂವರು ಪ್ರಾಧ್ಯಾಪಕರೊಂದಿಗೆ ಆರಂಭಗೊಂಡ ಈ ಗುರುಕುಲ, ಇಂದು ಬೃಹದಾಕಾರವಾಗಿ ಬೆಳೆದಿದೆ. ಇಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಸಹಿತವಾಗಿ ವಿದ್ಯಾದಾನದ ಅಪೂರ್ವ ಸೇವೆ ನಡೆಯುತ್ತಿದೆ.
1990ರ ವೇಳೆಗೆ ಪೂರ್ಣಪ್ರಜ್ಞ ಸಂಶೋಧನ ಮಂದಿರ ಹುಟ್ಟುಹಾಕಿದರು. ಪ್ರಾಚೀನ ತಾಡಪತ್ರಗಳ ಸಂರಕ್ಷಣೆ, ಸಂಶೋಧನೆ, ಪ್ರಕಾಶನವೇ ಇದರ ಮಹತ್ವದ ಕಾರ್ಯವಾಗಿದೆ. 55 ಕೃತಿಗಳು, ಅನುವಾದಿತ ಕೃತಿಗಳನ್ನು ಸಂಸ್ಥೆ ಹೊರತಂದಿದೆ. ಹತ್ತಾರು ವಿದ್ಯಾರ್ಥಿಗಳು ವಿದ್ಯಾವಾರಿಧಿ(ಪಿಎಚ್.ಡಿ) ಪದವಿ ಪಡೆದಿದ್ದಾರೆ.
Related Articles
Advertisement
ಶ್ರೀಗಳ ಆಶಯದಂತೆ ವಿದ್ಯಾಪೀಠದಲ್ಲಿ ಬೃಂದಾವನ ಬೆಂಗಳೂರು: ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಅವರ ಬೃಂದಾವನ ಉಡುಪಿಯಿಂದ ಸುಮಾರು 350 ಕಿ.ಮೀ. ದೂರದಲ್ಲಿರುವ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವುದು ಏಕೆ ಎಂಬ ಕೌತುಕ ಈಗ ಎಲ್ಲರಲ್ಲೂ ಮನೆ ಮಾಡಿದೆ. ಇದಕ್ಕೆ ಶ್ರೀಗಳು ನಾಲ್ಕೈದು ವರ್ಷಗಳ ಹಿಂದೆಯೇ ಸ್ಪಷ್ಟ ಉತ್ತರ ಬರೆದಿಟ್ಟಿದ್ದರು. ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳು ಪೂರ್ಣ ಪ್ರಜ್ಞ ಆವರಣದ ಶ್ರೀಕೃಷ್ಣ ದೇವಸ್ಥಾನದಲ್ಲಿ ತಾವು ವಾಸವಿರುವ ಕೊಠಡಿ ಮತ್ತು ಧ್ಯಾನ ಮಂದಿರ ಮಧ್ಯದಲ್ಲಿರುವ ಜಾಗದಲ್ಲಿಯೇ ತಮ್ಮ ಬೃಂದಾವನವನ್ನು ನಿರ್ಮಿಸಬೇಕು ಎಂದು ಈ ಹಿಂದೆಯೇ ಮಠದ ಪುಸ್ತಕದಲ್ಲಿ ದಾಖಲಿಸಿದ್ದರು. ಶ್ರೀಗಳು ಸದಾ ವಿದ್ಯಾರ್ಥಿಗಳೊಂದಿಗೆ ಸಮಯ ಕಳೆಯುತ್ತಿದ್ದರು. ತಮ್ಮ ಪ್ರವಾಸದ ಸಮಯದಲ್ಲೂ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುತ್ತಿ ದ್ದರು. ಈ ವೇಳೆ ನಿತ್ಯದ ಪ್ರವಚನ, ಬೋಧನೆ ಮಾಡುತ್ತಿದ್ದರು. “ಮಕ್ಕಳೊಂದಿಗೆ ನಾನು ಇರಬೇಕು, ನಾನು ಇಲ್ಲ ಎನ್ನುವ ಕೊರಗು ಮಕ್ಕಳನ್ನು ಎಂದಿಗೂ ಕಾಡಬಾರದು’ ಎಂಬ ಉದ್ದೇಶದಿಂದಲೇ ತಮ್ಮ ಬೃಂದಾವನವನ್ನು ತಮ್ಮದೇ ಕನಸಿನ ಪೂರ್ಣಪ್ರಜ್ಞಾ ವಿದ್ಯಾಪೀಠ ದಲ್ಲೇ ಮಾಡಬೇಕು ಎಂದು ಆಶಿಸಿದ್ದರು. ಇದನ್ನು ಶ್ರೀಗಳು ತಮ್ಮ 85ನೇ ಜನ್ಮದಿನಾ ಚರಣೆಯ ಸಂದರ್ಭದಲ್ಲೇ ವಿದ್ಯಾರ್ಥಿ ಗಳ ಬಳಿ ಹೇಳಿಕೊಂಡಿದ್ದರು. ಪೂರ್ಣಪ್ರಜ್ಞ ವಿದ್ಯಾಪೀಠದ ಕೃಷ್ಣ ಮಂದಿರದ ಸಮೀಪ ದಲ್ಲಿರುವ ಶ್ರೀಗಂಧದ ಮರ ಇರುವ ಜಾಗದಲ್ಲೇ ಬೃಂದಾವನ ನಿರ್ಮಾಣ ಮಾಡಬೇಕು ಎಂದು ಜಾಗವನ್ನೂ ಶ್ರೀಗಳು ಸೂಚಿಸಿದ್ದರು.