ಮುಂಬಯಿ, ನ. 3: ಶ್ರೀ ಬ್ರಹ್ಮಬೈದರ್ಕಳ ಪಂಚ ಧೂಮವತಿ ಗರೋಡಿ ಸೇವಾ ಟ್ರಸ್ಟ್ ಮುಂಬಯಿ ಸಂಸ್ಥೆ ಶನಿವಾರ ಸಂಜೆ ಸಾಂತಾಕ್ರೂಜ್‌ನ ಬಿಲ್ಲವ ಭವನದ ಶ್ರೀ ನಾರಾಯಣಗುರು ಸಭಾಗೃಹದಲ್ಲಿ ಟ್ರಸ್ಟ್‌ನ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ವಿದ್ಯಾನಿಧಿ ಯೋಜನಾ ಕಾರ್ಯಕ್ರಮಕ್ಕೆ ನಗರದ ಖ್ಯಾತ ಲೆಕ್ಕ ಪರಿಶೋಧಕ, ಜವಾಬ್ ಅಧ್ಯಕ್ಷ ಸಿಎ|ಐ.ಆರ್. ಶೆಟ್ಟಿ ಚಾಲನೆ ನೀಡಿದರು.
ಸಮಾರಂಭದಲ್ಲಿ ಅತಿಥಿ ಅಭ್ಯಾಗತರಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಉಪಾಧ್ಯಕ್ಷ ಹರೀಶ್ ಜಿ. ಅಮೀನ್ ಉಪಸ್ಥಿತ ರಿದ್ದು ಹಿರಿಯ ಸಾಧಕರಾದ, ವಿದ್ಯಾದಾಯಿನಿ ಸಭಾ ಮುಂಬಯಿ ಅಧ್ಯಕ್ಷ ಪುರುಷೋತ್ತಮ ಎಸ್. ಕೋಟ್ಯಾನ್, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ಡಾ| ರಾಜಶೇಖರ್ ಆರ್. ಕೋಟ್ಯಾನ್, ತೋನ್ಸೆಯ ಸಾಧಕರಾದ ಎಂಟಿ ಎನ್‌ಎಲ್‌ನ ನಿವೃತ್ತ ಅಧಿಕಾರಿ ಗೋಪಾಲ್ ಪಾಲನ್ ಕಲ್ಯಾಣರ ಮತ್ತು ಸರಸ್ವತಿ ಗೋಪಾಲ್, ಆರ್‌ಬಿಐನ ನಿವೃತ್ತ ಅಧಿಕಾರಿ ವಿ. ಸಿ. ಪೂಜಾರಿ ಮತ್ತು ಗಿರಿಜಾ ವಿ. ಪೂಜಾರಿ, ಭಾರತ ಸರಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಿನೆಮಾ ವಿಭಾಗದ ಅಧಿಕಾರಿ ಭಾರತಿ ಎಸ್. ಸುವರ್ಣ ಮತ್ತು ಸುಧೀರ್ ಎಸ್. ಸುವರ್ಣ ದಂಪತಿಯನ್ನು ಸಮ್ಮಾನಿಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಪ್ರದಾನಿಸಿ ಅಭಿವಂದಿಸಿದರು.
ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಜತೆ ಕಾರ್ಯದರ್ಶಿ, ಕರುಣಾಕರ ಬಿ. ಪೂಜಾರಿ, ಜತೆ ಕೋಶಾಧಿಕಾರಿ ವಿಜಯ್ ಸನಿಲ್, ಕಾರ್ಯಕಾರಿ ಸದಸ್ಯರು ಹಾಜರಿದ್ದು, ವಿಟಲ ಎಸ್. ಪೂಜಾರಿ ಸ್ವಾಗತಿಸಿದರು. ಉಪಾಧ್ಯಕ್ಷರಾದ ಡಿ.ಬಿ. ಅಮೀನ್ ಮತ್ತು ರೂಪ್‌ಕುಮಾರ್ ಕಲ್ಯಾಣರ್ ಅತಿಥಿಗಳನ್ನು, ಗೌರವ ಪ್ರಧಾನ ಕೋಶಾಧಿಕಾರಿ ರವಿರಾಜ್ ಕಲ್ಯಾಣುರ ಸಮ್ಮಾನಿತರನ್ನು ಪರಿಚಯಿಸಿದರು. ಉಪಾಧ್ಯಕ್ಷ ವಿಶ್ವನಾಥ್ ತೋನ್ಸೆ ಪ್ರಸ್ತಾವನೆ ಗೈದು ಕಾರ್ಯಕ್ರಮ ನಿರೂಪಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಸಂಜೀವ ಪೂಜಾರಿ ತೋನ್ಸೆ ವಂದಿಸಿದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್