Advertisement

1ರಿಂದ ವಿದ್ಯಾಗಮ ತರಗತಿ ಆರಂಭ

05:06 PM Dec 30, 2020 | Suhan S |

ವಿಜಯಪುರ: ಸರ್ಕಾರ ಎಸ್ಸೆಸ್ಸೆಲ್ಸಿ ಮತ್ತು ಪಿಯು ತರಗತಿಗಳನ್ನು ಬರುವ ಜ. 1ರಿಂ ದ ಆರಂಭಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯ ಕೋವಿಡ್ ಸಾಂಕ್ರಾಮಿಕರೋಗ ಹರಡದಂತೆ ಅಗತ್ಯ ಮುಂಜಾಗ್ರತೆ ಅನುರಿಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಮಂಗಳವಾರ ಶಾಲಾ-ಕಾಲೇಜು ಆರಂಭಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆಪೂರ್ವ ಸಿದ್ಧತೆ ಸಭೆ ನಡೆಸಿದ ಅವರು, ಜ. 1ರಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ತರಗತಿ ಆರಂಭಗೊಳ್ಳಲಿವೆ.ಇದಲ್ಲದೇ 6ರಿಂದ 9ನೇ ತರಗತಿಗಳಿಗೆ ವಿದ್ಯಾಗಮತರಗತಿಗಳನ್ನೂ ನಡೆಸಲು ನಿರ್ಧರಿಸಲಾಗಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಹಾಗೂ ಇತರೆ ಮುನ್ನೆಚ್ಚರಿಕೆ ಸಹಿತ ಅಗತ್ಯ ನಡೆಸುವಂತೆ ಸೂಚಿಸಿದರು.

ಎಸ್ಸೆಸ್ಸೆಲ್ಸಿ ಹಾಗೂ ಪಿಯು ತರಗತಿಗಳು ಶಾಲಾ ಕೊಠಡಿಗಳಲ್ಲಿ ನಡೆಯುವ ಹಿನ್ನೆಲೆಯಲ್ಲಿ ಗ್ರಾಮಗಳ ವ್ಯಾಪ್ತಿಯಲ್ಲಿ ಆಯಾ ಪಿಡಿಒ ಗಳು ಮತ್ತು ಪಟ್ಟಣಗಳವ್ಯಾಪ್ತಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಮೂಲಕಸ್ವತ್ಛತೆ ಮತ್ತು ಸ್ಯಾನಿಟೈಸೇಶನ್‌ ಮಾಡಬೇಕು. ಶಾಲಾಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನುಕೋವಿಡ್‌ ತಪಾಸಣೆ ಮಾಡಿಸಬೇಕು. ಈ ಬಗ್ಗೆಕೋಡಿಂಗ್‌ ಆಧಾರದ ಮೇಲೆ ದಾಖಲಿಸಬೇಕು.ಎಸ್ಸೆಸ್ಸೆಲ್ಸಿ ಹಾಗೂ ವಿದ್ಯಾಗಮ ವಿದ್ಯಾರ್ಥಿಗೆ ಎಕ್ಸ್-ಎಸ್‌ ಮತ್ತು ಶಿಕ್ಷಕರಿಗೆ ಎಕ್ಸ್‌-ಟಿ ಹಾಗೂ ಪಿಯು ವಿದ್ಯಾರ್ಥಿಗೆ ರೋಮನ್‌ ಸಂಖ್ಯೆ 12 ಹಾಗೂ ಶಿಕ್ಷಕರಿಗೆ ರೋಮನ್‌ ಸಂಖ್ಯೆ 12-ಟಿ ಎಂದು ಕೋಡ್‌ ನೀಡುವಂತೆ ನಿರ್ದೇಶನ ನೀಡಿದರು.

ಜಿಲ್ಲೆಯ ಎಲ್ಲ ಶಾಲಾ ಕಾಲೇಜುಗಳ ಶಿಕ್ಷಕರುಕಡ್ಡಾಯವಾಗಿ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ತಪಾಸಣೆ ನಡೆಸಿಕೊಂಡುಕರ್ತವ್ಯಕ್ಕೆ ಹಾಜರಾಗಬೇಕು. ಅದರಂತೆ ಸಮಾಜಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳಿಂದ ನಡೆಯುವ ವಸತಿ ನಿಲಯಗಳವಿದ್ಯಾರ್ಥಿಗಳಿಗೆ ಆಯಾ ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ಕೋವಿಡ್‌ ತಪಾಸಣೆ ನಡೆಸಬೇಕು. ನಂತರವೇ ಪ್ರವೇಶ ನೀಡಬೇಕು. ಆರೋಗ್ಯತಪಾಸಣೆಗೆ ತಪಾಸಣಾ ತಂಡಗಳನ್ನು ನಿಯೋಜಿಸಿಆರೋಗ್ಯ ಪರಿಶೀಲನೆ ನಡೆಸಬೇಕು ಎಂದರು.

ವಿದ್ಯಾಗಮ ತರಗತಿಯ ಕೋವಿಡ್‌-19 ಲಕ್ಷಣ ಇರುವ ವಿದ್ಯಾರ್ಥಿಗಳಿಗೆ ಮಾತ್ರ ತಪಾಸಣೆಗೆಒಳಪಡಿಸಬೇಕು. ಮಾರ್ಗಸೂಚಿ ಅನ್ವಯ ಪ್ರತಿ 10 ವಿದ್ಯಾರ್ಥಿಗಳ ಮೇಲೆ ನಿಗಾ ಇಡಲು ಮಾನಿಟರ್‌ ಆಗಿಶಿಕ್ಷಕರನ್ನು ಗುರುತಿಸಬೇಕು ಎಂದು ಸೂಚಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಿಕ್ಷಕರನ್ನು ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳೊಂದಿಗೆ ಸಂಪರ್ಕ ಸಾಧಿಸಿ ಆರೋಗ್ಯತಪಾಸಣೆಗೆ ಒಳಪಡಿಸಬೇಕು ಎಂದು ಸೂಚಿಸಿದರು.

Advertisement

ಕೋವಿಡ್‌ ಸೋಂಕಿನ ಪಾಸಿಟಿವ್‌ ಹಾಗೂ ನೆಗೆಟಿವ್‌ ತಪಾಸಣೆಗೆ ಸಂಬಂಧಿ ಸಿದಂತೆ ಸೂಕ್ತ ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು. ಶಾಲಾ ವಾಹನಗಳ ಮೂಲಕ ಬರುವ ವಿದ್ಯಾರ್ಥಿಗಳಿಗೆಮಾರ್ಗಸೂಚಿ ಅನ್ವಯ ಮುಂಜಾಗ್ರತೆಯೊಂದಿಗೆ ಕರೆತರುವ ವ್ಯವಸ್ಥೆ ಮಾಡಿಕೊಳ್ಳಬೇಕು. ಬಸ್‌ಗಳಲ್ಲಿ ಕೂಡ ಭೌತಿಕ ಅಂತರಕ್ಕಾಗಿ ಒಟ್ಟು ಆಸನ ಸಾಮರ್ಥ್ಯದ ಶೇ. 50 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಬೇಕು. ಪ್ರತಿ ದಿನ ಬಸ್‌ನ್ನು ಸ್ಯಾನಿಟೈಸ್‌ ಮಾಡಿ ಮರು ದಿನದ ಪ್ರಯಾಣಕ್ಕೆ ಸಜ್ಜುಗೊಳಿಸಬೇಕು ಎಂದು ಶಾಲಾ ಮುಖ್ಯಸ್ಥರಿಗೆ ಸೂಚಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಜಿಲ್ಲೆಯ ಶಾಲೆಗಳ ಪ್ರತಿ ಮಗುವನ್ನೂ ಥರ್ಮಲ್‌ ಸ್ಕ್ರಿನಿಂಗ್‌ ಮೂಲಕ ಪರೀಕ್ಷಿಸಿ ದಾಖಲಿಸಬೇಕು. ಪ್ರತಿ ವಿದ್ಯಾರ್ಥಿ ಮಾಸ್ಕ್ ಧರಿಸುವಂತೆ ನೋಡಿಕೊಳ್ಳಬೇಕು. ಭೌತಿಕ ಅಂತರ ಕಾಪಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಹೊಸೂರ ಜಿಲ್ಲೆಯಲ್ಲಿ ಶಾಲೆ ಆರಂಭಿಸುವ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಪ್ರತಿ ದಿನ 45 ನಿಮಿಷಗಳ 3 ಅವ ಧಿಗಳಂತೆ ಎಸ್ಸೆಸ್ಸೆಲ್ಸಿತರಗತಿಗಳು ಸೋಮವಾರದಿಂದ ಶನಿವಾರದವರೆಗೆಬೆಳಗ್ಗೆ 10ರಿಂದ 12:30ರವರೆಗೆ ನಡೆಸಲಾಗುತ್ತದೆ.ಪ್ರಾಥಮಿಕ ಶಾಲೆಗಳಲ್ಲಿ 6 ಮತ್ತು 7 ತರಗತಿ ಇರುವ ಶಾಲೆಗಳ ವಿದ್ಯಾಗಮ ವೇಳಾಪಟ್ಟಿ ಅನ್ವಯದಬೆಳಗ್ಗೆ 10ರಿಂದ 12:30ರವರೆಗೆ ಹಾಗೂ ಮಧ್ಯಾಹ್ನ 2ರಿಂದ 4:30ರವರೆಗೆ ನಡೆಯಲಿವೆ. 6ನೇ ತರಗತಿ ಸೋಮವಾರ, ಬುಧವಾರ, ಶುಕ್ರವಾರ ಹಾಗೂ 7ನೇತರಗತಿ ಮಂಗಳವಾರ, ಬುಧವಾರ, ಶನಿವಾರ ಪಾಠ ನಡೆಯಲಿವೆ ಎಂದು ವಿವರಿಸಿದರು.

ಪ್ರಾಥಮಿಕ ಶಾಲೆಗಳಲ್ಲಿ 6 ಮತ್ತು 8ನೇ ತರಗತಿಇರುವ ಶಾಲೆಗಳ ವಿದ್ಯಾಗಮ ವೇಳಾಪಟ್ಟಿಯನ್ವಯಬೆಳಗ್ಗೆ 10ರಿಂದ 12:30ರವರೆಗೆ ಹಾಗೂ ಮಧ್ಯಾಹ್ನ 2ರಿಂದ 4:30ರವರೆಗೆ ನಡೆಯಲಿವೆ. 6ನೇ ತರಗತಿಸೋಮವಾರ, ಗುರುವಾರ ಹಾಗೂ 7ನೇ ತರಗತಿಮಂಗಳವಾರ, ಶುಕ್ರವಾರ ನಡೆಯಲಿವೆ. 8ನೇ ತರಗತಿ ಬುಧವಾರ, ಶನಿವಾರ ನಡೆಯಲಿವೆ ಎಂದು ವಿವರಿಸಿದರು.

ಪ್ರಾಥಮಿಕ ಶಾಲೆಗಳಲ್ಲಿ 8 ಮತ್ತು 9ನೇ ತರಗತಿಇರುವ ಶಾಲೆಗಳ ವಿದ್ಯಾಗಮ ವೇಳಾಪಟ್ಟಿ ಅನ್ವಯಬೆಳಗ್ಗೆ 10ರಿಂದ 12:30ರವರೆಗೆ ಹಾಗೂ ಮಧ್ಯಾಹ್ನ2ರಿಂದ 4:30 ರವರೆಗೆ ನಡೆಯಲಿವೆ. 9ನೇ ತರಗತಿಸೋಮವಾರ, ಬುಧವಾರ, ಶುಕ್ರವಾರ ಹಾಗೂ 8ನೇತರಗತಿ ಮಂಗಳವಾರ, ಗುರುವಾರ ನಡೆಯಲಿವೆ. ಎಸ್ಸೆಸ್ಸೆಲ್ಸಿ ತರಗತಿಗಳು ಸೋಮವಾರದಿಂದ

ಶನಿವಾರದವರೆಗೆ ಪ್ರತಿದಿನ ಬೆಳಗ್ಗೆ 10ರಿಂದ12:30ರವರೆಗೆ ನಡೆಯಲಿವೆ ಎಂದು ತಿಳಿಸಿದರು.ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next