ಮುಂಬಯಿ: ಬಾಲಿವುಡ್ ನಲ್ಲಿ ಸಿಲ್ಕ್ ಸ್ಮಿತಾ ಜೀವನ ಆಧಾರಿತ ʼಡರ್ಟಿ ಪಿಕ್ಚರ್ʼ ಸಿನಿಮಾದಲ್ಲಿ ಬೋಲ್ಡ್ ಲುಕ್ಸ್ ನಲ್ಲಿ ಕಾಣಿಸಿಕೊಂಡು ಸದ್ದು ಮಾಡಿದ್ದ ನಟಿ ವಿದ್ಯಾ ಬಾಲನ್ ಇದೀಗ ಮತ್ತೆ ಸಖತ್ ಬೋಲ್ಡ್ & ಗ್ಲಾಮರಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಸೆಲೆಬ್ರಿಟಿ ಫೋಟೋಗ್ರಾಫರ್ ಆಗಿ ಖ್ಯಾತಿಯಾಗಿರುವ ದಬ್ಬೂ ರತ್ನಾನಿ ವಿದ್ಯಾ ಬಾಲನ್ ಅವರ ಹಾಟ್ ಅವತಾರವನ್ನು ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದಾರೆ.
ಬಾಲಿವುಡ್ ಸೆಲೆಬ್ರಿಟಿ ಗಳ ಫೋಟೋಶೂಟ್ ಗಳನ್ನು ಮಾಡುವ ದಬ್ಬೂ ರತ್ನಾನಿ ವಿದ್ಯಾ ಬಾಲನ್ ಅವರ ಫೋಟೋ ಕ್ಲಿಕ್ಕಿಸಿದ್ದು, ಅರೆ ಬೆತ್ತಲಾಗಿ, ಪೇಪರ್ ವೊಂದನ್ನು ಹಿಡಿದುಕೊಂಡು ಕೂತಿರುವ ವಿದ್ಯಾ ಬಾಲನ್ 44 ರ ವಯಸ್ಸಿನಲ್ಲೂ ಪಡ್ಡೆ ಹುಡುಗರ ಕಣ್ಮನ ಸೆಳೆದಿದ್ದಾರೆ. ಕೈಯಲ್ಲೊಂದು ಪೇಪರ್, ಕಪ್ ಹಿಡಿದು ಚೇರ್ ಮೇಲೆ ವಿದ್ಯಾ ಕೂತಿದ್ದಾರೆ. ಸದ್ಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಹವಾ ಎಬ್ಬಿಸಿದೆ.
ಇನ್ನೊಂದೆಡೆ ನಟಿಯ ಅವತಾರ ನೋಡಿ ಹತ್ತಾರು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಇದು ರಿಯಲ್ ಫೋಟ್ರೋಗ್ರಾಫಿ ನಾನು ಪ್ರತಿನಿತ್ಯ ಶೌಚಾಲಯದಲ್ಲಿ ಹೀಗೆಯೇ ಬಟ್ಟೆಯಿಲ್ಲದೆ ಪೇಪರ್ ಯೊಂದಿಗೆ ಕೂರುತ್ತೇನೆ ಎಂದು ನೆಟ್ಟಿಗರಿಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಫೋಟೋವನ್ನು ಅತಿಯಾಗಿ ಎಡಿಟ್ ಮಾಡಲಾಗಿದೆ. ಇದರಿಂದ ಫೋಟೋವಿನ ಅಂದವೇ ಹೋಗಿದೆ ಎಂದು ಕಮೆಂಟ್ ಮಾಡಿದ್ದಾರೆ.