Advertisement

ವಿಧಾನಸಭಾ ಕಲಾಪದಲ್ಲಿ ಪ್ರತಿಧ್ವನಿಸಿದ ಚಾಮರಾಜನಗರ ಕ್ಷೇತ್ರ ವ್ಯಾಪ್ತಿಯ ಟಿ.ಸಿ ಸಮಸ್ಯೆ

07:04 PM Dec 08, 2020 | sudhir |

ಹನೂರು(ಚಾಮರಾಜನಗರ) :ಕ್ಷೇತ್ರ ವ್ಯಾಪ್ತಿಯಲ್ಲಿ ದುರಸ್ಥಿಗೊಳ್ಳುತ್ತಿರುವ ವಿದ್ಯುತ್ ಪರಿವರ್ಧಕಗಳ ಬದಲಾವಣೆ ಸಮಸ್ಯೆ ವಿಧಾನಸಭಾ ಕಲಾಪದಲ್ಲಿ ಪ್ರತಿಧ್ವನಿಸಿದ್ದು ಮುಂಬರುವ ದಿನಗಳಲ್ಲಿ ಸಮರ್ಪಕವಾಗಿ ಪರಿವರ್ಧಕಗಳನ್ನು ಒದಗಿಸಲು ಕ್ರಮವಹಿಸುವುದಾಗಿ ಮುಖ್ಯಮಂತ್ರಿಗಳ ಪರವಾಗಿ ಕಾನೂನು ಸಚಿವ ಜೆ.ಮಾಧುಸ್ವಾಮಿ ಭರವಸೆ ನೀಡಿದ್ದಾರೆ.

Advertisement

ವಿಧಾನಸಭಾ ಕಲಾಪದ ಪ್ರಶ್ನೋತ್ತರ ಕಲಾಪದ ವೇಳೆ ಶಾಸಕ ನರೇಂದ್ರ ಮಾತನಾಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಆಗಿಂದಾಗ್ಗೆ ವಿದ್ಯುತ್ ಪರಿವರ್ಧಕಗಳು ದುರಸ್ಥಿಗೊಳ್ಳುತ್ತಿದ್ದು ಅವುಗಳನ್ನು ಬದಲಾಯಿಸುವಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಇದಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂದು ಪ್ರಶ್ನಿಸಿದ್ದರು. ಇದಕ್ಕೆ ಲಿಖಿತವಾಗಿ ಉತ್ತರಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರು ಟಿ.ಸಿ ದುರಸ್ಥಿಗೊಂಡ 72 ಗಂಟೆಯೊಳಗೆ ಬದಲಾಯಿಸಲು ಕ್ರಮವಹಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ನವೆಂಬರ್ ವೇಳೆಗೆ 218 ಟಿ.ಸಿಗಳು ವಿಫಲಗೊಂಡಿದ್ದು ಅವುಗಳನ್ನು ಬದಲಾಯಿಸಲಾಗಿದೆ.. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಕೊಳ್ಳೇಗಾಲ ಮತ್ತು ಹನೂರು ಉಪವಿಭಾಗಗಳಲ್ಲಿ ಪ್ರತ್ಯೇಕ ದುರಸ್ಥಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದೂ, ಈ ದುರಸ್ಥಿ ಕೇಂದ್ರಗಳಲ್ಲಿ ವಿವಿಧ ಸಾಮಥ್ರ್ಯದ 56 ಪರಿವರ್ಧಕಗಳು ದಾಸ್ತಾನಿವೆ ಎಂದು ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ:ಡಿ.12 ರಿಂದ 14ರ ವರೆಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತಾಧಿಗಳಿಗೆ ಪ್ರವೇಶ ನಿಷೇಧ

ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿದ ಶಾಸಕ ನರೇಂದ್ರ ಟಿ.ಸಿ ವಿಫಗೊಂಡ 72 ಗಂಟೆಯಲ್ಲಿ ಪರಿವರ್ಧಕಗಳನ್ನು ಬದಲಾಯಿಸಲಾಗುತ್ತಿದೆ ಎಂದು ತಪ್ಪು ಮಾಹಿತಿ ನೀಡಿದ್ದಾರೆ. ರಾಜ್ಯದ ಗಡಿಯಂಚಿನ ಗೋಪಿನಾಥಂನಲ್ಲಿ 100ಕೆ.ವಿ ಸಾಮಥ್ರ್ಯದ ಟಿ.ಸಿ ದುರಸ್ಥಿಗೊಂಡು ತಿಂಗಳೇ ಕಳೆದಿದ್ದರು ಇನ್ನೂ ಸಹ ಬದಲಾಯಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸದನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪರವಾಗಿ ಪ್ರತಿಕ್ರ್ರಿಯಿಸಿದ ಕಾನೂನು ಸಚಿವ ಮಾಧುಸ್ವಾಮಿ ಮುಂದಿನ ದಿನಗಳಲ್ಲಿ ಸಮರ್ಪಕವಾಗಿ ಪೂರೈಕೆ ಮಾಡುವ ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next