Advertisement

Vidhana Sabhe: ರಾಹುಲ್‌ ದ್ರಾವಿಡ್‌ಗೆ ವಿಧಾನ ಮಂಡಲದಲ್ಲಿ ಅಭಿನಂದನೆ

11:21 PM Jul 15, 2024 | Team Udayavani |

ವಿಧಾನಸಭೆ: ಟಿ-20 ವಿಶ್ವಕಪ್‌ ಪಂದ್ಯಾವಳಿ ಗೆದ್ದ ಭಾರತ ತಂಡದ ಕೋಚ್‌ ಆಗಿ ಕಾರ್ಯ ನಿರ್ವಹಿಸಿದ್ದ ಕನ್ನಡಿಗ ರಾಹುಲ್‌ ದ್ರಾವಿಡ್‌ ಅವರಿಗೆ ಅಭಿನಂದಿಸುವ ನಿರ್ಣಯವನ್ನು ವಿಧಾನಸಭೆ ತೆಗೆದುಕೊಳ್ಳಬೇಕೆಂದು ಬಿಜೆಪಿ ಶಾಸಕ ಎಸ್‌.ಸುರೇಶ್‌ ಕುಮಾರ್‌ ಆಗ್ರಹಿಸಿದ್ದಾರೆ.

Advertisement

ಕಪ್‌ ಗೆದ್ದ ಭಾರತಕ್ಕೆ ವಿಶ್ವ ಮಾನ್ಯತೆ ಸಿಕ್ಕಿದೆ. ದೇಶದ ಗೌರವ ಹೆಚ್ಚಿದೆ. ಈ ಸಾಧನೆಯ ಹಿಂದೆ ದ್ರಾವಿಡ್‌ ಅವರ ತರಬೇತಿ ಹಾಗೂ ಮಾರ್ಗದರ್ಶನ ಮಹತ್ವದ ಪಾತ್ರ ವಹಿಸಿದೆ. ಹೀಗಾಗಿ ಈ ಸದನ ಒಕ್ಕೊರಲಿನಿಂದ ಅವರನ್ನು ಅಭಿನಂದಿಸುವ ನಿರ್ಣಯ ತೆಗೆದುಕೊಳ್ಳಬೇಕು. ಅದು ನಮ್ಮ ಕರ್ತವ್ಯವೂ ಹೌದು ಎಂದರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಸ್ಪೀಕರ್‌ ಯು.ಟಿ.ಖಾದರ್‌, ಈ ಬಗ್ಗೆ ಈಗಾಗಲೇ ಚರ್ಚಿಸಲಾಗಿದೆ. ದ್ರಾವಿಡ್‌ ಅವರನ್ನು ಅಭಿನಂದಿಸುವ ನಿರ್ಣಯವನ್ನು ತಕ್ಷಣ ಮಂಡಿಸುವುದಕ್ಕೆ ಸೂಚನೆ ನೀಡಲಾಗುವುದು ಎಂದರು.

ಕಲಾಪ ವೀಕ್ಷಿಸಿದ ಛತ್ತೀಸ್‌ಘಡ ಮಾಜಿ ಸಿಎಂ ಭೂಪೇಶ್‌ ಬಘೇಲಾ
ಛತ್ತೀಸ್‌ಘಡದ ಮಾಜಿ ಮುಖ್ಯಮಂತ್ರಿ ಭೂಪೇಶ್‌ ಬಘೇಲಾ ಹಾಗೂ ಕಾಂಗ್ರೆಸ್‌ ಮುಖಂಡರು ಸೋಮವಾರ ವಿಧಾನಸಭೆ ಹಾಗೂ ಪರಿಷತ್‌ ಕಲಾಪದಲ್ಲಿ ಪಾಲ್ಗೊಂಡು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ವೀಕ್ಷಣೆ ನಡೆಸಿದರು. ಅನಂತರ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿ ಚರ್ಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next