Advertisement

ವಿಧಾನ ಪರಿಷತ್ ಚುನಾವಣೆ : ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯ ಪುಟ್ಟಣ್ಣ ಗೆಲುವು

05:20 PM Nov 10, 2020 | sudhir |

ಬೆಂಗಳೂರು: ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಪುಟ್ಟಣ್ಣ ಅವರು 2228  ಮತಗಳ ಅಂತರದಲ್ಲಿ ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ.

Advertisement

ಪುಟ್ಟಣ್ಣ ಅವರು 7335 ಮತಗಳನ್ನು ಪಡೆದರೆ, ಎ.ಪಿ.ರಂಗನಾಥ ಅವರು 5107 ಮತಗಳನ್ನು ಪಡೆದಿದ್ದು, ಪ್ರವೀಣ್ ಪೀಟರ್ ಅವರು 782 ಮತಗಳನ್ನು ಮಾತ್ರ ಪಡೆದಿದ್ದಾರೆ.

ಸತತ ನಾಲ್ಕನೇ ಬಾರಿ ಗೆಲುವನ್ನು ಸಾಧಿಸಿದ್ದ ಪುಟ್ಟಣ್ಣ ಕಳೆದ ಮೂರುವರ್ಷಗಳಿಂದ ಜೆಡಿಎಸ್ ನಲ್ಲಿ ಸ್ಪರ್ದಿಸಿದ್ದರು. ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಇಳಿದಿದ್ದರು.

ಸದ್ಯ ಚುನಾವಣೆಯಲ್ಲಿ ಭಾರಿ ಅಂತರದಿಂದ ಗೆದ್ದ ಪುಟ್ಟಣ್ಣ ಅವರ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.

ಇದನ್ನೂ ಓದಿ:ಕಾಂಗ್ರೆಸ್ ಪಕ್ಷ ಅವನತಿಯತ್ತ ಸಾಗುತ್ತಿದೆ ಎನ್ನಲು ಇಂದಿನ ಫಲಿತಾಂಶ ನಿದರ್ಶನ: ಬಿ.ಸಿ.ಪಾಟೀಲ್

Advertisement

ಈಶಾನ್ಯ ಶಿಕ್ಷಕರ ಕ್ಷೇತ್ರ: ಎರಡನೇ ಸುತ್ತಿನಲ್ಲೂ ಬಿಜೆಪಿಯ ಶಶೀಲ್ ನಮೋಶಿ ಮುನ್ನಡೆ
ಕಲಬುರಗಿ; ಈಶಾನ್ಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಎರಡನೆಯ ಸುತ್ತಿನಲ್ಲಿಯೂ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ ಬಿಜೆಪಿಯ ಶಶೀಲ್ ನಮೋಶಿ ಮುನ್ನಡೆ 1771 ಮತಗಳಿಂದ ನಮೋಶಿ ಮುನ್ನಡೆ ಶಶೀಲ್ ನಮೋಶಿಗೆ 6042 ಮತ ಕಾಂಗ್ರೆಸ್ ನ ಶರಣಪ್ಪ ಮಟ್ಟೂರ ಗೆ 4271 ಮತ ಜೆಡಿಎಸ್ ನ ತಿಮ್ಮಯ್ಯ ಪುರ್ಲೆಗೆ 2353 ಮತಗಳು ಚಂದ್ರಕಾಂತ್ ಸಿಂಗೆ ಗೆ 54 ಮತ ವಾಟಾಳ್ ನಾಗರಾಜ್ ಗೆ 39 ಮತ 1241 ತಿರಸ್ಕೃತ ಮತಗಳು ಒಟ್ಟು ಐವರು ಅಭ್ಯರ್ಥಿಗಳು ಅಖಾಡದಲ್ಲಿ.

ಪಶ್ಚಿಮ ಪದವೀಧರ ಕ್ಷೇತ್ರ: 2ನೆ ಸುತ್ತಿನಲ್ಲೂ ಬಿಜೆಪಿ ಅಭ್ಯರ್ಥಿ ಮುನ್ನಡೆ

ಧಾರವಾಡ : ಪಶ್ಚಿಮ ಪದವೀಧರ ಕ್ಷೇತ್ರದ ಮತ ಎಣಿಕೆ 2ನೆ ಸುತ್ತು ಮುಗಿದಿದ್ದು ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ 13293 ಮತಗಳನ್ನು ಪಡೆದು ಮುನ್ನಡೆ ಕಾಯ್ದುಕೊಂಡಿದ್ದಾರೆ. ಎರಡನೇ ಸುತ್ತು ಪೂರ್ಣಗೊಂಡ ನಂತರ 27998 ಮತಗಳ ಎಣಿಕೆ ಮುಗಿದಿದೆ.

ಕಾಂಗ್ರಸ್ ಬೆಂಬಲಿತ ಆರ್.ಎಂ.ಕುಬೇರಪ್ಪ 6111, ಹಾಗೂ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ 3540 ಹಾಗೂ 4669 ಮತಗಳು ಅಸಿಂಧು ಆಗಿವೆ. ಮೂರನೇ ಸುತ್ತಿನ ಮತ ಎಣಿಕೆ ನಡೆದಿದ್ದು, ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next