Advertisement
ಉತ್ತರಾಧಿಕಾರಿ ಯಾರು?: ಶಿಕಾರಿಪುರದಿಂದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪರ್ಧಿಸುವುದಿಲ್ಲ ಎಂಬ ಮಾತು ಪಕ್ಷದೊಳಗೆ ಕೇಳಿ ಬರುತ್ತಿದೆ. ಹಾಗಾದರೆ ಅವರ ಸ್ಥಾನಕ್ಕೆ ಯಾರು? ಹಿರಿಯ ಪುತ್ರ ಬಿ.ವೈ.ರಾಘವೇಂದ್ರ ಸಂಸದರಾಗಿದ್ದು, ಮತ್ತೂಬ್ಬ ಪುತ್ರ ಬಿ.ವೈ.ವಿಜಯೇಂದ್ರ ಕ್ಷೇತ್ರ ಹುಡುಕಾಟದಲ್ಲಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಸ್ಪರ್ಧೆ ಮಾಡುತ್ತಾರೆಂಬ ಮಾತುಗಳು ಕೇಳಿಬರುತ್ತಿದ್ದರೂ ಕೊನೇ ಗಳಿಗೆಯಲ್ಲಿ ಶಿಕಾರಿಪುರಕ್ಕೆ ಬಂದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ. ವಿಜಯೇಂದ್ರ ಬರದಿದ್ದರೆ ಕಾರ್ಯಕರ್ತರಿಗೆ ಟಿಕೆಟ್ ಕೊಡುತ್ತಾರಾ ಅಥವಾ ಬಿಎಸ್‌ವೈ ಕುಟುಂಬಸ್ಥರನ್ನೇ ಕಣಕ್ಕಿಳಿಸಲಾಗುತ್ತಾ ಎಂಬ ಗುಟ್ಟು ರಟ್ಟಾಗಿಲ್ಲ. ಇನ್ನು 10-20 ಸಾವಿರ ಮತಗಳಿಂದ ಸೋಲು ಕಾಣುತ್ತಿರುವ ಕಾಂಗ್ರೆಸ್‌ಗೆ ಈ ಬಾರಿ ವಿಜಯಲಕ್ಷ್ಮೀ ಒಲಿಯುವುದೆ ನೋಡಬೇಕಿದೆ. ಗೋಣಿ ಮಾಲತೇಶ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಜೆಡಿಎಸ್ ಇಲ್ಲಿ ಲೆಕ್ಕಕಿಲ್ಲ.
Related Articles
Advertisement
ಕೈ ಟಿಕೆಟ್‌ಗೆ ಪೈಪೋಟಿ: ತೀರ್ಥಹಳ್ಳಿ ಕ್ಷೇತ್ರದಲ್ಲಿ ಮೊದಲಿನಿಂದಲೂ ಕಾಂಗ್ರೆಸ್-ಬಿಜೆಪಿ ಅಧಿಕಾರ ಹಿಡಿದಿದೆ. ಬಿಜೆಪಿಯಿಂದ ಹಾಲಿ ಶಾಸಕ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಟಿಕೆಟ್ ಸಿಗಲಿದೆ. ಆದರೆ ಕಾಂಗ್ರೆಸ್‌ನಿಂದ ಯಾರು ಎಂಬ ಗೊಂದಲವಿದೆ. ಮೊದಲು ಹಾವು ಮುಂಗುಸಿಯಂತಿದ್ದ ಕಿಮ್ಮನೆ ರತ್ನಾಕರ್ ಹಾಗೂ ಆರ್.ಎಂ.ಮಂಜು ನಾಥ್‌ಗೌಡ ಈಗ ಕಾಂಗ್ರೆಸ್‌ನಲ್ಲಿದ್ದು ಇಬ್ಬರೂ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್ ಇಲ್ಲಿ ಮತ್ತೆ ಹೊಸ ಅಭ್ಯರ್ಥಿಗೆ ಹುಡುಕಾಟ ನಡೆಸಬೇಕಿದೆ.
ತ್ರಿಕೋನ ಸ್ಪರ್ಧೆ: ಎಸ್‌ಸಿ ಮೀಸಲು ಕ್ಷೇತ್ರವಾದ ಶಿವಮೊಗ್ಗ ಗ್ರಾಮಾಂತರದಲ್ಲಿ ಕಾಂಗ್ರೆಸ್‌ನಿಂದ ಮಾಜಿ ಶಾಸಕ ಕರಿಯಣ್ಣ ಪುತ್ರ ಡಾ| ಶ್ರೀನಿವಾಸ್ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಜೆಡಿಎಸ್‌ನಿಂದ ಶಾರದಾ ಪೂರ್ಯಾನಾಯ್ಕ, ಬಿಜೆಪಿಯ ಹಾಲಿ ಶಾಸಕ ಅಶೋಕ್ ನಾಯ್ಕ ಮತ್ತೆ ಟಿಕೆಟ್ ಸಿಗುವ ವಿಶ್ವಾಸದಲ್ಲಿದ್ದಾರೆ.
ಕಮಲ ಅರಳ್ಳೋದು ಕಷ್ಟ: ಜಿಲ್ಲೆಯ ಏಳರಲ್ಲಿ ಆರು ಕ್ಷೇತ್ರ ಗೆದ್ದಿರುವ ಬಿಜೆಪಿಗೆ ಭದ್ರಾವತಿ ಕ್ಷೇತ್ರ ಒಮ್ಮೆಯೂ ದಕ್ಕಿಲ್ಲ. ಮುಂದಿನ ಬಾರಿಯೂ ಗೆಲ್ಲುವುದಿಲ್ಲ ಎನ್ನುತ್ತಾರೆ ಸ್ವಪಕ್ಷದ ಕಾರ್ಯಕರ್ತರು. ಇಲ್ಲಿ ಅಭ್ಯರ್ಥಿ ಹುಡುಕಾಟದಲ್ಲೇ ಬಿಜೆಪಿ ಸೋತಿದೆ. ಕಾಂಗ್ರೆಸ್-ಜೆಡಿಎಸ್ ನೇರ ಹಣಾಹಣಿ ಹೊಂದಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಬಿ.ಕೆ. ಸಂಗಮೇಶ್‌ಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಶಾರದಾ ಅಪ್ಪಾಜಿಗೌಡ ಅಭ್ಯರ್ಥಿ ಎಂದು ಈಗಾಗಲೇ ಜೆಡಿಎಸ್ ಘೋಷಿಸಿದೆ.
ಕಾಂಗ್ರೆಸ್‌ಗೆ ಬಣ ರಾಜಕೀಯ ಬಿಸಿಜಿಲ್ಲೆಯಲ್ಲಿ ಕಾಂಗ್ರೆಸ್ ಬಣ ರಾಜಕೀಯ ಜೋರಾಗಿದ್ದು ಟಿಕೆಟ್‌ಗಾಗಿ ಈಗಲೇ ಕೋಲ್ಡ್ ವಾರ್ ನಡೆಯುತ್ತಿದೆ. ಶಿವಮೊಗ್ಗ, ತೀರ್ಥಹಳ್ಳಿ, ಸಾಗರದಲ್ಲಿ ಬಣ ಜಗಳಕ್ಕೆ ವಿರಾಮ ಹೇಳಿದರೆ ಗೆಲ್ಲುವ ಅವಕಾಶಗಳು ಹೆಚ್ಚಿವೆ.