Advertisement

ಪರಿಷತ್‌ ಕದನ ಕಣದಲ್ಲಿ ಮಾತಿನ ಛಾಟಿ

11:39 PM Dec 03, 2021 | Team Udayavani |

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಯ ಕಾವು ತೀವ್ರಗೊಂಡಿದೆ. ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ಮೂರೂ ಪಕ್ಷಗಳ ನಾಯಕರು ಪರಸ್ಪರ ಮಾತಿನ ಛಾಟಿ ಬೀಸುತ್ತಿದ್ದಾರೆ. ಆ ಮೂಲಕ ಮತದಾರರ ಓಲೈಕೆಗೆ ಮುಂದಾಗಿದ್ದಾರೆ.

Advertisement

ಲಂಚ ಸಾಬೀತು ಮಾಡಿದರೆ ರಾಜಕೀಯ ಸನ್ಯಾಸ: ಸಿದ್ದು
ಶಿವಮೊಗ್ಗ: ನಾನು ವಿತ್ತ ಸಚಿವನಾಗಿದ್ದಾಗ ಹಣ ಬಿಡುಗಡೆ ಮಾಡಲು ಲಂಚ ತೆಗೆದುಕೊಂಡಿದ್ದೆ ಎಂದು ಯಾರಾದರೂ ಗುತ್ತಿಗೆದಾರ ಹೇಳಿದರೆ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದರು.

ನಗರದಲ್ಲಿ ಜರಗಿದ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದರ ಅವರು, 40 ಪರ್ಸಂಟೇಜ್‌ ಪಾಲು ಕೊಟ್ಟರೆ ಈಗಿನ ಸರಕಾರದಲ್ಲಿ ಹಣ ಬಿಡುಗಡೆ ಯಾಗುತ್ತದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಸರಕಾರಕ್ಕೆ ಧೈರ್ಯವಿದ್ದರೆ ಇದರ ತನಿಖೆಗೆ ಸುಪ್ರೀಂಕೋರ್ಟ್‌ ನ್ಯಾಯಾಧೀಶರ ನೇತೃತ್ವದ ಸಮಿತಿ ರಚಿಸಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ಹಣ ಕೊಟ್ಟವರನ್ನು ತಂದು ನಿಲ್ಲಿಸುವೆ ಈಶ್ವರಪ್ಪ ಎಷ್ಟು ಪರ್ಸಂಟ್‌ ತೆಗೆದುಕೊಳ್ಳುತ್ತಿದ್ದಾರೆ ಎಂದು ಅವರನ್ನೇ ಕೇಳಿ. ಅವರಿಗೆ ಪರ್ಸಂಟೇಜ್‌ ಕೊಟxವರನ್ನು ಕರೆದು ತಂದು ನಿಲ್ಲಿಸುತ್ತೇನೆ ಎಂದರು.

ಪ್ರಮಾಣ ಮಾಡಲು ಹಿಂದೇಟು
ಮೈಸೂರು: ವಿಧಾನ ಪರಿಷತ್ತಿಗೆ ನಡೆಯುತ್ತಿರುವ ಚುನಾವಣೆ ಯಲ್ಲಿ ಹಣ ಹಂಚುವುದಿಲ್ಲವೆಂದು ಪ್ರಮಾಣ ಮಾಡಲು ಮೂರೂ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಿಂದೇಟು ಹಾಕಿದ ಪ್ರಸಂಗ ಶುಕ್ರವಾರ ಇಲ್ಲಿ ನಡೆಯಿತು.

Advertisement

ಜಿಲ್ಲಾ ಪತ್ರಕರ್ತರ ಸಂಘದ ಆಶ್ರಯದಲ್ಲಿ ಜರಗಿದ ಅಭ್ಯರ್ಥಿಗಳ ಜತೆ ನಡೆದ ಸಂವಾದದಲ್ಲಿ, ಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚುವುದಿಲ್ಲವೆಂದು ಪ್ರಮಾಣ ಮಾಡುತ್ತೀರಾ ಎಂದು ಪತ್ರಕರ್ತರು ಪ್ರಶ್ನಿಸಿದರು. ಅದಕ್ಕೆ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳು ಹಿಂದೇಟು ಹಾಕಿದರು. ಆದರೆ, ಕನ್ನಡ ಚಳವಳಿ ನಾಯಕ ವಾಟಾಳ್‌ ನಾಗರಾಜ್‌ ಮಾತ್ರ ಪ್ರಮಾಣ ಮಾಡುತ್ತೇನೆ ಎಂದರು.

ಇದನ್ನೂ ಓದಿ:ರೈತರಲ್ಲಿ ಧೈರ್ಯ ತುಂಬಲು ಅಧಿಕಾರಿಗಳಿಗೆ ಸಚಿವರ ಸೂಚನೆ

ನನಗಿದು ಮೊದಲ ಚುನಾವಣೆ. ಕಾಂಗ್ರೆಸ್‌ ಸಾಧನೆಯನ್ನು ಗುರು ತಿಸಿ ಮತ ನೀಡಿ ಎಂದು ಮನವಿ ಮಾಡುತ್ತಿದ್ದೇನೆ ಎಂದರು ಕಾಂಗ್ರೆಸ್‌ ಅಭ್ಯರ್ಥಿ ಡಾ| ತಿಮ್ಮಯ್ಯ. ಮತ ಬಿಕರಿಗಿಲ್ಲವೆಂಬ ಸಂದೇಶವನ್ನು ಮತ ದಾರರು ನೀಡಲಿ. ನಾಮಪತ್ರ ಸಲ್ಲಿಸುವಾಗ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳುವುದಾಗಿ ಪ್ರಮಾಣ ಮಾಡಿದ್ದು, ಅದರಂತೆ ನಡೆದುಕೊಳ್ಳುತ್ತೇನೆಂದು ಬಿಜೆಪಿಯ ರಘು ಕೌಟಿಲ್ಯ ಹೇಳಿದರು. ಜೆಡಿಎಸ್‌ ಅಭ್ಯರ್ಥಿ ಮಂಜೇಗೌಡ ಮೌನವಾಗಿದ್ದರು.

ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ವಾಗ್ಧಾಳಿ
ಬೆಂಗಳೂರು: ಮಾಜಿ ಪ್ರಧಾನಿಗಳೊಬ್ಬರು ಹಾಲಿ ಪ್ರಧಾನಿಯನ್ನು ಭೇಟಿ ಮಾಡುವುದು ತಪ್ಪೇ? ಸಂಸತ್‌ ಕಲಾಪಕ್ಕೆ ತೆರಳಿದ್ದ ಎಚ್‌.ಡಿ.ದೇವೇಗೌಡರು ಅಲ್ಲಿಯೇ ಇದ್ದ ಪ್ರಧಾನಮಂತ್ರಿಗಳ ಕಚೇರಿಯಲ್ಲಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ¨ªಾರೆ. ಆ ಭೇಟಿ ರಾಜಕೀಯ, ಸಂಕುಚಿತತೆಯ ಎಲ್ಲೆ ಮೀರಿದ್ದು ಎನ್ನುವುದನ್ನು ಆ ಇಬ್ಬರು ನಾಯಕರ ಭೇಟಿಯ ಚಿತ್ರಗಳೇ ಹೇಳುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ಅಸೂಯೆ, ದ್ವೇಷ, ಅಸಹನೆ, ಸರ್ವಾಧಿಕಾರಿ ಮನೋಭಾವದ “ಸಿದ್ದಕಲೆ’ಯ ನಿಪುಣನಿಗೆ ರಾಜಕೀಯದಲ್ಲಿ ವಿರಳವಾಗಿ ಕಾಣುವ ಇಂಥ ಭೇಟಿಗಳನ್ನು ಅರಗಿಸಿಕೊಳ್ಳುವುದು ಹೇಗೆ ಸಾಧ್ಯ ಎಂದು ಸಿದ್ದರಾಮಯ್ಯರನ್ನು ಕುಟುಕಿದ್ದಾರೆ. ರಾಜಕೀಯ ರಕ್ಕಸತನಕ್ಕೆ ಸಿದ್ದರಾಮಯ್ಯ ರಾಜಾಧಿರಾಜ ಎಂದು ಅವರು ಹೇಳಿದರು.

ಸಾಮಾಜಿಕ ನ್ಯಾಯ ಒದಗಿಸಿದ ಜೆಡಿಎಸ್‌ ಇಂದಿಗೂ ಜಾತ್ಯತೀತ ನಿಲುವು ಹೊಂದಿದೆ. ಸಮುದಾಯಗಳನ್ನೇ ಒಡೆದು ಆಳುವ ತಂತ್ರ ಬಳಸಿ ನನಗೆ ಅವಮಾನ ಮಾಡಿದವರಿಗೆ ತಕ್ಕ ಪಾಠ ಕಲಿಸಲು ಒಗ್ಗೂಡಿ ಕೆಲಸ ಮಾಡಿ. ಜೆಡಿಎಸ್‌ ಪಕ್ಷ ಉಳಿಸಿ. ಇದು ಆವೇಶದ ನುಡಿಯಲ್ಲ, ನೋವಿನ ನಿವೇದನೆ.
-ಎಚ್‌.ಡಿ.ದೇವೇಗೌಡ, ಜೆಡಿಎಸ್‌ ವರಿಷ್ಠ

ಗೂಂಡಾಗಳನ್ನು ಕರೆಸಿ ಕಾಂಗ್ರೆಸ್‌ ಪ್ರಚಾರ ನಡೆಸುತ್ತಿದೆ ಎನ್ನುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ತಮ್ಮ ಪಕ್ಷದ ವಿರುದ್ಧವೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಈ ರೀತಿ ಹೇಳಿಕೆ ನೀಡಲು ಅವರಿಗೆ ಯಾವ ನೈತಿಕತೆ ಇದೆ?
-ಸಿದ್ದರಾಮಯ್ಯ, ವಿಪಕ್ಷ ನಾಯಕ

ದೇಶದಲ್ಲೇ ರಾಜ್ಯ ಸರಕಾರ ಅತಿ ಭ್ರಷ್ಟವಾಗಿದೆ. ಈ ಸರಕಾರ ಹೆಣದ ಮೂಲಕವೂ ಹಣ ವಸೂಲಿ ಮಾಡುತ್ತಿದೆ. ಬಿಜೆಪಿ ನಾಯಕರಾದ ಶೋಭಾ ಕರಂದ್ಲಾಜೆ, ಸಿ.ಟಿ. ರವಿ ಕೃಷಿಕರು, ಕಾಫಿ ಬೆಳೆಗಾರರ ಬಗ್ಗೆ ಯಾಕೆ ಮಾತನಾಡುತ್ತಿಲ್ಲ.
- ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ಬೆಂಗಳೂರಿನಿಂದ ಗೂಂಡಾಗಳು ಬೆಳಗಾವಿಗೆ ಬಂದಿದ್ದರೆ ಅಧಿಕಾರಿಗಳು ಏನು ಮಾಡು ತ್ತಿದ್ದಾರೆ? ರಮೇಶ ಜಾರಕಿಹೊಳಿ ಆರೋಪ ನಿರಾಧಾರ. ಬೆಳಗಾವಿಯಲ್ಲಿ ಸಮಸ್ಯೆ ಇರುವುದು ಬಿಜೆಪಿಗೆ ಹೊರತು ಕಾಂಗ್ರೆಸ್‌ಗಲ್ಲ. – –ಹ್ಯಾರಿಸ್‌, ಕಾಂಗ್ರೆಸ್‌ ವೀಕ್ಷಕ

Advertisement

Udayavani is now on Telegram. Click here to join our channel and stay updated with the latest news.

Next