Advertisement

Tirupati temple: ಮಗಳೊಂದಿಗೆ ತಿರುಪತಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಶಾರುಖ್‌ ಖಾನ್

11:51 AM Sep 05, 2023 | Team Udayavani |

ತಿರುಪತಿ: ಕಿಂಗ್‌ ಖಾನ್‌ ಶಾರುಖ್‌ ಖಾನ್‌ ಅವರ ʼಜವಾನ್‌ʼ ರಿಲೀಸ್‌ಗೆ ಇನ್ನು ಎರಡು ದಿನ ಉಳಿದಿದೆ. ಇದೇ ವಾರದಿಂದ ವಿಶ್ವದೆಲ್ಲೆಡೆ ʼಜವಾನ್‌ʼ ಆರ್ಭಟ ಶುರುವಾಗಲಿದೆ.

Advertisement

ಅಟ್ಲಿ ನಿರ್ದೇಶನದ ʼಜವಾನ್‌ʼ ಟ್ರೇಲರ್‌, ಹಾಡುಗಳಿಂದ ಈಗಾಗಲೇ ಗಮನ ಸೆಳೆದಿದೆ. ಶಾರುಖ್‌ ಖಾನ್‌ ಜವಾನ್‌ ಲುಕ್‌ ನಲ್ಲಿ ಮಿಂಚಿರುವುದನ್ನು ನೋಡಲು ಪ್ರೇಕ್ಷಕರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ʼಪಠಾಣ್‌ʼ ಬಳಿಕ ಮತ್ತೆ ಶಾರುಖ್‌ ಬಿಗ್‌ ಸ್ಕ್ರೀನ್‌  ನಲ್ಲಿ ಕಿಂಗ್‌ ಖಾನ್‌ ಕಾಣಿಸಿಕೊಳ್ಳುತ್ತಿದ್ದು, ಬ್ಯಾಕ್‌ ಟು ಬ್ಯಾಕ್‌ ಹಿಟ್‌ ನಿರೀಕ್ಷೆಯಲ್ಲಿ ಶಾರುಖ್‌ ಇದ್ದಾರೆ.

ʼಜವಾನ್‌ʼ ಸಿನಿಮಾದ ಪ್ರಚಾರ ಜೋರಾಗಿ ನಡೆಯುತ್ತಿದೆ. ಇನ್ನೊಂದೆಡೆ ಶಾರುಖ್‌ ಖಾನ್‌ ಸೇರಿದಂತೆ ಸಿನಿಮಾತಂಡ ದೇವಸ್ಥಾನಕ್ಕೆ ಭೇಟಿ ನೀಡುತ್ತಿದೆ. ಇತ್ತೀಚೆಗೆ ಶಾರುಖ್‌ ಖಾನ್‌ ವೈಷ್ಣೋದೇವಿ ದರ್ಶನ ಪಡೆದಿದ್ದರು. ಇದೀಗ ಮತ್ತೊಂದು ಪವಿತ್ರ ದೇಗುಲಕ್ಕೆ ಭೇಟಿ ನೀಡಿದ್ದಾರೆ.

ಶಾರುಖ್‌ ಖಾನ್‌ ತಮ್ಮ ಮಗಳು ಸುಹಾನಾ ಖಾನ್‌ ಅವರೊಂದಿಗೆ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವೇಳೆ ಅವರೊಂದಿಗೆ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಕೂಡ ಜೊತೆಗಿದ್ದರು.

ಇದನ್ನೂ ಓದಿ: Asia Cup 2023; ಮಳೆಯ ಕಾರಣದಿಂದ ಸೂಪರ್ 4, ಫೈನಲ್ ಪಂದ್ಯಗಳು ಸ್ಥಳಾಂತರ

Advertisement

ಇದಲ್ಲದೆ ನಾಯಕ ನಟಿ ನಯನತಾರಾ, ಅವರ ಪತಿ ಮತ್ತು ವಿಘ್ನೇಶ್ ಶಿವನ್ ಶಾರುಖ್‌ ಜೊತೆ ತಿರುಪತಿಗೆ ಭೇಟಿ ನೀಡಿದ್ದಾರೆ.

ಶಾರುಖ್‌ ಖಾನ್‌ ದೇವಸ್ಥಾನದ ಭೇಟಿಯ ವೇಳೆ ಅಭಿಮಾನಿಗಳತ್ತ ಕೈಬೀಸಿ, ಅವರನ್ನು ಖುಷಿಯಾಗಿಸಿದ್ದಾರೆ. ತಿರುಪತಿ ಭೇಟಿ ವೇಳಗಿನ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

‘ಜವಾನ್’ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಇದೇ ಸೆ.7 ರಂದು ತೆರೆ ಕಾಣಲಿದೆ. ಶಾರುಖ್ ಖಾನ್ ಜೊತೆಗೆ ವಿಜಯ್ ಸೇತುಪತಿ, ನಯನತಾರಾ, ಸನ್ಯಾ ಮಲ್ಹೋತ್ರಾ ಮತ್ತು ಪ್ರಿಯಾಮಣಿ ನಟಿಸಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next