Advertisement

ಯತ್ನಾಳ ಪೋಟೋ ಇರಿಸಿ ಜಿಗಜಿಣಗಿಗೆ ಮತ ಹಾಕಿದ ವಿಡಿಯೋ ವೈರಲ್

12:40 PM Oct 10, 2019 | Mithun PG |

ವಿಜಯಪುರ: ಯತ್ನಾಳ್ ಗೆ  ತಲೆಕೆಟ್ಟಿದೆ ಎಂದು ಸಂಸದ ರಮೇಶ ಜಿಗಜಿಣಗಿ ತಿರುಗೇಟು ನೀಡಿದ ಬೆನ್ನಲ್ಲೇ ಲೋಕಸಭೆ ಚುನಾವಣೆಯಲ್ಲಿ ಯತ್ನಾಳ ಫೋಟೋ ಇರಿಸಿ ಜಿಗಜಿಣಗಿಗೆ ಮತಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

ನೆರೆ ಪರಿಹಾರಕ್ಕೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವಲ್ಲಿ ರಾಜ್ಯದ ಸಂಸದರು ವಿಫಲವಾಗಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗುಡುಗಿದ್ದರು. ಇದರ ಬೆನ್ನಲ್ಲೇ ಸಂಸದ ರಮೇಶ ಜಿಗಜಿಣಗಿ ಅವರು ಬಸನಗೌಡ ಪಾಟೀಲ ಯತ್ನಾಳಗೆ ತೆಲೆ ಕೆಟ್ಡಿದೆ ಎಂದು  ಟೀಕಾ ಪ್ರಹಾರ ನಡೆಸಿದ್ದರು.

ಆಶ್ಚರ್ಯವೆಂದರೇ ಯತ್ನಾಳ ಬೆಂಬಲಿಗರು ಲೋಕಸಭೆ ಚುನಾವಣೆ ಸಂದರ್ಭದಲ್ಲಿ  ಮತಯಂತ್ರದಲ್ಲಿದ್ದ ಜಿಗಜಿಣಗಿ ಫೋಟೋ ಮೇಲೆ ಯತ್ನಾಳ ಅವರ ಪೋಟೋ ಇರಿಸಿ ಮತ ಚಲಾಯಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next