Advertisement

Video viral; ಗಾಂಜಾ ಮತ್ತಿನಲ್ಲಿ ಯುವತಿಯರು: ಮೈಸೂರು SP ಸ್ಪಷ್ಟನೆ

08:44 PM Aug 10, 2023 | Team Udayavani |

ಮೈಸೂರು: ಜಿಲ್ಲೆಯ ಕೃಷಿ ಭೂಮಿಯಲ್ಲಿ ಯುವಕ-ಯುವತಿಯರ ಗುಂಪು ಮಾದಕ ವ್ಯಸನದ ಸ್ಥಿತಿಯಲ್ಲಿದ್ದ ಫೋಟೋಗಳು ಮತ್ತು ವಿಡಿಯೋ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು,ಈ ಕುರಿತು ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಸ್ಪಷ್ಟನೆ ನೀಡಿದ್ದಾರೆ.

Advertisement

”ಕರ್ನಾಟಕ ಕೇರಳ ಗಡಿಭಾಗದಲ್ಲಿ ಗಾಂಜಾ ಮತ್ತಿನಲ್ಲಿ ಯುವತಿಯರು ಎಂಬ ವಿಡಿಯೋಗೆ ಸಂಬಂಧಿಸಿದಂತೆ. ದಿನಾಂಕ.05.02.2023 ರಲ್ಲಿ ಕೇರಳದ ವೈನಾಡು ಜಿಲ್ಲೆಯ ಪುಲಪಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ . ಇದು ಫೆಬ್ರವರಿ 2023 ರಲ್ಲಿ ನಡೆದ ವಿಡಿಯೋ ಆಗಿರುತ್ತದೆ” ಎಂದು ಸ್ಪಷ್ಟನೆಯನ್ನು ಟ್ವೀಟ್ ಮಾಡಿದ್ದಾರೆ.

ವಿಡಿಯೋದಲ್ಲಿ, ಗುಂಪಿನಲ್ಲಿ ನಶೆಯಲ್ಲಿದ್ದ ಒಬ್ಬ ಹುಡುಗಿ ನಿಯಂತ್ರಣ ಕಳೆದುಕೊಂಡು ನೆಲದ ಮೇಲೆ ಉರುಳುತ್ತಿರುವುದು ಕಂಡು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next