Advertisement
ಘಟನೆ ವಿವರ : ಜೂನ್ 25 ರಂದು ಮೆಕ್ಸಿಕೋದ ಮಾಂಟೆರ್ರಿಯಲ್ಲಿ ಇರುವ ಅಮ್ಯೂಸ್ ಮೆಂಟ್ ಪಾರ್ಕ್ ವೊಂದಕ್ಕೆ ಪೋಷಕರೊಬ್ಬರು ತನ್ನ ಆರು ವರ್ಷದ ಬಾಲಕನನ್ನು ಕರೆದುಕೊಂಡು ಹೋಗಿದ್ದಾರೆ ಈ ಪಾರ್ಕ್ ಒಳಗಡೆ ಕೆಲವೊಂದಷ್ಟು ಆಟಗಳನ್ನು ಆಡಿದ್ದಾರೆ ಬಳಿಕ ಬಾಲಕ ಅಲ್ಲಿರುವ ಜಿಪ್ ಲೈನ್ ನಲ್ಲಿ ಆಟವಾಡಲು ಹೋಗಿದ್ದಾನೆ ಇತ್ತ ಪೋಷಕರು ಬಾಲಕ 40 ಅಡಿ ಎತ್ತರದ ಜಿಪ್ ಲೈನ್ ನಲ್ಲಿ ಹೋಗುವ ವಿಡಿಯೋ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದ್ದಾರೆ ಇನ್ನೇನು ಬಾಲಕ ಈ ಬದಿಯಿಂದ ಇನ್ನೊಂದು ಬದಿಗೆ ತಲುಪಬೇಕು ಎನ್ನುವಷ್ಟರಲ್ಲಿ ಬಾಲಕನಿಗೆ ಕಟ್ಟಿದ ರೋಪ್ ತುಂಡಾಗಿ ಸುಮಾರು 40 ಅಡಿ ಆಳಕ್ಕೆ ಬಿದ್ದಿದ್ದಾನೆ. ಈ ವೇಳೆ ಅಲ್ಲಿದ್ದ ರಕ್ಷಣಾ ಸಿಬ್ಬಂದಿ ಕೂಡಲೇ ಬಾಲಕನ ರಕ್ಷಣೆಗೆ ಧಾವಿಸಿ ಬಾಲಕನನ್ನು ರಕ್ಷಿಸಿದ್ದಾರೆ.
ಅದುಷ್ಟವಷಾತ್ ಬಾಲಕ 40 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದು ಪಾರ್ಕ್ ಒಳಗಡೆ ನಿರ್ಮಿಸಿದ ಕೆರೆಗೆ ಹಾಗಾಗಿ ಬಾಲಕನಿಗೆ ಅಲ್ಪಸ್ವಲ್ಪ ಗಾಯಗಳಾಗಿ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಪಾರ್ಕ್ ವಿರುದ್ಧ ದೂರು:
ಇತ್ತ ಜಿಪ್ ಲೈನ್ ದುರ್ಘಟನೆ ಸಂಭವಿಸುತ್ತಿದ್ದಂತೆ ಪಾರ್ಕ್ ನ ಆಡಳಿತ ಮಂಡಳಿ ಕೂಡಲೇ ಜಿಪ್ ಲೈನ್ ಆಟ ಸ್ಥಗಿತಗೊಳಿಸಿದೆ. ಇತ್ತ ಪೋಷಕರು ಪಾರ್ಕ್ ನಲ್ಲಿರುವ ಜಿಪ್ ಲೈನ್ ರೋಪ್ ಗಳು ಗುಣಮಟ್ಟದಲ್ಲಿ ಇಲ್ಲ ಕಳಪೆ ಗುಣಮಟ್ಟದ ವಸ್ತುಗಳನ್ನು ಇಲ್ಲಿ ಬಳಸಲಾಗಿದೆ ಎಂದು ಆರೋಪಿಸಿದ್ದಾರೆ. ಘಟನೆ ಕುರಿತು ಆಡಳಿತ ಮಂಡಳಿ ತನಿಖೆ ನಡೆಸುವ ಭರವಸೆ ನೀಡಿದ್ದು ತಪಿತಸ್ಥರಿಗೆ ಶಿಕ್ಷಿ ನೀಡುವ ಕುರಿತು ಮಾಹಿತಿ ನೀಡಿದ್ದಾರೆ.
Related Articles
ಪೋಷಕರೇ ಮಕ್ಕಳ ಖುಷಿಗೋಸ್ಕರ ನಡೆಸುವ ಕೆಲವೊಂದು ಆಟಿಕೆಗಳು ಮಕ್ಕಳ ಜೀವಕ್ಕೆ ಸಂಚಕಾರ ತಂದೊಡ್ಡಬಹುದು ಹಾಗಾಗಿ ಕೆಲವೊಂದು ಆಟಿಕೆಗಳ ಕುರಿತು ಪೋಷಕರು ಎಚ್ಚರ ವಹಿಸುವುದು ಅಗತ್ಯವಾಗಿದೆ.
Advertisement
ಇದನ್ನೂ ಓದಿ: President of India Murmu ಭೇಟಿ: ಸ್ಕಂದಗಿರಿ, ನಂದಿಗಿರಿ ಧಾಮಕ್ಕೆ ಪ್ರವಾಸಿಗರಿಗೆ ನಿರ್ಬಂಧ