ಪುಣೆ: ಇಲ್ಲಿನ ರೈಲ್ವೆ ಪ್ಲಾಟ್ ಫಾರ್ಮ್ ನಲ್ಲಿ ಮಲಗಿದ್ದ ಪ್ರಯಾಣಿಕರ ಮೇಲೆ ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ನೀರು ಸುರಿದ ವಿಡಿಯೋ ಒಂದು ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್ ಅಧಿಕಾರಿಯ ಕಾರ್ಯಕ್ಕೆ ಪರ ವಿರೋಧಗಳು ವ್ಯಕ್ತವಾಗಿದೆ.
ರೂಪೆನ್ ಚೌಧರಿ ಅವರು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಪುಣೆ ರೈಲ್ವೆ ನಿಲ್ದಾಣದ ಪ್ಲಾಟ್ ಫಾರ್ಮ್ ನಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಮಂದಿ ಮಲಗಿರುವುದು ಕಂಡು ಬರುತ್ತದೆ ಈ ವೇಳೆ ಅಲ್ಲಿಗೆ ಬಂದ ರೈಲ್ವೆ ಪೊಲೀಸ್ ಬಾಟಲಿಯಲ್ಲಿ ನೀರು ತುಂಬಿ ತಂದು ಅಲ್ಲಿ ಮಲಗಿದ್ದವರ ಮುಖಕ್ಕೆ ನೀರು ಸುರಿದು ಎಬ್ಬಿಸಿದ್ದಾರೆ.
ಈ ವಿಡಿಯೋ ನೋಡಿದ ಕೆಲವಷ್ಟು ಮಂದಿ ಪೊಲೀಸ್ ಅಧಿಕಾರಿಯ ವಿರುದ್ಧ ಕಿಡಿಕಾರಿದ್ದಾರೆ ಅಲ್ಲದೆ ಕೆಲವೊಂದಷ್ಟು ಮಂದಿ ಪೊಲೀಸ್ ಅಧಿಕಾರಿಯ ಕೆಲಸಕ್ಕೆ ಭೇಷ್ ಎಂದಿದ್ದಾರೆ.
ರೈಲ್ವೆ ನಿಲ್ದಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಬರುತ್ತಿದ್ದು ಇತ್ತ ಪ್ಲಾಟ್ ಫಾರ್ಮ್ ನಲ್ಲಿ ಮಲಗಿದರೆ ಇತರ ಪ್ರಯಾಣಿಕರು ಆಚೆ ಈಚೆ ತೆರಳಲು ತೊಂದರೆಯಾಗುತ್ತದೆ ಅಲ್ಲದೆ ಬೇರೆ ಏನಾದರು ಅನಾಹುತ ಸಂಭವಿಸಿದರೆ ಪೊಲೀಸ್ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ ಇದನ್ನೆಲ್ಲವನ್ನು ಗಮನಿಸಿದರೆ ಪೊಲೀಸ್ ಅಧಿಕಾರಿ ಮಾಡಿರುವ ಕಾರ್ಯ ಉತ್ತಮ ಆದರೆ ಅದಕ್ಕೆ ನೀರು ಸುರಿದಿರುವುದು ಮಾತ್ರ ಸರಿಯಲ್ಲ ಎಂದು ಕೆಲವೊಂದಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ.
ಇನ್ನೊಂದಷ್ಟು ಮಂದಿ ರೈಲ್ವೆ ನಿಲ್ದಾಣದಲ್ಲಿ ವಿಶ್ರಾಂತಿ ಕೊಠಡಿಗಳನ್ನು ಜಾಸ್ತಿ ಮಾಡಿ, ಪ್ರಯಾಣಿಕರು ರೈಲಿಗಾಗಿ ನಿಲ್ದಾಣಕ್ಕೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಬಂದೂರುತ್ತಾರೆ ಆಗ ಅವರಿಗೆ ವಿಶ್ರಾಂತಿ ಪಡೆಯಲು ವಿಶ್ರಾಂತಿ ಕೊಠಡಿಗಳೇ ಇರುವುದಿಲ್ಲ ಹೀಗಿರುವಾಗ ಪ್ರಯಾಣಿಕರು ವಿಶ್ರಾಂತಿ ಪಡೆಯುವುದಾದರೂ ಎಲ್ಲಿ ಎಂದು ಪೊಲೀಸ್ ಅಧಿಕಾರಿಯ ವಿರುದ್ಧ ಟೀಕೆ ಮಾಡಿದ್ದಾರೆ ಅಲ್ಲದೆ, ಮಲಗಿರುವವರನ್ನು ನೀರು ಸುರಿದು ಎಬ್ಬಿಸುವುದು ಸರಿಯಲ್ಲ, ಪೊಲೀಸ್ ಅಧಿಕಾರಿಗೆ ತಕ್ಕ ಶಿಕ್ಷೆ ಆಗಬೇಕೆಂದು ಕೆಲವೊಂದಷ್ಟು ಮಂದಿ ಟ್ವೀಟ್ ಮಾಡಿದ್ದಾರೆ.
ಏನೇ ಆದರೂ ಅವರವರ ಜವಾಬ್ದಾರಿ ಅಂತ ಬಂದಾಗ ಎಲ್ಲರೂ ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗುತ್ತದೆ…