ವಾಷಿಂಗ್ಟನ್: ಪೊಲೀಸ್ ದೌರ್ಜನ್ಯದಿಂದ ಮೃತಪಟ್ಟ ಜಾರ್ಜ್ ಫ್ಲಾಯ್ಡ ಗೌರವಾರ್ಥ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಪ್‌ಲೋಡ್ ಮಾಡಿದ್ದ ವಿಡಿಯೋ ಒಂದನ್ನು ಟ್ವಿಟರ್ ತೆಗೆದುಹಾಕಿದೆ. ಫ್ಲಾಯ್ಡ ಹತ್ಯೆಗೆ ಪ್ರತೀಕಾ ರವಾಗಿ 10 ದಿನಗಳಿಂದ ನಡೆಯುತ್ತಿ ರುವ ಹಿಂಸಾತ್ಮಕ ಪ್ರತಿಭಟನೆಯಿಂದಾಗಿ ಸಂಪೂರ್ಣ ಅಮೆ ರಿಕವೇ ಹೊತ್ತಿ ಉರಿಯುತ್ತಿದೆ. ಆರಂಭದಲ್ಲಿ ಪ್ರತಿ ಭಟನೆ ನಿಯಂತ್ರಿಸಲು ಬೆದರಿಕೆ ತಂತ್ರ ಅನುಸರಿಸಿದ್ದ ಟ್ರಂಪ್, ಒಂದೆರಡು ದಿನಗಳಿಂದ ಮೃದು ಧೋರಣೆ ತಳೆದಿದ್ದಾರೆ. ಜೂ.3ರಂದು ಫ್ಲಾಯ್ಡಗೆ ಗೌರವ ಸೂಚಿ ಸುವ 3 ನಿಮಿಷ 40 ಸೆಕೆಂಡುಗಳ ವಿಡಿಯೋ ಒಂದನ್ನು ಟ್ವಿಟರ್‌ಗೆ ಅಪ್‌ಲೋಡ್ ಮಾಡಿದ್ದರು. ಆದರೆ ಕಾಪಿ ರೈಟ್ ಸಮಸ್ಯೆಯಿಂದಾಗಿ ಟ್ವಿಟರ್ ಅದನ್ನು ತೆಗೆದು ಹಾಕಿದೆ. ಆದರೆ ವಿಡಿಯೋ ಯುಟ್ಯೂಬ್ ನಲ್ಲಿದ್ದು, 60,000 ಮಂದಿ ವೀಕ್ಷಿಸಿದ್ದಾರೆ. ಅದರಲ್ಲಿನ ವಿಷಯ, ದೃಶ್ಯಗಳ ಮೇಲೆ ಹಕ್ಕು ಹೊಂದಿರುವ ವ್ಯಕ್ತಿ ಅಥವಾ ಸಂಸ್ಥೆ ಪ್ರತಿನಿಧಿಯಿಂದ ನಮಗೆ ಕಾಪಿರೈಟ್‌ಗೆ ಸಂಬಂಧಿಸಿದಂತೆ ದೂರು ಬಂದ ಹಿನ್ನೆಲೆಯಲ್ಲಿ ವಿಡಿಯೋವನ್ನು ತೆಗೆದಿರುವು ದಾಗಿ ಟ್ವಿಟರ್ ಸ್ಪಷ್ಟಪಡಿಸಿದೆ.
ವೃದ್ಧನ ತಳ್ಳಿದರು: ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹೊರಟಿದ್ದ ಪೊಲೀಸರು ಎದುರಿಗೆ ಬಂದ 75 ವರ್ಷದ ವೃದ್ಧನನ್ನು ತಳ್ಳಿ ನೆಲಕ್ಕುರು ಳಿಸಿದ್ದರಿಂದ ಆತನ ತಲೆ ಒಡೆದು ರಕ್ತ ಬಂದ ಘಟನೆ ನ್ಯೂಯಾರ್ಕ್ ನಗರದಲ್ಲಿ ಗುರುವಾರ ನಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದ್ದು, ಇಬ್ಬರು ಪೊಲೀಸರನ್ನು ವೇತನರಹಿತವಾಗಿ ಅಮಾನತು ಮಾಡಲಾಗಿದೆ.
ಫ್ಲಾಯ್ಡ ಸ್ಮರಣೆ: ಈ ನಡುವೆ ಅಮೆರಿಕದ ಹಲವು ನಗರಗಳಲ್ಲಿ ಪ್ರತಿಭಟನೆ ಮುಂದುವರಿದಿದೆ. ಹಿಂಸೆಗೆ ಪ್ರಚೋದನೆ ನೀಡಿದ ಹಿನ್ನೆಲೆಯಲ್ಲಿ ಈವರೆಗೆ 10,000ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸ ಲಾಗಿದೆ. ಗುರುವಾರ ಮಿನ್ನಿಯಾಪೊಲೀಸ್ ನಗರದ ಉದ್ಯಾನದಲ್ಲಿ ಸೇರಿದ ಸೆಲೆಬ್ರಿಟಿಗಳು, ಸಂಗೀತಗಾ ರರು ಮತ್ತು ರಾಜಕೀಯ ಮುಖಂಡರು, ಜಾರ್ಜ್ ಫ್ಲಾಯ್ಡನನ್ನು ಸ್ಮರಿಸಿದ್ದಾರೆ.