Advertisement

Video post: ‘ವಾಟ್ಸ್‌ ರಾಂಗ್‌ ವಿಥ್‌ ಇಂಡಿಯಾ’ಕ್ಕೆ ತಿರುಗೇಟು

01:21 AM Mar 14, 2024 | Team Udayavani |

ಹೊಸದಿಲ್ಲಿ: ಭಾರತವನ್ನು ಮತ್ತು ಭಾರತೀಯರನ್ನು ಕೆಟ್ಟದಾಗಿ ಬಿಂಬಿ­ಸಲು ಎಕ್ಸ್‌ನಲ್ಲಿ ಕೆಲವರು ಶುರು ಮಾಡಿದ್ದ “ವಾಟ್ಸ್‌ ರಾಂಗ್‌ ವಿದ್‌ ಇಂಡಿಯಾ’ ಟ್ರೆಂಡ್‌ಗೆ ಭಾರತ ತಿರುಗೇಟು ನೀಡಿದೆ. ದೇಶದ ಸಾಧನೆಗಳನ್ನು ಇದೇ ಟ್ರೆಂಡ್‌ನ‌ ಮೂಲಕ ಜಾಲತಾಣ ಗಳಲ್ಲಿ ಪಸರಿಸ­ಲಾಗುತ್ತಿದ್ದು, ಬುಧವಾರ “ವಾಟ್ಸ್‌ ರಾಂಗ್‌ ವಿಥ್‌ ಇಂಡಿಯಾ’ ಟಾಪ್‌ ಟ್ರೆಂಡ್‌ ಆಗಿ ಮಾರ್ಪಾಡಾಗಿದೆ.

Advertisement

ಹೌದು, ಕೆಲವು ಎಕ್ಸ್‌ ಬಳಕೆದಾ ರರು “ವಾಟ್ಸ್‌ ರಾಂಗ್‌ ವಿಥ್‌ ಇಂಡಿಯಾ’ ಎಂಬ ಹ್ಯಾಷ್‌ಟ್ಯಾಗ್‌ ಬಳಸಿ ದೇಶದಲ್ಲಿ ನಡೆದ ಕೆಲವು ಅಹಿಕತರ ಘಟನೆಗಳ ವೀಡಿಯೋಗಳನ್ನು ಪೋಸ್ಟ್‌ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಸರಕಾರದ ಖಾತೆಯಲ್ಲಿ ಭಾರತದ ಸಾಧನೆಗಳನ್ನು ಪಟ್ಟಿ ಮಾಡುತ್ತಾ “ವಾಟ್ಸ್‌ ರಾಂಗ್‌ ವಿಥ್‌ ಇಂಡಿಯಾ’ ಎಂದು ತಿರುಗೇಟು ನೀಡಲಾಗಿದೆ.

ಭಾರತ ಕಡುಬಡತನ ತೊಡೆದುಹಾಕಿದೆ ಎಂದು ಐಎಂಎಫ್ ಹೇಳಿದೆ. ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶ ಭಾರತ. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಯೊಂದಿಗೆ ಈ ಹಿಂದಿನ ಜಿಡಿಪಿ ಬೆಳವ ಣಿಗೆಯ ಅಂದಾಜನ್ನೂ ಭಾರತ ಮೀರಿ ಸುತ್ತಿದೆ ಎಂದು ಐಎಂಎಫ್ ತಿಳಿಸಿದೆ ಎಂಬುದನ್ನು ಪೋಸ್ಟ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next