ಅಸ್ಸಾಂ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶನಿವಾರ) ಬೆಳಗ್ಗೆ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆ ಮತ್ತು ಜೀಪ್ ಸಫಾರಿ ನಡೆಸಿದ್ದಾರೆ.
ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರಧಾನಿ ಅವರ ಮೊದಲ ಭೇಟಿಯಾಗಿದ್ದು ಈ ವೇಳೆ ಸಫಾರಿ ನಡೆಸಿ ಹೊಸ ಅನುಭವ ಪಡೆದುಕೊಂಡರು.
ಅಸ್ಸಾಂ ಮುಖ್ಯಮಂತ್ರಿ ಕಚೇರಿಯ ಹೇಳಿಕೆ ಪ್ರಕಾರ 1957 ರಿಂದ ಯುನೆಸ್ಕೋ ವಿಶ್ವ ಪರಂಪರೆಯ ತಾಣಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿಯಾಗಿದ್ದಾರೆ ಎಂಧು ಹೇಳಲಾಗಿದೆ.
ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ ಮೋದಿ ಅವರು ಮೊದಲು ಆನೆ ಸಫಾರಿ ನಡೆಸಿದರು, ನಂತರ ರಾಷ್ಟ್ರೀಯ ಉದ್ಯಾನವನದ ಸೆಂಟ್ರಲ್ ಕೊಹೊರಾ ವ್ಯಾಪ್ತಿಯಲ್ಲಿರುವ ಮಿಹಿಮುಖ್ ಪ್ರದೇಶದಲ್ಲಿ ಜೀಪ್ ಸಫಾರಿ ನಡೆಸಿದರು. ಈ ವೇಳೆ ಅವರೊಂದಿಗೆ ಉದ್ಯಾನದ ನಿರ್ದೇಶಕಿ ಸೋನಾಲಿ ಘೋಷ್ ಮತ್ತು ಇತರ ಹಿರಿಯ ಅರಣ್ಯ ಅಧಿಕಾರಿಗಳು ಜೊತೆಗಿದ್ದರು.