Advertisement

ಅಣೆಕಟ್ಟಿನ ಮೇಲೆ ಅಶ್ಲೀಲ ವಿಡಿಯೋ :ನಟಿ ಪೂನಂ ಪಾಂಡೆಗೆ ಸಂಕಷ್ಟ

07:19 PM May 30, 2022 | Team Udayavani |

ಪಣಜಿ: ಕಳೆದ ಸುಮಾರು ಒಂದೂವರೆ ವರ್ಷದ ಹಿಂದೆ ಚಾಪೋಲಿ ಕಾಣಕೋಣದಲ್ಲಿ ಸರ್ಕಾರಿ ಮಾಲೀಕತ್ವದ ಅಣೆಕಟ್ಟಿನ ಮೇಲೆ ನಗ್ನಾವಸ್ಥೆಯ ಅಶ್ಲೀಲ ವಿಡಿಯೋ ಚಿತ್ರೀಕರಣ ನಡೆಸಿದ ಆರೋಪದ ಅಡಿಯಲ್ಲಿ ವಿವಾದಕ್ಕೆ ಸಿಲುಕಿರುವ ನಟಿ ಪೂನಂ ಪಾಂಡೆ ಈ ಪ್ರಕರಣದಲ್ಲಿ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಕಾಣಕೋಣ ಪೋಲಿಸರು ಕಾಣಕೋಣ ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

Advertisement

ನಟಿ ಪೂನಂ ಪಾಂಡೆ ರವರ ಪತಿ ಸ್ಯಾಮ್ ಬಾಂಬೆ ಕೂಡ ಈ ಪ್ರಕರಣದಲ್ಲಿ ಶಂಕಿತರಾಗಿದ್ದು, ಅಶ್ಲೀಲ ದೃಶ್ಯಗಳನ್ನು ಪ್ರಸಾರ ಮಾಡಿದ ಆರೋಪವಿದೆ.

ತನ್ನ ವಿವಾದಾತ್ಮಕ ಹೇಳಿಕೆಗಳು ಮತ್ತು ಬೋಲ್ಡ್ ಶೂಟ್‍ಗಳಿಂದ ಯಾವಾಗಲೂ ಸುದ್ಧಿಯಲ್ಲಿರುವ ಪೂನಂ ಪಾಂಡೆ ರವರು 2 ನವೆಂಬರ್ 2020 ರಂದು ಗೋವಾದ ಚಾಪೋಲಿ ಅಣೆಕಟ್ಟಿನಲ್ಲಿ ಅಶ್ಲೀಲ ವೀಡಿಯೊ ಚಿತ್ರೀಕರಿಸಿದ್ದಾರೆ. ಇದನ್ನು ಆಕೆಯ ಪತಿ ಸ್ಯಾಮ ರವರು ಚಿತ್ರೀಕರಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಗೋವಾದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

ಕಾಣಕೋಣ ಪೋಲಿಸರು ಪೂನಂ ಪಾಂಡೆ ಮತ್ತು ಪತಿ ಸ್ಯಾಮ್ ರವರನ್ನು ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next