ಗ್ವಾಲಿಯರ್ : ಮಹಿಳೆಯರು ಮನಸ್ಸು ಮಾಡಿದರೆ ಯಾವುದು ಅಸಾಧ್ಯವಲ್ಲ ಎಂಬುದಕ್ಕೆ ಗ್ವಾಲಿಯರ್ ನ ಮಹಿಳೆಯರೇ ಸಾಕ್ಷಿ.. ಹೌದು ಇದಕ್ಕೆ ಪುಷ್ಟಿ ನೀಡುವಂತೆ ಗ್ವಾಲಿಯರ್ ನ ಮಹಿಳೆಯರ ಗುಂಪೊಂದು ಫುಟ್ಬಾಲ್ ಆಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ ಅಲ್ಲದೆ ಭಾರಿ ಮೆಚ್ಚುಗೆಗೂ ಪಾತ್ರವಾಗಿದೆ.
ಗ್ವಾಲಿಯರ್ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಜೂನಿಯರ್ ಚೇಂಬರ್ ಇಂಟರ್‌ನ್ಯಾಷನಲ್‌ನ ಹಿರಿಯ ಸದಸ್ಯರ ಸಂಘವು ಜಂಟಿಯಾಗಿ ಪ್ರಾಯೋಜಿಸಿದ ‘ಗೋಲ್ ಇನ್ ಸಾರೀ’ ಸ್ಪರ್ಧಾ ಕೂಟದಲ್ಲಿ ಮಹಿಳೆಯರ ತಂಡ ಬಣ್ಣ ಬಣ್ಣದ ಸೀರೆಯುಟ್ಟು ಕಾಲಿಗೆ ಶೂ ಧರಿಸಿ ಫುಟ್ ಬಾಲ್ ಆಡಿದ್ದಾರೆ ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು ಅಲ್ಲದೆ ಮಹಿಳೆಯರ ಆಟಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.
ಉತ್ತಮ ಕ್ರೀಡಾಪಟುಗಳಂತೆ ಆಡುತ್ತಿರುವ ಮಹಿಳೆಯರ ವಿಡಿಯೋ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ಎಂಬಂತಿದೆ.